Advertisement

ಇಂದಿರಾ ಕ್ಯಾಂಟೀನ್‌ನಲ್ಲಿ ಶುಚಿತ್ವ ಕಾಪಾಡಿ

09:16 AM Jan 27, 2019 | Team Udayavani |

ಗೌರಿಬಿದನೂರು: ಇಂದಿರಾ ಕ್ಯಾಂಟೀನ್‌ಗಳಲ್ಲಿ ಕಡಿಮೆ ದರದಲ್ಲಿ ಆಹಾರ ಸಿಗುತ್ತದೆ. ಜೊತೆಗೆ ರುಚಿಕರ ಹಾಗೂ ಶುಚಿತ್ವದ ಆಹಾರ ನೀಡಬೇಕೆಂದು ಸಂಸದ ವೀರಪ್ಪಮೊಯ್ಲಿ ಹೇಳಿದರು.

Advertisement

ಗಣರಾಜ್ಯೋತ್ಸವದ ಅಂಗವಾಗಿ ನಗರದಲ್ಲಿನ ಇಂದಿರಾ ಕ್ಯಾಂಟೀನ್‌ಗೆ ಚಾಲನೆ ನೀಡಿದ ನಂತರ ಅನ್ನ ಸಾಂಬರ್‌ ಮತ್ತು ಕೇಸರಿ ಬಾಸ್‌ ಸೇವಿಸಿ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರು ಬಡವರ ಹಸಿವನ್ನು ನೀಗಿಸುವ ಸಲುವಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರು. ಅವುಗಳಲ್ಲಿ ಇಂದಿರಾ ಕ್ಯಾಂಟೀನ್‌ ಸ್ಥಾಪನೆಯು ಉಪಯುಕ್ತ ಮತ್ತು ಜನಪರವಾದ ಕಾರ್ಯಗಳಾಗಿವೆ.

ವಿವಿಧ ಕಾರ್ಯಗಳ ನಿಮಿತ್ತ ನಗರಕ್ಕೆ ಆಗಮಿಸುವ ಗ್ರಾಮೀಣ ಭಾಗದ ಜನತೆ, ಕೂಲಿ ಕಾರ್ಮಿಕರು ಸೇರಿದಂತೆ ಬಡ ಮತ್ತು ಮಧ್ಯಮ ವರ್ಗದ ಜನತೆಗೆ ಇಂದಿರಾ ಕ್ಯಾಂಟೀನ್‌ನಿಂದ ಪ್ರಯೋಜನವಾಗಲಿದೆ.ಅಧಿಕಾರಿಗಳು ಇದರ ಗುಣಮಟ್ಟವನ್ನು ಕಾಪಾಡುವ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಹೇಳಿದರು.

ಕೃಷಿ ಸಚಿವ ಎನ್‌.ಎಚ್.ಶಿವಶಂಕರರೆಡ್ಡಿ ಮಾತನಾಡಿ, ಹಸಿದವನಿಗೆ ಮಾತ್ರ ಅನ್ನದ ಬೆಲೆ ತಿಳಿಯುತ್ತದೆ. ಅಂತಹ ಜನರ ಪಾಲಿಗೆ ಇಂದಿರಾ ಕ್ಯಾಂಟೀನ್‌ ವರದಾನವಾಗಲಿದೆ ಎಂದರು. ಕಾರ್ಯಕ್ರಮದಲ್ಲಿ ಜಿÇ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್‌, ಜಿÇ್ಲಾ ನಗರ ಯೋಜನಾ ಅಭಿವೃದ್ಧಿ ಕೋಶದ ನಿರ್ದೇಶಕ ಎನ್‌.ಭಾಸ್ಕರ್‌, ತಹಶೀಲ್ದಾರ್‌ ಎಚ್.ಶ್ರೀನಿವಾಸ್‌, ನಗರಸಭೆ ಆಯುಕ್ತ ವಿ.ಮುನಿಶ್ಯಾಮಪ್ಪ, ನಗರಸಭೆ ಅಧ್ಯಕ್ಷ ಶಫೀಕ್‌ ಖಾನ್‌, ಮುಖಂಡರಾದ ಕೆ.ಎನ್‌.ಕೇಶವರೆಡ್ಡಿ, ಪ್ರಕಾಶರೆಡ್ಡಿ, ಜಿ.ಬಾಲಾಜಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next