Advertisement

ಮಾನಸಿಕ ಸಮತೋಲನ ಕಾಪಾಡಿಕೊಳ್ಳಿ: ಸ್ವಾಮೀಜಿ

01:43 PM Aug 02, 2017 | |

ದಾವಣಗೆರೆ: ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸುವ ಮೂಲಕ ಎಲ್ಲ ಕ್ಷೇತ್ರದಲ್ಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ತೊಗಟವೀರ ಸಮಾಜದ ಕುಲಗುರು ಶ್ರೀ ದಿವ್ಯಾಜ್ಞಾನಾನಂದ ಸ್ವಾಮೀಜಿ ತಿಳಿಸಿದರು.

Advertisement

ಮಂಗಳವಾರ ತೊಗಟವೀರ ಸಮಾಜದಿಂದ ದಾವಲ್‌ಪೇಟೆಯ ಶ್ರೀ ಚೌಡೇಶ್ವರಿ ದೇವಿಯ 37ನೇ ವರ್ಷದ ಶ್ರಾವಣ ಮಾಸದ ರಥೋತ್ಸವದ ನಿಮಿತ್ತ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಲೌಕಿಕ ಜಗತ್ತಿನಲ್ಲಿ ಜನರು ತಮಗಾಗಿ ಕೆಲ ಸಮಯ ತೆಗೆದಿಡುವ ಪರಿಸ್ಥಿತಿ ಬಂದಿದೆ. ಎಲ್ಲಿ ನೋಡಿದರು ಒತ್ತಡ, ಧಾವಂತದ ಜೀವನ ಕಂಡು ಬರುತ್ತದೆ. ಮಾನಸಿಕ ನೆಮ್ಮದಿ ಕಾಣೆಯಾಗುತ್ತಿದೆ. ಪ್ರತಿಯೊಬ್ಬರೂ ಮಾನಸಿಕ ಸಮತೋಲನ ಕಾಪಾಡಿಕೊಳ್ಳಬೇಕು ಎಂದರು. ಪೂಜೆ, ಧ್ಯಾನದಲ್ಲಿ ತೊಡಗಿದಲ್ಲಿ ತಮ್ಮ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಂಡು ವ್ಯಾಪಾರ, ವಹಿವಾಟು ಮತ್ತು ಇತರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಕೆಲ ಸಮಯ ಮಡದಿ, ಮಕ್ಕಳು ಪೋಷಕರ ಜೊತೆಯಲ್ಲಿ ಕಳೆಯುವುದರಿಂದ ಪರಸ್ಪರ ಪ್ರೀತಿ, ವಾತ್ಸಲ್ಯ ಹೆಚ್ಚಾಗಿ ಒಬ್ಬರ ಮೇಲೊಬ್ಬರಿಗೆ ವಿಶ್ವಾಸ ಮೂಡುವುದು. ಬದುಕು ಸುಂದರವಾಗುವುದು ಎಂದು ತಿಳಿಸಿದರು.

ಜನರು ನಗುನಗುತ ಬಾಳಿದರೆ ಎಂತಹ ಸಮಸ್ಯೆಗಳು ಬಂದರೂ ಬಗೆಹರಿಸಬಹುದಾಗಿದೆ. ವಿದ್ಯಾರ್ಥಿಗಳು ಧ್ಯಾನ ಮಾಡುವುದರಿಂದ ಏಕಾಗ್ರತೆ ಬರುತ್ತದೆ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಬಹುದು ಎಂದು ತಿಳಿಸಿದರು. ಸಮಾಜದ ಮುಖಂಡರಾದ ಡಿ.ಡಿ. ಬಸವರಾಜ್‌, ದೇವಸ್ಥಾನ ಕಮಿಟಿ ಅಧ್ಯಕ್ಷ ಎಲ್‌.ಟಿ. ಜಗನ್ನಾಥ್‌, ಟ್ರಸ್ಟಿ ರಾಮಚಂದ್ರ ಇತರರು ಇದ್ದರು. ಸಾಹಿತ್ಯ ಪ್ರಾರ್ಥಿಸಿದರು. ಜೆ.ಟಿ. ರಂಗಪ್ಪ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next