Advertisement

ಬಾಂಗ್ಲಾದೇಶ ಪ್ರವಾಸಕ್ಕೆ ವಿಂಡೀಸ್‌ ಆಟಗಾರರ ಹಿಂದೇಟು! ಪ್ರಮುಖ ಆಟಗಾರರ ಗೈರು!

03:26 PM Dec 31, 2020 | Team Udayavani |

ಪೋರ್ಟ್‌ ಆಫ್‌ ಸ್ಪೇನ್‌: ಕೋವಿಡ್ ನಡುವೆಯೂ ಇಂಗ್ಲೆಂಡಿಗೆ ಪ್ರವಾಸ ಕೈಗೊಂಡು ಅಂತಾರಾಷ್ಟ್ರೀಯ ಕ್ರಿಕೆಟಿಗೆ ಚಾಲನೆ ನೀಡಿದ ತಂಡವೆಂಬ ಕೀರ್ತಿಗೆ ಪಾತ್ರವಾಗಿದ್ದ ವೆಸ್ಟ್‌ ಇಂಡೀಸ್‌ ತಂಡವೀಗ ಕೋವಿಡ್ ಕಾರಣದಿಂದಾಗಿಯೇ ಸುದ್ದಿಯಾಗಿದೆ. ರೂಪಾಂತರಿತ ಕೋವಿಡ್ ವೈರಸ್‌ ಭೀತಿಯಿಂದ ತಂಡದ ಪ್ರಮುಖ ಆಟಗಾರರು ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲು ಹಿಂದೇಟು ಹಾಕಿದ್ದಾರೆ.

Advertisement

ಟೆಸ್ಟ್‌ ತಂಡದ ನಾಯಕ ಜಾಸನ್‌ ಹೋಲ್ಡರ್‌, ಏಕದಿನ ತಂಡದ ನಾಯಕ ಕೈರನ್‌ ಪೊಲಾರ್ಡ್‌, ಡ್ಯಾರನ್‌ ಬ್ರಾವೊ ಸೇರಿದಂತೆ 12 ಆಟಗಾರರು ರೂಪಾಂತರಿತ ಕೋವಿಡ್ ವೈರಸ್‌ ಭೀತಿ ಮತ್ತು ವೈಯಕ್ತಿಕ ಕಾರಣ ನೀಡಿ ಬಾಂಗ್ಲಾ ಪ್ರವಾಸದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

ಆಟಗಾರರು ತಮ್ಮ ಸುರಕ್ಷತೆ ಬಗ್ಗೆ ಸಮ್ಮತಿ ಇದ್ದರೆ ಮಾತ್ರವೇ ತಂಡಕ್ಕೆ ಸೇರಿಕೊಳ್ಳಬಹುದು. ಹೀಗೆ ಹೊರಗುಳಿದ ಆಟಗಾರರ ಭವಿಷ್ಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದು “ಕ್ರಿಕೆಟ್‌ ವೆಸ್ಟ್‌ ಇಂಡೀಸ್‌’ ಪ್ರಕಟನೆಯಲ್ಲಿ ತಿಳಿಸಿದೆ.

ಹೊಸಬರಿಗೆ ಅವಕಾಶ

ಪ್ರಮುಖ ಆಟಗಾರರ ಗೈರಿನಿಂದಾಗಿ ವಿಂಡೀಸ್‌ ನೂತನ ತಂಡವೊಂದನ್ನು ಪ್ರಕಟಿಸಿದ್ದು, ಹಲವು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದೆ. ಟೆಸ್ಟ್‌ ತಂಡಕ್ಕೆ ಕ್ರೆಗ್‌ ಬ್ರಾತ್‌ವೇಟ್‌ ನಾಯಕರಾಗಿದ್ದು, ಜರ್ಮೈನ್‌ ಬ್ಲ್ಯಾಕ್‌ವುಡ್‌ ಉಪನಾಯಕರಾಗಿದ್ದಾರೆ.

Advertisement

ಇದನ್ನೂ ಓದಿ:ಸ್ಮಿತ್, ಕೊಹ್ಲಿ ಹಿಂದಿಕ್ಕಿ ಟೆಸ್ಟ್ ನಲ್ಲಿ ಅಗ್ರ ಕ್ರಮಾಂಕಕ್ಕೇರಿದ ಕೇನ್ ವಿಲಿಯಮ್ಸನ್

ಏಕದಿನ ತಂಡದ ನಾಯಕತ್ವ ಜಾಸನ್‌ ಮೊಹಮ್ಮದ್‌ ಪಾಲಾಗಿದೆ. ಸುನೀಲ್‌ ಆ್ಯಂಬ್ರಿಸ್‌ಗೆ ಉಪನಾಯಕತ್ವ ನೀಡಲಾಗಿದೆ. ವಿಂಡೀಸ್‌ ತಂಡ ಜ. 10ರಂದು ಢಾಕಾಗೆ ಬಂದು ಕೋವಿಡ್‌-19 ನಿಯಮಾವಳಿಯಯಂತೆ ಕ್ವಾರಂಟೈನ್‌ ನಲ್ಲಿರಲಿದೆ. ಮೊದಲ ಏಕದಿನ ಪಂದ್ಯ ಜ. 20ರಂದು ನಡೆಯಲಿದೆ. ಸರಣಿಯ ಪಂದ್ಯಗಳು ಚಿತ್ತಗಾಂಗ್‌ ಮತ್ತು ಢಾಕಾದಲ್ಲಿ ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next