Advertisement

OTT release: ಪಂಕಜ್‌ ತ್ರಿಪಾಠಿ ʼಮೈ ಅಟಲ್‌ ಹೂಂ’ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

05:21 PM Mar 10, 2024 | Team Udayavani |

ಮುಂಬಯಿ: ಮಾಜಿ ಪ್ರಧಾನಿ, ಬಿಜೆಪಿಯ ಹಿರಿಯ ನಾಯಕ ಅಟಲ್‌ ಬಿಹಾರಿ ವಾಜಪೇಯಿ ಅವರ ಜೀವನ ಚರಿತ್ರೆ ಆಧಾರಿತ ”ಮೈ ಅಟಲ್‌ ಹೂಂ” ಸಿನಿಮಾದ ಓಟಿಟಿ ರಿಲೀಸ್‌ ಡೇಟ್‌ ಹೊರಬಿದ್ದಿದೆ.

Advertisement

ರವಿ ಜಾಧವ್ ನಿರ್ದೇಶನದಲ್ಲಿ ಬಂದ ʼಮೈ ಅಟಲ್‌ ಹೂಂʼ ಜ.19 ರಂದು ಥಿಯೇಟರ್‌ ನಲ್ಲಿ ತೆರೆಕಂಡಿತ್ತು. ತನ್ನ ಟ್ರೇಲರ್‌ ಮೂಲಕ ಸದ್ದು ಮಾಡಿದ್ದ ಸಿನಿಮಾ ಬಾಲಿವುಡ್‌ ನ ಬಹು ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿತ್ತು. ಅಟಲ್‌ ಅವರ ಪಾತ್ರವನ್ನು ಪಂಕಜ್‌ ತ್ರಿಪಾಠಿ ಅವರು ನಿಭಾಯಿಸಿದ್ದರು.

ನಿರೀಕ್ಷೆ ಹುಟ್ಟಿಸಿದ್ದಷ್ಟು ಸಿನಿಮಾ ಅಷ್ಟಾಗಿ ಪ್ರೇಕ್ಷಕರ ಗೆಲ್ಲುವಲ್ಲಿ ಯಶಸ್ಸಾಗಿಲ್ಲ. ಥಿಯೇಟರ್‌ ನಿಂದ ಬಹುಬೇಗನೇ ಸಿನಿಮಾ ಹೊರಹೋಗಿತ್ತು. ಪಂಕಜ್‌ ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿತ್ತು. ಆದರೆ ಸಿನಿಮಾಕ್ಕೆ ಅಷ್ಟಾಗಿ ರೆಸ್ಪಾನ್ಸ್‌ ಸಿಕ್ಕಿಲ್ಲ.

ಇದೀಗ ಸಿನಿಮಾ ಡಿಜಿಟಲ್ ಪ್ರಿಮಿಯರ್‌ಗೆ ಸಿದ್ದವಾಗಿದೆ. ʼತಯಾರಿ ಶುರು ಮಾಡಿ ಬರ್ತಾ ಇದ್ದಾರೆ ಅಟಲ್‌ ಬಿಹಾರಿʼ ಎಂದು ಪೋಸ್ಟ್ ಹಂಚಿಕೊಂಡು ಮಾ. 14 ರಂದು ಸಿನಿಮಾ ಓಟಿಟಿಗೆ ಬರಲಿದೆ ಎಂದು ʼಜೀ5ʼ ಹೇಳಿದೆ. ‌

ಸಿನಿಮಾದಲ್ಲಿ ಪಿಯೂಷ್ ಮಿಶ್ರಾ, ದಯಾ ಶಂಕರ್ ಪಾಂಡೆ, ರಾಜ ಸೇವಕ್, ಏಕ್ತಾ ಕೌಲ್ ಮುಂತಾದವರು ನಟಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next