ತುಳು, ಕನ್ನಡವನ್ನರಿಯದ ಮುಂಬಯಿಯಲ್ಲೇ ಹುಟ್ಟಿ ಬೆಳೆದು, ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತ ಕರಾವಳಿಯ ಯುವಜನಾಂಗವು ಯಕ್ಷಗಾನದ ಸಂಭಾಷಣೆಯನ್ನು ಇಂಗ್ಲೀಷಲ್ಲಿ ಬರೆದು ಅಭ್ಯಾಸಮಾಡಿ ರಂಗಸ್ಥಳ ಪ್ರವೇಶಿಸಿ ಪ್ರದರ್ಶಿಸಿ ಸೈ ಎನಿಸಿಕೊಂಡರು.
ಮುಂಬಯಿಯ ಮಲಾಡ್ ಶ್ರೀ ವರಮಹಾಲಕ್ಷೀ ಪೂಜಾ ಸಮಿತಿಯ ವರಮಹಾಲಕ್ಷೀ ಪೂಜೆಯ ಪ್ರಯುಕ್ತ ನಾಗೇಶ್ ಪೊಳಲಿಯವರ ನಿರ್ದೇಶನದಲ್ಲಿ ಸಮಿತಿಯ ಸದಸ್ಯರುಗಳು ಮತ್ತು ಶಾಲಾ ಕಾಲೇಜಲ್ಲಿ ಕಲಿಯುತ್ತಿರುವ ಯುವತಿಯರು ಮಹಿಷ ಮರ್ದಿನಿ ಪ್ರಸಂಗವನ್ನು ಪ್ರದರ್ಶಿಸಿದರು. ಶ್ರೀನಿವಾಸ ಸಾಫಲ್ಯ ವಿದ್ಯುನ್ಮಾಲಿಯಾಗಿ, ಸುರೇಂದ್ರ ಶೆಟ್ಟಿ ದೇವೇಂದ್ರನಾಗಿ ಮಿಂಚಿದರೆ, ದೂತನಾಗಿ ಸುಂದರ ಪೂಜಾರಿ, ಹುಲಿಯಾಗಿ ದಿನೇಶ್ ಪೂಜಾರಿ ಅಭಿಯಿಸಿದ್ದಾರೆ.
ಮಹಿಷಾಸುರನ ಪಾತ್ರದಲ್ಲಿ ಸನತ್ ಪೂಜಾರಿ , ಈಶ್ವರನಾಗಿ ಪೂರ್ಣಿಮಾ ಸಾಲ್ವಣರ್, ವಿಷ್ಣು ವಾಗಿ ರತ್ನಾ ದಿನೇಶ್ ಕುಲಾಲ…, ದೇವಿಯಾಗಿ ಪ್ರಣೀತಾ ವರುಣ…,ಮಾಲಿನಿಯಾಗಿ ದಿವ್ಯ ಪೂಜಾರಿ , ಶ್ರೀಮತಿ ಕೆ. ಆಚಾರ್ಯ ಶಂಕಾಸುರನ ಪಾತ್ರದಲ್ಲಿ, ಭಾರತಿ ಆಚಾರ್ಯ ದುರ್ಗಾಸುರನಾಗಿ, ಜಯಲಕ್ಷ್ಮೀ ನಾಯಕ್ ಬಿಡಲಾಸುರನಾಗಿ, ಜಯಂತಿ ಸಾಲ್ಯಾನ್ ಚಾಮರಾಸುರನಾಗಿ, ಚಕ್ಷುರಾಸುರನಾಗಿ ನವೀನ್ ಸಾಲ್ಯಾನ್, ಭಟ್ಟರ ಪಾತ್ರದಲ್ಲಿ ಸೂರಪ್ಪ ಕುಂದರ್, ಭಟ್ಟರ ಹೆಂಡತಿಯಾಗಿ ಪುಷ್ಪಾ ಪೂಜಾರಿ, ಮಾಣಿಯಾಗಿ ಮಾ| ಆದಿತ್ಯ ಅಂಚನ್, ಸೌಮ್ಯಾ ಮೆಂಡನ್ ಸುಪಾರ್ಶ್ವಕ, ಶ್ವೇತ ಪೂಜಾರಿ ಬ್ರಹ್ಮನ ಪಾತ್ರದಲ್ಲಿ, ನಳಿನಿ ಕರ್ಕೇರ ದಿತಿ ದೇವಿಯಾಗಿ, ಶೀಲಾ ಪೂಜಾರಿ ವಿದ್ಯುನ್ಮಾಲಿ ದೂತ, ಲಾಸ್ಯಾ ದಿನೇಶ್ ಕುಲಾಲ್ ವರುಣನ ಪಾತ್ರದಲ್ಲಿ, ದಿಶಾ ಕರ್ಕೇರ ವಾಯು, ಶಿವಾನಿ ಪ್ರಭು ಕುಬೇರ, ರಶ್ಮಿ ಪೂಜಾರಿ ಅಗ್ನಿ, ಸುದೀಪ್ ಪೂಜಾರಿ ಯಕ್ಷನಾಗಿ ಸಮರ್ಥವಾಗಿ ತಮ್ಮ ಪಾತ್ರವನ್ನು ನಿರ್ವಹಿಸಿ ಮೆಚ್ಚುಗೆಗೆ ಪಾತ್ರರಾದರು. ಭಾಗವತರಾಗಿ ಗಣೇಶ್ ಮಯ್ಯ ವರ್ಕಾಡಿ, ಚೆಂಡೆ-ಮದ್ದಳೆ ಯಲ್ಲಿ ದಯಾನಂದ ಶೆಟ್ಟಿಗಾರ್ ಮಿಜಾರ್ ಮತ್ತು ಶ್ರೀಧರ ಎಡಮಲೆ ಸಹಕರಿಸಿದ್ದಾರೆ. ಯಕ್ಷಗಾನದ ಬಗ್ಗೆ ಹೆಚ್ಚೇನೂ ಅರಿವಿರದ ಈ ಯುವ ಕಲಾವಿದರ ಯಶಸ್ವಿ ನಿರ್ವಹಣೆಗೆ ಅವರ ಉತ್ಸಾಹ ಮತ್ತು ಹುಮ್ಮಸ್ಸು ಕಾರಣ.
ಈಶ್ವರ ಎಂ. ಐಲ್