Advertisement

ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಮೇಲೆ ಬೊಲೆರೊ!

09:54 PM Mar 28, 2023 | Team Udayavani |

ಶ್ರೀನಗರ: ಜಮ್ಮುಕಾಶ್ಮೀರದ ಚೆನಾಬ್‌ ನದಿಯ ಮೇಲೆ ನಿರ್ಮಿಸಲಾಗಿರುವ, ವಿಶ್ವದಲ್ಲೇ ಅತಿ ಎತ್ತರದ ರೈಲ್ವೆ ಮೇಲ್ಸೇತುವೆಯ ಪರೀಕ್ಷೆಯನ್ನು ಕೇಂದ್ರ ರೈಲ್ವೆ ಸಚಿವಾಲಯ ಆರಂಭಿಸಿದೆ.

Advertisement

ಮಹೀಂದ್ರಾ ಕಂಪನಿಯ ಬೊಲೆರೊ ವಾಹನದಲ್ಲಿ ಕೆಲವೊಂದು ಮಾರ್ಪಾಡು ಮಾಡಿ, ಈ ರೈಲ್ವೆ ಹಳಿಗಳ ಮೇಲೆ ಸಂಚರಿಸುವಂತೆ ಮಾಡಿರುವುದು ಈ ಪರೀಕ್ಷೆಗಳಲ್ಲಿ ಅತ್ಯಂತ ವಿಶೇಷವೆನಿಸಿದೆ.

ಬೊಲೆರೊದ ನಾಲ್ಕೂ ಚಕ್ರಗಳ ಮಧ್ಯಭಾಗದಲ್ಲಿ ಟ್ರ್ಯಾಕ್‌ ಮೇಲೆ ಚಲಿಸುವಂತೆ ಮಾಡಲು ಅಂತರ ಬಿಡಲಾಗಿದೆ. ಬೊಲೆರೊ ಹಿಂಭಾಗ ಒಂದು ಟ್ರಾಲಿಯನ್ನೂ ಕಟ್ಟಲಾಗಿತ್ತು. ಮಹೀಂದ್ರ ಬೊಲೆರೊ ಇಂತಹ ಎತ್ತರದ ಸೇತುವೆ ಮೇಲೆ ಸಂಚರಿಸಿದ ಮೊದಲ ಎಸ್‌ಯುವಿ ಎನಿಸಿಕೊಂಡಿದೆ. ಈ ಪ್ರಯತ್ನ ಜನರನ್ನು ಅಚ್ಚರಿಗೊಳಪಡಿಸಿದೆ.

359 ಮೀಟರ್‌ ಎತ್ತರದಲ್ಲಿರುವ ಈ ರೈಲ್ವೆ ಸೇತುವೆ, ಕಾಶ್ಮೀರವನ್ನು ಭಾರತದ ಇತರೆ ಭಾಗದೊಂದಿಗೆ ಬೆಸೆಯಲು ನೆರವಾಗುತ್ತದೆ. ಈ ವರ್ಷಾಂತ್ಯದಲ್ಲಿ ಈ ಟ್ರ್ಯಾಕ್‌ ಕಾರ್ಯಾಚರಣೆ ಆರಂಭವಾಗುವ ಸಾಧ್ಯತೆಯಿದೆ. ಸೇತುವೆಯನ್ನು ಅತ್ಯಂತ ಪರಿಸರಸೂಕ್ಷ್ಮ ಪ್ರದೇಶದಲ್ಲಿ ನಿರ್ಮಿಸಲಾಗಿರುವುದರಿಂದ ವಿವಿಧ ರೀತಿಯ ಪರೀಕ್ಷೆಗಳು ಅನಿವಾರ್ಯವೂ ಆಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next