Advertisement

ಮಹಿಂದ್ರಾ ಥಾರ್‌ ಮತ್ತಷ್ಟು ದುಬಾರಿ: ಎಲ್ಲಾ ಮಾದರಿಯ ಕಾರುಗಳ ಬೆಲೆ ಹೆಚ್ಚಿಸಿದ ಮಹಿಂದ್ರಾ

08:02 PM Jul 09, 2021 | Team Udayavani |

ನವದೆಹಲಿ: ದೇಶೀಯ ಕಾರು ಉತ್ಪಾದನಾ ಸಂಸ್ಥೆಯಾದ ಮಹಿಂದ್ರಾ ಆ್ಯಂಡ್‌ ಮಹಿಂದ್ರಾ ಕಂಪನಿ, ತನ್ನ ಎಲ್ಲಾ ಮಾದರಿಯ ಕಾರುಗಳ ಬೆಲೆಯನ್ನು ಹೆಚ್ಚಿಸಿದೆ. ಇದರಿಂದಾಗಿ, ಕಂಪನಿಯ ಪ್ರತಿಷ್ಠಿತ ಉತ್ಪಾದನೆಯಾದ ಥಾರ್‌ ಜೀಪ್‌ನ ಬೆಲೆ ಗರಿಷ್ಠ 1 ಲಕ್ಷ ರೂ. ಏರಿಕೆಯಾಗಿದೆ.

Advertisement

ಥಾರ್‌ನ ಆರಂಭಿಕ ಮಾಡೆಲ್‌ ಬೆಲೆ 42,300 ರೂ.ಗಳಷ್ಟು ಏರಿಕೆಯಾಗಿದ್ದರೆ, ಅದರ ಹೈ-ಎಂಡ್‌ ಮಾದರಿಯ ಬೆಲೆ 1,02,000 ರೂ.ಗಳಷ್ಟು ಹೆಚ್ಚಾಗಿದೆ.

ಮಹಿಂದ್ರಾ ಅಲ್ಟಾರಾಸ್‌ ಜಿ4, ಕೆಯುವಿ 100 ಎನ್‌ಎಕ್ಸ್‌ಟಿ, ಎಕ್ಸ್‌ಯುವಿ 500 ಮಾದರಿಯ ಕಾರುಗಳ ಬೆಲೆಯಲ್ಲಿ ಅಲ್ಪ ಏರಿಕೆಯಾಗಿದ್ದರೆ, ಎಕ್ಸ್‌ಯುವಿ 300 ಕಾರಿನ ವಿವಿಧ ವೇರಿಯಂಟ್‌ಗಳ ಮೇಲೆ 18,970 ರೂ.ಗಳಿಂದ 24,266 ರೂ.ಗಳವರೆಗೆ ಏರಿಕೆಯಾಗಿದೆ. ಮಹಿಂದ್ರಾ ಬೊಲೆರೊ ಬೆಲೆ 21,000 ರೂ.ಗಳಿಂದ 22,600 ರೂ.ನಷ್ಟು ಹೆಚ್ಚಾಗಿದೆ.

ಇದನ್ನೂ ಓದಿ : ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ 1ಲಕ್ಷ ರೂ. ಬೋನಸ್‌! ಕೋವಿಡ್ ಸಮಯದಲ್ಲಿ ನೌಕರ ಸ್ನೇಹಿ ಹೆಜ್ಜೆ

Advertisement

Udayavani is now on Telegram. Click here to join our channel and stay updated with the latest news.

Next