Advertisement

ಮಾಕೇನ್‌ ವಿರುದ್ಧ ಕಿರುಕುಳ ದೂರು ನೀಡಿದ ಕೈ ಜಿಲ್ಲಾ ಘಟಕಾಧ್ಯಕ್ಷೆ !

01:51 PM Apr 14, 2017 | Team Udayavani |

ಹೊಸದಿಲ್ಲಿ : ದೆಹಲಿ ಕಾಂಗ್ರೆಸ್‌ನಲ್ಲಿ ರುವ ಆಂತರಿಕ ಕಲಹಕ್ಕೆ ಸಾಕ್ಷಿ ಎಂಬಂತೆ ಮಹಿಳಾ
ಕಾಂಗ್ರೆಸ್‌ನ ಜಿಲ್ಲಾ ಅಧ್ಯಕ್ಷೆಯೊಬ್ಬರು ಪಕ್ಷದ ಹಿರಿಯ ನಾಯಕ ಅಜಯ್‌ ಮಾಕೇನ್‌ ಸೇರಿದಂತೆ ಮೂವರ ವಿರುದ್ಧ ಕಿರುಕುಳ ನೀಡಿದ ಆರೋಪ ಮಾಡಿದ್ದಾರೆ.

Advertisement

ರಚನಾ ಸಚ್‌ದೇವಾ ಎನ್ನುವರು ಮಾಕೇನ್‌ ಮತ್ತು ಹಿರಿಯ ನಾಯಕಿ ಶೋಭಾ ಓಝಾ ಮತ್ತು ನೆಟ್ಟಾ ಡಿ ಸೋಜಾ ವಿರುದ್ಧ ಮಾನಸಿಕ ಕಿರುಕಳ ನೀಡಿದ ಬಗ್ಗೆ ಆರೋಪ ಮಾಡಿದ್ದಾರೆ.

ದೆಹಲಿ ಮಹಾನಗರ ಪಾಲಿಕೆ ಚುನಾವಣೆಯ ಟಿಕೇಟ್‌ ಹಂಚಿಕೆ ವಿಚಾರದಲ್ಲಿ ರಾಹುಲ್‌ ಗಾಂಧಿ ಅವರ ಭೇಟಿಯಾದ ಕಾರಣಕ್ಕೆ  ನನ್ನನ್ನು ಕೋಣೆಯೊಂದರಲ್ಲಿ ಬಂಧಿಯಾಗಿಸಿ  ಕ್ಷಮಾಪಣ ಪತ್ರ ಬರೆಸಲಾಗಿದೆ ಎಂದು ರಚನಾ ಆರೋಪಿಸಿ ತುಘಲಕ್‌ ರಸ್ತೆಯ ಪೊಲೀಸ್‌ ಠಾಣೆಗೆ ಮೂವರ ವಿರುದ್ಧ ದೂರು ನೀಡಿದ್ದಾರೆ. 

ಕಾಂಗ್ರೆಸ್‌ ನಾಯಕರು ತಮ್ಮ ಸಂಬಂಧಿಕರಿಗೆ ಟಿಕೇಟ್‌ ಹಂಚುತ್ತಿದ್ದು ನೈಜ ಕಾಂಗ್ರೆಸ್‌ ಕಾರ್ಯಕರ್ತರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಆರೋಪವನ್ನು ತಳ್ಳಿ ಹಾಕಿರುವ ಶೋಭಾ ಓಝಾ ಬಿಜೆಪಿ ಚಿತಾವಣೆಯಲ್ಲಿ  ರಚನಾ ಈ ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next