Advertisement

ಒಳ್ಳೆಯವರಾಗಿ ಜನ ಪ್ರೀತಿ ಗಳಿಸಿ ಮಹೇಶ್‌ ಶೆಟ್ಟಿ

06:20 AM Aug 17, 2017 | Team Udayavani |

ಮಂಗಳೂರು: ನಾವು ಮೊದಲಿಗೆ ಒಳ್ಳೆಯ ಮನುಷ್ಯರಾಗಿ ಸಮಾಜದ ಸರ್ವರ ಪ್ರೀತಿಗೆ ಪಾತ್ರರಾಗಬೇಕು. ನಮ್ಮ ಗುರಿ ಸಾಧನೆಗೆ ಛಲ, ದೃಢ ಮನಸ್ಸು, ಆತ್ಮವಿಶ್ವಾಸ ಹಾಗೂ ಚೈತನ್ಯ ಅತಿ ಅಗತ್ಯ ಎಂದು ಮುಂಬಯಿ ಎಂ.ಟಿ. ಎಜುಕೇರ್‌ ಲಿಮಿಟೆಡ್‌ನ‌ ಸ್ಥಾಪಕಾಧ್ಯಕ್ಷ ಮಹೇಶ್‌ ಶೆಟ್ಟಿ ಅವರು ತಿಳಿಸಿದರು. 

Advertisement

ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿರುವ ಅವರು ನಗರದ ಮಹೇಶ್‌ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿ ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿ ಗಳೊಂದಿಗೆ ಸಂವಾದ ನಡೆಸಿದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಪಣತೊಡು ವಂತೆ ಕರೆ ನೀಡಿದರು.

ಕಾಲೇಜಿನ ಆಡಳಿತ ಮಂಡಳಿಯ ಟ್ರಸ್ಟಿ ಸುಜೀತ್‌ ಕೊಯೂಟ್‌ ಪ್ರಸ್ತಾವನೆಗೈದರು. ಮಹೇಶ್‌ ಪ್ರೌಢಶಾಲೆಯ
ಮುಖ್ಯಸ್ಥೆ ದೀಪಾಲಿ ಶೆಣೈ, ಉಪನ್ಯಾಸಕ ವೃಂದ ಹಾಗೂ ಸಿಬಂದಿ ಉಪಸ್ಥಿತರಿ ದ್ದರು. ಕಾಲೇಜಿನ ನಿರ್ದೇ ಶಕ/ ಪ್ರಾಂಶು
ಪಾಲ ಡಾ| ನವೀನ್‌ ಶೆಟ್ಟಿ ಕೆ. ಸ್ವಾಗತಿಸಿ ದರು. ಆಡಳಿತ ಮಂಡಳಿಯ ಸದಸ್ಯ ಅನಿಲ್‌ ಮಸ್ಕರೇನ್ಹಸ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next