Advertisement
ಮೀಡಿಯಾ ಕ್ಲಬ್‌ನಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ನಾವು ಮಾಧ್ಯಮ ಕ್ಷೇತ್ರದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ದೂರದರ್ಶನವನ್ನು ಜನರಿಗೆ ಸಮೀಪ ದರ್ಶನದಂತೆ ಕೆಲಸಮಾಡಿದ್ದೇನೆ. ಕನ್ನಡ ಸಾಹಿತ್ಯ ಪರಿಷತ್ ಗೆ ದೊಡ್ಡ ಇತಿಹಾಸವಿದೆ. ಈ ಪರಿಷತ್ ಗೆ ನಾನು ಸ್ಪರ್ಧೆ ಆಕಾಂಕ್ಷಿ ಎನ್ನುವುದಕ್ಕಿಂತ ಸೇವಾಕಾಂಕ್ಷಿಯೆಂದು ಹೇಳಲು ಇಚ್ಛೆ ಪಡುತ್ತಿದ್ದೇನೆ. ನನ್ನೊಟ್ಟಿಗೆ ಸ್ಪರ್ಧಿಸುವ ಇತರರು ನನಗೆ ಪ್ರತಿಸ್ಪ ರ್ಧಿಗಳಲ್ಲ. ಸಹ ಸ್ಪರ್ಧಿಗಳಾಗಿದ್ದಾರೆ ಎಂದರು.
Related Articles
Advertisement
ಎಲ್ಲ ತಾಲೂಕುಗಳಲ್ಲೂ ಕನ್ನಡ ಭವನ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡಲಿದ್ದೇನೆ. ಅಲ್ಲದೇ ಕಸಾಪ ಪ್ರತಿಯೊಂದು ಮಾಹಿತಿಯೂ ಜನ ಸಾಮಾನ್ಯರಿಗೆ ತಿಳಿಯುವಂತೆ ಮಾಡಲು ಅದಕ್ಕೆ ಡಿಜಿಟಲ್ ರೂಪ ಕೊಟ್ಟ ಆ್ಯಪ್ ಮಾಡಲಿದ್ದೇನೆ. ಆ್ಯಪ್ ಮೂಲಕ ಸದಸ್ಯತ್ವ ಪಡೆಯಲು ಅವಕಾಶ ಮಾಡಿಕೊಡಲಿದ್ದೇನೆ. ಸದಸ್ಯತ್ವ ಪಡೆದ ಪ್ರತಿಯೊಬ್ಬರಿಗೂ 15 ದಿನಗಳಲ್ಲಿ ಗುರುತಿನ ಚೀಟಿ ದೊರೆಯುವಂತೆ ಮಾಡಲಿದ್ದೇನೆ. ಹಾಗಾಗಿ ನನಗೆ ಸದಸ್ಯರು ಅಭೂತಪೂರ್ವ ಮತ ನೀಡಿ ಬೆಂಬಲಿಸಿ ಗೆಲ್ಲಿಸುವಂತೆ ಮನವಿ ಮಾಡಿದರು.
ನಿವೃತ್ತ ನ್ಯಾಯಾಧಿಧೀಶರಾದ ಅರಳಿ ನಾಗರಾಜ, ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿ ವೀರಣ್ಣ ನಿಂಗೋಜಿ, ನಬೀಸಾಬ್ ಕುಷ್ಟಗಿ ಅವರು ಮಾತನಾಡಿದರು. ಚನ್ನಬಸವ ಕೊಟ್ಟಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.