Advertisement

Guntur Kaaram: ಹಳೆ ಕಥೆಗೆ ಹೊಸ ಮಸಾಲಾ ಹಾಕಿದ್ರಾ ತ್ರಿವಿಕ್ರಮ್?‌: ಹೇಗಿದೆ ಸಿನಿಮಾ?

07:00 PM Jan 12, 2024 | Team Udayavani |

ಹೈದರಾಬಾದ್: ಪ್ರಿನ್ಸ್‌ ಮಹೇಶ್‌ ಬಾಬು ಅಭಿನಯದ ‘ಗುಂಟೂರು ಖಾರಂ’ ವರ್ಲ್ಡ್‌ ವೈಡ್‌ ಅದ್ಧೂರಿಯಾಗಿ ರಿಲೀಸ್‌ ಆಗಿದೆ. 10 ವರ್ಷದ ಬಳಿಕ ಮಹೇಶ್‌ ಬಾಬು ಜೊತೆ ತ್ರಿವಿಕ್ರಮ್‌ ಸಿನಿಮಾ ಮಾಡಿದ್ದಾರೆ. ಆ ನಿಟ್ಟಿನಲ್ಲಿ ಸಿನಿಮಾದ ಬಗ್ಗೆ ದೊಡ್ಡ ನಿರೀಕ್ಷೆಯಂತೂ ಪ್ರೇಕ್ಷಕರಲ್ಲಿ ಇದ್ದೇ ಇದೆ.

Advertisement

ತನ್ನ ಮೆಚ್ಚಿನ ನಟನ ಸಿನಿಮಾವನ್ನು ಅವರ ಅಭಿಮಾನಿಗಳು ಫಸ್ಟ್‌ ಡೇ ಫಸ್ಟ್‌ ಶೋ ನೋಡಿದ್ದಾರೆ. ಆ ಬಳಿಕ ತನ್ನ ಅಭಿಪ್ರಾಯವನ್ನು ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಹಾಗಾದರೆ ಬನ್ನಿ ʼಗುಂಟೂರು ಖಾರಂʼ ನೋಡಿ ಪ್ರೇಕ್ಷಕರು ಏನಂದ್ರು ಎನ್ನುವುದನ್ನು ನೋಡಿಕೊಂಡು ಬರೋಣ. ಸಿನಿಮಾವನ್ನು ನೋಡಿ ಪ್ರೇಕ್ಷಕರು ಮಿಶ್ರ‌ ಪ್ರತಿಕ್ರಿಯೆ ಯನ್ನು ನೀಡಿದ್ದಾರೆ.

“ಸಿನಿಮಾದಲ್ಲಿ ಮಹೇಶ್‌ ಬಾಬು ಅವರು ಒನ್‌ ಮ್ಯಾನ್ ಶೋನಂತೆ ಅಬ್ಬರಿಸಿದ್ದಾರೆ. ಇದು ಪಕ್ಕಾ ಬ್ಲಾಕ್‌ ಬಸ್ಟರ್‌ ಸಿನಿಮಾ”‌ ಎಂದು ಒಬ್ಬರು ಬರೆದುಕೊಂಡಿದ್ದಾರೆ.

“ಮಹೇಶ್‌ ಬಾಬು ಅವರ ಅಭಿನಯ ಅದ್ಭುತವಾಗಿದೆ. ಸಿನಿಮಾಕ್ಕಾಗಿ ಅವರು ರಕ್ತವನ್ನೇ ಸುರಿಸಿದ್ದಾರೆ. ಇಡೀ ಸಿನಿಮಾವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಸಾಗಿದ್ದಾರೆ” ಎಂದು ಮತ್ತೊಬ್ಬರು ಪಾಸಿಟಿವ್‌ ಆಗಿ ಬರೆದುಕೊಂಡಿದ್ದಾರೆ.

“ಮಹೇಶ್‌ ಬಾಬು ಇಡೀ ಸಿನಿಮಾದಲ್ಲಿ ತನ್ನ ಚಾರ್ಮ್‌, ಮ್ಯಾನರಿಸಂನಿಂದ ಗಮನ ಸೆಳೆಯುತ್ತಾರೆ. ಅದ್ಭುತವಾಗಿ ನಟಿಸಿದ್ದಾರೆ. ಅವರ ಡ್ಯಾನ್ಸ್‌ ವೃತ್ತಿ ಜೀವನದಲ್ಲೇ ಈ ಸಿನಿಮಾದಲ್ಲಿ ಬೆಸ್ಟ್‌ ಆಗಿದೆ” ಮತ್ತೊಬ್ಬರು ಟ್ವೀಟ್‌ ಮಾಡಿದ್ದಾರೆ.

Advertisement

ತ್ರಿವಿಕ್ರಮ್‌ ಹಳೆ ಕಥೆಯನ್ನೇ ಹೇಳಿದ್ದಾರೆ. ಒಂದು ಬಾರಿ ಫ್ಯಾಮಿಲಿ ಜೊತೆ ನೋಡಬಹದೆಂದು 2.5 ರೇಟಿಂಗ್‌ ನೀಡಿದ್ದಾರೆ.

“ಇದೊಂದು ಕ್ಲೀನ್‌ ಫ್ಯಾಮಿಲಿ ಮಾಸ್ ಮಸಾಲ ಮೂವಿ. ಮಹೇಶ್‌ ಬಾಬು ತನ್ನ ನಟನೆ ಮೂಲಕ ಚಾರ್ಮ್‌ ಮೂಡಿಸಿದ್ದಾರೆ. ಹಿರಿಯ ನಟರಾದ ಜಯರಾಮ್‌‌ ,ಪ್ರಕಾಶ್‌ ರಾಜ್ ಹಾಗೂ ರಮ್ಯಾ ಕೃಷ್ಣನ್‌ ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಶ್ರೀಲೀಲಾ ಇಲ್ಲಿ ಅವರ ಡ್ಯಾನ್ಸ್‌ ಹಾಗೂ ಮೂವ್ಸ್‌ ಗಳಿಂದ ಮಾತ್ರ ಗಮನ ಸೆಳೆಯುತ್ತಾರೆ. ಇದೊಂದು ಸಾಧಾರಣ ಸಿನಿಮಾವೆಂದು” ಒಬ್ಬರು ಬರೆದುಕೊಂಡಿದ್ದಾರೆ.

ʼಸ್ಪೈಡರ್‌ʼ ಸಿನಿಮಾದ ಬಳಿಕ ಬಹುಶಃ ಮಹೇಶ್‌ ಬಾಬು ಅವರು ದುರ್ಬಲವಾಗಿ ಅಭಿನಯಿಸಿರುವ ಸಿನಿಮಾ ಇದಾಗಿರಬಹುದು ಎಂದು ಒಬ್ಬರು ಬರೆದುಕೊಂಡಿದ್ದಾರೆ. “ಸ್ಪೈಡರ್‌ ಬಳಿಕ ಇದು ನಿಮ್ಮದು ಕೆಟ್ಟ ಜಡ್ಜ್‌ ಮೆಂಟ್‌. ಕಂಟೆಂಟ್‌ ಇಲ್ಲ, ಸೆಂಟಿಮೆಂಟ್‌ ವರ್ಕ್ ಔಟ್‌ ಆಗಿಲ್ಲ. ಇಂತಹ ಸಿನಿಮಾವನ್ನು ಹೇಗೆ ಆಯ್ಕೆ ಮಾಡಿಕೊಂಡ್ರಿ? ಎಂದು ಒಬ್ಬ‌ ಅಭಿಮಾನಿ ಪ್ರಶ್ನಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next