Advertisement

ಚೆನ್ನೈಯಲ್ಲೇ ಉಳಿಯಲಿದ್ದಾರೆ ಮಹೇಂದ್ರ ಸಿಂಗ್‌ ಧೋನಿ

10:07 PM Oct 17, 2021 | Team Udayavani |

ಹೊಸದಿಲ್ಲಿ: ಮುಂದಿನ ವರ್ಷದ ಐಪಿಎಲ್‌ಗಾಗಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ.ಹೆಚ್ಚಿನ ಆಟಗಾರರ ಸ್ಥಾನಪಲ್ಲಟವಾಗಲಿದೆ. ಇದಕ್ಕೆ ಸ್ಟಾರ್‌ ಆಟಗಾರರೂ ಹೊರತಲ್ಲ. ರಾಹುಲ್‌ ಆರ್‌ಸಿಬಿ ಸೇರ ಬಹುದೆಂಬ ಗುಸುಗುಸು ಕೇಳಿ ಬರುತ್ತಿದೆ.

Advertisement

ಎಸ್‌ಆರ್‌ಎಚ್‌ನಿಂದ ಕಡೆಗಣಿಸಲ್ಪಟ್ಟ ವಾರ್ನರ್‌ ಅವರನ್ನು ಬೇರೊಂದು ಫ್ರಾಂಚೈಸಿ ಸೆಳೆಯುವ ಸಾಧ್ಯತೆ ಇದೆ.

ಈ ನಡುವೆ “ಯೆಲ್ಲೊ ಆರ್ಮಿ’ ಚೆನ್ನೈ ಸೂಪರ್‌ ಕಿಂಗ್ಸ್‌ಗೆ 4ನೇ ಐಪಿಎಲ್‌ ಟ್ರೋಫಿ ತಂದಿತ್ತ ಮಹೇಂದ್ರ ಸಿಂಗ್‌ ಧೋನಿ ಇನ್ನೂ ಒಂದು ವರ್ಷ ಐಪಿಎಲ್‌ನಲ್ಲಿ ಮುಂದು ವರಿಯುವುದು ಖಾತ್ರಿಯಾಗಿದೆ. ಅಂದ ಮೇಲೆ ಅವರು ಚೆನ್ನೈ ಬಿಟ್ಟು ಹೋಗಲಾರರು ಎಂಬುದೂ ನಿಜ. ಈ ಬಗ್ಗೆ ಸುಳಿವು ನೀಡಿ ರುವ ಸಿಎಸ್‌ಕೆ ಫ್ರಾಂಚೈಸಿ, ಧೋನಿಗೆ ಮೊದಲ “ರಿಟೆನ್ಶನ್‌ ಕಾರ್ಡ್‌’ (ಆಟಗಾರರನ್ನು ಉಳಿಸಿ ಕೊಳ್ಳುವುದನ್ನು ಖಾತ್ರಿಗೊಳಿಸುವ ಪ್ರಕ್ರಿಯೆ) ನೀಡಲಾಗುವುದು ಎಂದಿದೆ.

ಇದನ್ನೂ ಓದಿ:ಡ್ರಗ್ಸ್‌ ಪ್ರಕರಣವನ್ನು ಇಲಾಖೆ ಗಂಭಿರವಾಗಿ ಪರಿಗಣಿಸುತ್ತಿದೆ: ಡಿಜಿಪಿ ಪ್ರವೀಣ್‌ ಸೂದ್‌

“ನಾವು ಎಷ್ಟು ಮಂದಿ ಆಟಗಾರರನ್ನು ಉಳಿಸಿಕೊಳ್ಳಲಿದ್ದೇವೆ ಎಂಬುದು ಇನ್ನಷ್ಟೇ ಅಂತಿಮವಾಗಬೇಕಿದೆ. ಆದರೆ ಮೊದಲ ರಿಟೆನ್ಶನ್‌ ಕಾರ್ಡ್‌ ಧೋನಿಗೇ ನೀಡಲಾಗು ವುದು. ಆದರೆ ಈ ಸಂದರ್ಭದಲ್ಲಿ ಐಪಿಎಲ್‌ ನಿಯಮವನ್ನೂ ಗಮನಿಸಬೇಕಾಗುತ್ತದೆ ಎಂದು ಸಿಎಸ್‌ಕೆ ಮೂಲವೊಂದು ಸ್ಪಷ್ಟಪಡಿಸಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next