Advertisement

ಮಹೇಂದ್ರ ಸಿಂಗ್‌ ಧೋನಿ ರಕ್ಷಣೆಗೆ ನಿಂತ ಕೇಶವಿನ್ಯಾಸಕಿ!

01:26 AM Feb 20, 2020 | Sriram |

ಥಾಣೆ (ಮಹಾರಾಷ್ಟ್ರ): ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರ ಜನಪ್ರಿಯತೆ ಸ್ವಲ್ಪವೂ ಕುಗ್ಗಿಲ್ಲ. ಇದಕ್ಕೊಂದು ಸಾಕ್ಷಿ ಥಾಣೆಯಲ್ಲಿ ಸಿಕ್ಕಿದೆ.

Advertisement

ಇತ್ತೀಚೆಗೆ ಧೋನಿ ಥಾಣೆಗೆ ಜಾಹೀರಾತೊಂದರ ಚಿತ್ರೀಕರಣಕ್ಕೆ ಹೋಗಿದ್ದರು. ಆ ವೇಳೆ ಸೆಲ್ಫಿà ತೆಗೆದುಕೊಳ್ಳಲು ಮುಗಿಬಿದ್ದ ಜನರಿಂದ ರಕ್ಷಿಸಲು, ಅವರ ಕೇಶವಿನ್ಯಾಸಕಿ ಸಪ್ನಾ ಬವಾ°ನಿ ಬರಬೇಕಾಯಿತು!

ಸಾವಿರಾರು ಜನರು ಧೋನಿಯನ್ನು ನೋಡಲು ಕಾದು ಕುಳಿತ್ತಿದ್ದರು. ಧೋನಿ ಕಾರ್ಯಕ್ರಮ ಮುಗಿಸಿ ಹೊರಟು ನಿಂತಾಗ, ಕೆಲವರು ಸೆಲ್ಫಿàಗಾಗಿ ಮುಗಿಬಿದ್ದರು. ಆಗ ಸಪ್ನಾ ತಮ್ಮ ಕೇಶವಿನ್ಯಾಸದ ಜವಾಬ್ದಾರಿ ಮರೆತು ಧೋನಿ ರಕ್ಷಣೆಗೆ ನಿಂತರು. ಆಕೆ ಹೆಣ್ಣೆಂಬ ಕಾರಣಕ್ಕೆ ಮೈಮೇಲೆ ಬೀಳುತ್ತಿದ್ದ ಅಭಿಮಾನಿಗಳು ಹಿಂಜರಿದರು.

ಸಪ್ನಾ ಧೋನಿಯವರ ದೀರ್ಘ‌ಕಾಲದ ಸ್ನೇಹಿತೆ ಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ವೀಡಿಯೋ ಒಂದನ್ನು ಬಿಡುಗಡೆ ಮಾಡಿರುವ ಸಪ್ನಾ, “ಶೇ. 90ರಷ್ಟು ಭದ್ರತೆ, ಶೇ. 10ರಷ್ಟು ಕೇಶವಿನ್ಯಾಸ, ಶೇ. 500ರಷ್ಟು ಅಭಿಮಾನಿ’ ಎಂದು ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next