ಮಣಿಪಾಲ್: ಅನೇಕ ಹೊಸ ಕಲಿಕಾ ವಿಷಯಗಳ ಜೊತೆಗೆ ಹೊಸಕಾಲದ ಎರಡು ಸಮಕಾಲೀನ ಸ್ನಾತಕೋತ್ತರ ಕಾರ್ಯಕ್ರಮಗಳನ್ನು ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್, MAHE ಪ್ರಾರಂಭಿಸುತ್ತಿದೆ. ಕಳೆದ ವರ್ಷ ಪ್ರಾರಂಭವಾದ ಇಕೊಸೊಫಿಕಲ್ ಎಸ್ಥಟಿಕ್ಸ್ ಎಂ.ಎ ಜೊತೆಗೆ, ಮತ್ತೊಂದು ನವೀನ ಸ್ನಾತಕೋತ್ತರ ಪದವಿ – ಎಂ.ಎ ಇನ್ ಆರ್ಟ್ ಅಂಡ್ ಪೀಸ್ ಸ್ಟಡೀಸ್ ಅನ್ನು ಈ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲಾಗುತ್ತಿದೆ.
ಎರಡೂ ಪದವಿಗಳಲ್ಲಿಯೂ ಕಲೆ ಮತ್ತು ತತ್ವಶಾಸ್ತ್ರವು ಸಾಮಾನ್ಯ ಎಳೆಯಾಗಿದ್ದರೂ ಇಕೊಸೊಫಿಕಲ್ ಎಸ್ಥಟಿಕ್ಸ್ ಪ್ರಾಥಮಿಕವಾಗಿ ಸಮಕಾಲೀನ ಪರಿಸರದ ಬಿಕ್ಕಟ್ಟುಗಳು ಮತ್ತು ಕಲಾ ಪ್ರಕಾರಗಳ ತಾತ್ವಿಕ ರಸಗ್ರಹಣದ ಕುರಿತ ಅಧ್ಯಯನವಾಗಿದೆ. ವ್ಯವಹರಿಸುತ್ತದೆ, ಆರ್ಟ್ ಅಂಡ್ ಪೀಸ್ ಸ್ಟಡೀಸ್ ಸಾಮಾಜಿಕ ಮತ್ತು ಅಂತರರಾಷ್ಟ್ರೀಯ ಬಿಕ್ಕಟ್ಟುಗಳ ಕುರಿತು ಹಾಗೂ ಕಲೆಯನ್ನು ಶಾಂತಿಯ ಮಾಧ್ಯಮವಾಗಿ ಹೇಗೆ ಬಳಸಿಕೊಳ್ಳಬಹುದು ಎಂಬುದರ ಬಗೆಗಿನ ಕಲಿಕೆಯಾಗಿದೆ.
ಈ ಎರಡೂ ಪದವಿ ಕಾರ್ಯಕ್ರಮಗಳು ವಿಭಿನ್ನ ಸಮಕಾಲೀನ ಬಿಕ್ಕಟ್ಟುಗಳ ‘ಮೂಲ’ ಮತ್ತು ಅವುಗಳ ಒಳ, ಹೊರ ಮತ್ತು ಮುಂದಣ ದಾರಿಗಳನ್ನು ಅನ್ವೇಷಿಸುತ್ತವೆ. ಈ ಆಧಾರದ ಮೇಲೆ, ಎರಡೂ ಸ್ನಾತಕ್ಕೋತ್ತರ ಪದವಿಗಳು ವಿದ್ಯಾರ್ಥಿಗಳನ್ನು ಬರವಣಿಗೆ – ಪತ್ರಿಕೋದ್ಯಮ, ಮಾಧ್ಯಮ ಮತ್ತು ಸಂವಹನದ ಬದುಕಿಗೆ ಸಿದ್ಧಗೊಳಿಸುತ್ತದೆ.
ಇಕೊಸೊಫಿಕಲ್ ಎಸ್ಥಟಿಕ್ಸ್ ಹೊಸ ಪಠ್ಯಕ್ರಮದಲ್ಲಿ ಅನುವಾದ ಅಧ್ಯಯನ ಮತ್ತು ಯಕ್ಷಗಾನ ಅಧ್ಯಯನಗಳಂತಹ ಹೊಸ ವಿಷಯಗಳನ್ನು ಪರಿಚಯಿಸಲಾಗಿದೆಯಾದರೆ ಕೆಲವು ಸಾಮಾನ್ಯ ವಿಷಯಗಳ ಜೊತೆಗೆ, ಪೀಸ್ ಸ್ಟಡೀಸ್ ಸೊಸೈಟಿ ಮತ್ತು ಪಾಲಿಟಿ, ಅಭಿವೃದ್ಧಿ ಅಧ್ಯಯನ, ಜೆಂಡರ್ ಸ್ಟಡೀಸ್ ಮತ್ತು ಗಾಂಧಿ ಅಧ್ಯಯನಗಳಂತಹ ವಿಷಯಗಳನ್ನು ಒಳಗೊಂಡಿದೆ.
ಇಕೊಸೊಫಿಕಲ್ ಎಸ್ಥಟಿಕ್ಸ್ ಮಾನವಿಕ ಶಾಸ್ತ್ರದ ಮೇಲೆ ಹೆಚ್ಚು ಕೇಂದ್ರಿತವಾಗಿದೆ ಮತ್ತು ಪೀಸ್ ಸ್ಟಡೀಸ್ ಸಾಮಾಜಿಕ ಶಾಸ್ತ್ರದ ಮೇಲೆ ಹೆಚ್ಚು ಗಮನ ಹರಿಸುತ್ತವೆ. ಯಾವುದೇ ವಿಷಯದಲ್ಲಿ ಪದವಿ ಹೊಂದಿದವರೂ ಈ ಸ್ನಾತಕ್ಕೋತ್ತರ ಪದವಿಗೆ ಅರ್ಹರು.
ಪತ್ರಿಕೋದ್ಯಮ, ಮಾಧ್ಯಮ ಮತ್ತು ಸಂವಹನ, ಸಾಮಾಜಿಕ-ಸಾಂಸ್ಕೃತಿಕ, ರಾಜಕೀಯ ಮತ್ತು ಪರಿಸರ ವಲಯ, ಶೈಕ್ಷಣಿಕ ಮತ್ತು ಸಂಶೋಧನೆ, ನೀತಿ ಸಂಶೋಧನಾ ಸಂಸ್ಥೆಗಳು, ಅಂತರರಾಷ್ಟ್ರೀಯ ಸಂಬಂಧ ಸಂಸ್ಥೆಗಳು, ಪ್ರಕಾಶನ ಸೇರಿದಂತೆ ಹಲವು ವೃತ್ತಿಪರ ಸಾಧ್ಯತೆಗಳನ್ನು ಈ ಕ್ಷೇತ್ರ ಹೊಂದಿದೆ.
‘ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್’ (ಜಿ.ಸಿ.ಪಿ.ಎ.ಎಸ್) ಸಮಕಾಲೀನ ಬಿಕ್ಕಟ್ಟನ್ನು ನಿಭಾಯಿಸಬಲ್ಲ ಪರ್ಯಾಯ ಜ್ಞಾನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಅಂತರಶಿಕ್ಷಣ ಬೋಧನೆ ಮತ್ತು ಸಂಶೋಧನೆಯಲ್ಲಿ ತೊಡಗಿಕೊಂಡಿದೆ. ಕೇಂದ್ರವು ಸೌಂದರ್ಯಶಾಸ್ತ್ರ, ತತ್ತ್ವಶಾಸ್ತ್ರ, ಪರಿಸರ, ಪತ್ರಿಕೋದ್ಯಮ, ಜೆಂಡರ್ ಸ್ಟಡೀಸ್, ಗಾಂಧಿ ಮತ್ತು ಶಾಂತಿ ಅಧ್ಯಯನ, ಅಭಿವೃದ್ಧಿ ಅಧ್ಯಯನವನ್ನು ನಡೆಸುತ್ತಿದೆ.
ಇದು ಭಾರತ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯವು ಶ್ರೇಷ್ಠ ಸಂಸ್ಥೆ ಎಂದು ಗುರುತಿಸಿರುವ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (MAHE) ನ ವಿಭಾಗವಾಗಿದೆ.ಹೆಚ್ಚಿನ ವಿವರಗಳು ವೆಬ್‌ಸೈಟ್‌ನಲ್ಲಿ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ
.: https://manipal.edu/gandhian-centre.html