Advertisement

Outlook-ICARE ಇಂಡಿಯಾ ಡೀಮ್ಡ್ ಟು ಬಿ ವಿ.ವಿ.ಗಳ ಶ್ರೇಯಾಂಕದಲ್ಲಿ ಮಾಹೆಗೆ ಅಗ್ರಸ್ಥಾನ

11:50 PM Aug 22, 2023 | Team Udayavani |

ಮಣಿಪಾಲ: ಪ್ರತಿಷ್ಠಿತ ಔಟ್‌ಲುಕ್‌-ಐಕೇರ್‌ ಇಂಡಿಯಾ ವಿಶ್ವವಿದ್ಯಾನಿಲಯಗಳ ಶ್ರೇಯಾಂಕ- 2023ರ ಮಣಿಪಾಲದ ಮಾಹೆ ವಿಶ್ವವಿದ್ಯಾನಿಲಯವು ಭಾರತದಲ್ಲಿನ ಟಾಪ್‌ 40 ವಿಶ್ವವಿದ್ಯಾನಿಲಯಗಳಲ್ಲಿ ಅಗ್ರಸ್ಥಾನ ಪಡೆದಿದೆ.

Advertisement

ಮಾಹೆ ವಿ.ವಿ. ಅಕಾಡೆಮಿಕ್‌ ಮತ್ತು ರಿಸರ್ಚ್‌ ಎಕ್ಸಲೆನ್ಸ್ , ಇಂಡಸ್ಟ್ರಿ ಇಂಟರ್ಫೇಸ್ ಮತ್ತು ಪ್ಲೇಸ್‌ಮೆಂಟ್‌, ಮೂಲಸೌಕರ್ಯ ಮತ್ತು ಸೌಲಭ್ಯಗಳು, ಆಡಳಿತ ಮತ್ತು ವಿಸ್ತರಣೆ, ಮತ್ತು ವೈವಿಧ್ಯತೆ ಮತ್ತು ಔಟ್‌ರೀಚ್‌ನಲ್ಲಿ ಅಸಾಧಾರಣ ಸಾಧನೆಗಳೊಂದಿಗೆ 1000ರಲ್ಲಿ 917.15 ಅಂಕ ಗಳಿಸುವ ಮೂಲಕ ಅಗ್ರಸ್ಥಾನ ಪಡೆದುಕೊಂಡಿದೆ.

ಮಾಹೆ ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌, ಕುಲಪತಿ ಲೆ| ಜ| ಡಾ| ಎಂ.ಡಿ.ವೆಂಕಟೇಶ್‌ ಅವರು ವಿಶ್ವವಿದ್ಯಾನಿಲಯದ ಗಮನಾರ್ಹ ಸಾಧನೆಗೆ ಹರ್ಷ ವ್ಯಕ್ತಪಡಿಸಿ, ನಮ್ಮ ಸಂಸ್ಥಾಪಕರಾದ ಡಾ| ಟಿಎಂಎ ಪೈ ಅವರ ದೂರದೃಷ್ಟಿಯ ಚಿಂತನೆ, ವಿದ್ಯಾರ್ಥಿಗಳು, ಅಧ್ಯಾಪಕರು, ಸಿಬಂದಿ ಹಾಗೂ ಎಲ್ಲರ ಪರಿಶ್ರಮದಿಂದ ಇದು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.

ಮಾಹೆ ಈಗ ಭಾರತದಲ್ಲಿ ಉನ್ನತ ಶಿಕ್ಷಣದ ಉತ್ತುಂಗದಲ್ಲಿದೆ. ಇದು ರಾಷ್ಟ್ರವ್ಯಾಪಿ ಶೈಕ್ಷಣಿಕ ಸಂಸ್ಥೆಗಳಿಗೆ ಉದಾಹರಣೆಯಾಗಿದೆ ಮತ್ತು ಶಿಕ್ಷಣದಲ್ಲಿ ಶ್ರೇಷ್ಠತೆ, ನಾವೀನ್ಯತೆ ಮತ್ತು ಒಳಗೊಳ್ಳುವಿಕೆಯ ಸಾಕಾರವನ್ನು ಉದಾಹರಿಸುತ್ತದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next