Advertisement

ಮಾಹೆ: ನಶೆ ಮುಕ್ತ ಉಡುಪಿ ಅಭಿಯಾನ

08:48 PM Aug 27, 2021 | Team Udayavani |

ಉಡುಪಿ: ಸರಕಾರ ನಶೆ ಮುಕ್ತ ಭಾರತದ ಅಭಿಯಾನದ ಅಂಗವಾಗಿ ಮಾಹೆ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ವಿಭಾಗ ಹಮ್ಮಿಕೊಂಡ ನಶೆಮುಕ್ತ ಉಡುಪಿ ಕಾರ್ಯಕ್ರಮದಲ್ಲಿ ಮಾಹೆ ಆಡಳಿತಕ್ಕೆ ಒಳಪಟ್ಟ ಸಂಸ್ಥೆಗಳ ಸಿಬಂದಿಗೆ ವಿಶೇಷ ತರಬೇತಿ ನೀಡಲಾಯಿತು.

Advertisement

ಮಾಹೆ ರಿಜಿಸ್ಟ್ರಾರ್‌ ಡಾ| ನಾರಾಯಣ ಸಭಾಹಿತ್‌ ಉದ್ಘಾಟಿಸಿ, ಮಾತನಾಡಿದರು.ಎಂಐಟಿ ನಿರ್ದೇಶಕ ಡಾ| ಅನಿಲ್‌ ರಾಣ ಅವರು ಮಾಹೆ ವಿದ್ಯಾರ್ಥಿಗಳ ವ್ಯವಹಾರ ವಿಭಾಗದ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು.

ಇದನ್ನೂ ಓದಿ:ಅತ್ಯಾಚಾರ ಪ್ರಕರಣದ ತನಿಖೆ ತೀವ್ರಗತಿಯಲ್ಲಿದೆ: ಸಚಿವ ಎಸ್.ಟಿ. ಸೋಮಶೇಖರ್

ಡಾ| ಎ.ವಿ. ಬಾಳಿಗಾ ಸಮೂಹ ಸಂಸ್ಥೆ ನಿರ್ದೇಶಕ ಡಾ| ಪಿ.ವಿ. ಭಂಡಾರಿ ಅವರು”ಯುವಕರಲ್ಲಿ ಮಾದಕ ದ್ರವ್ಯವನ್ನು ತಡೆಗಟ್ಟುವಲ್ಲಿ ಸಿಬಂದಿಯ ಪಾತ್ರ ಮತ್ತು ಮಾದಕ ವಸ್ತುಗಳ ನಿರಾಕರಣೆ ತಂತ್ರಗಳು, ಡಾ| ರಮೀಲಾ ಶೇಖರ್‌ “ಧನಾತ್ಮಕ ಯೋಗ ಕ್ಷೇಮಕ್ಕಾಗಿ ಜೀವನ ಕೌಶಲಗಳು, ಕೆಎಂಸಿ ಅಪರಾಧ ಪತ್ತದೆ ವಿಭಾಗದ ಸಂಯೋಜಕ ಪೊ| ವಿನೋದ್‌ ಸಿ. ನಾಯಕ್‌ ಅವರು “ಕಾನೂನು ಹಾಗೂ ನೈತಿಕ ಅಂಶಗಳ ದುರ್ಬಳಕೆ’ ಸೇರಿದಂತೆ ವಿವಿಧ ವಿಷಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಮಾಹೆ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ವಿಭಾಗದ ನಿರ್ದೇಶಕಿ ಡಾ| ಗೀತಾ ಎಂ. ಉಪಸ್ಥಿತದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next