Advertisement
ಮಾಹೆ ಬೆಂಗಳೂರು ಕ್ಯಾಂಪಸ್‌ನ 8 ಶಿಕ್ಷಣ ಸಂಸ್ಥೆಗಳಲ್ಲಿ ಲಭ್ಯವಿರುವ ಎಂಜಿನಿಯರಿಂಗ್, ಕಾನೂನು, ಮುಕ್ತಕಲೆ, ಕಾಮರ್ಸ್, ಮ್ಯಾನೇಜ್‌ಮೆಂಟ್, ರೀ ಜನರೇಟಿವ್ ಮೆಡಿಸಿನ್, ಆರ್ಟ್ ಆ್ಯಂಡ್ ಡಿಸೈನ್, ಪಬ್ಲಿಕ್ ಪಾಲಿಸಿ ಈ ವಿಷಯಗಳಲ್ಲಿ ಲಭ್ಯವಿರುವ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪಾಲಕರು ಮಾಹಿತಿ ಪಡೆದರು. ಬೆಳಗ್ಗೆ 9.30ರಿಂದ ಸಂಜೆ 4 ಗಂಟೆಯ ವರೆಗೆ ನಡೆದ “ಓಪನ್ ಹೌಸ್’ನಲ್ಲಿ ಕ್ಯಾಂಪಸ್‌ನ ಸಮಗ್ರ ಪರಿಚಯವನ್ನು ನೀಡಲು ಏರ್ಪಡಿಸಿದ್ದ ಕ್ಯಾಂಪಸ್ ಟೂರ್‌ನಲ್ಲಿ ಭಾಗಿಯಾಗಿ ಮಾಹೆ ಬೆಂಗಳೂರು ಕ್ಯಾಂಪಸ್‌ನ ತರಗತಿ ಕೊಠಡಿಗಳು, ಪ್ರಯೋಗಾಲಯ (ಲ್ಯಾಬ್), ಫುಡ್‌ಕೋರ್ಟ್ ಸೌಲಭ್ಯ, ಕ್ರಿಕೆಟ್, ಫುಟ್‌ಬಾಲ್ ಮೈದಾನಗಳು, ವಾಲಿಬಾಲ್, ಟೆನಿಸ್, ಬಾಸ್ಕೇಟ್ ಬಾಲ್ ಕೋರ್ಟ್‌ಗಳು ಸಹಿತ ಹೊರಾಂಗಣ ಕ್ರೀಡಾಂಗಣಗಳನ್ನು ವೀಕ್ಷಿಸಿದರು. ಕೆಲವು ವಿದ್ಯಾರ್ಥಿಗಳು ಅಧ್ಯಾಪಕ ವೃಂದದವರ ಜತೆಗೆ ಸಂವಹನ ನಡೆಸಿ ಸೂಕ್ತ ಮಾರ್ಗದರ್ಶನ ಪಡೆದುಕೊಂಡರು. ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿವಿಧ ಓಪನ್ ಹೌಸ್ ಚಟುವಟಿಕೆಗಳಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಮನೋರಂಜನೆ ಪಡೆದರು. ಇದರಲ್ಲಿ ಗೇಮಿಂಗ್, ಸೈನ್ಸ್ ಕ್ವಿಜ್, ಪಾಲಿಸಿ ಹ್ಯಾಕಥಾನ್, ಕೆರಿಯರ್ ಅಸೆಸ್‌ಮೆಂಟ್ ಟೆಸ್ಟ್, ವಿವಿಧ ಸ್ಫರ್ಧೆಗಳು ವಿಶೇಷವಾಗಿತ್ತು. ಫುಡ್ ಆ್ಯಂಡ್ ಫನ್ ಕಾರ್ಯಕ್ರಮದಲ್ಲಿ ಆಹಾರ ಮಳಿಗೆಗಳು, ವಿದ್ಯಾರ್ಥಿಗಳು ನೃತ್ಯ ರೂಪಕಗಳು ಆಕರ್ಷಕವಾಗಿದ್ದವು. ಪ್ರಸಿದ್ದ ಕಲಾವಿದ ಕೆನ್ನಿ ಸೆಬಾಸ್ಟಿನ್ ಅವರಿಂದ ಸ್ಟಾಂಡ್‌ಅಪ್ ಕಾಮಿಡಿ ಕಾರ್ಯಕ್ರಮ ನಡೆಸಿಕೊಟ್ಟು ವೀಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದರು. ಮಾಹೆ ಬೆಂಗಳೂರಿನಲ್ಲಿ ಸುಸಜ್ಜಿತ ಸೌಲಭ್ಯ
ಮಾಹೆ ಬೆಂಗಳೂರಿನ ಸಹ ಉಪಕುಲಪತಿ ಡಾ| ಮಧು ವೀರರಾಘವನ್ ಮಾತನಾಡಿ, ನಗರದ ಅತಿದೊಡ್ಡ ಓಪನ್ ಹೌಸ್ ಕಾರ್ಯಕ್ರಮವನ್ನು ಆಯೋಜಿಸಲು ನಾವು ಹೆಮ್ಮೆಪಡುತ್ತೇವೆ. ಮಾಹೆ ಬೆಂಗಳೂರು ಶಿಕ್ಷಣ ಸಂಸ್ಥೆಯು ಸುಸಜ್ಜಿತ ಸೌಲಭ್ಯಗಳನ್ನು ಹೊಂದಿದೆ. ವಿದ್ಯಾರ್ಥಿಗಳಿಗೆ ವ್ಯಾಸಂಗ ಮಾಡಲು ಪೂರಕ ವಾತಾವರಣ ಇಲ್ಲಿದೆ ಎಂದು ವಿವರಿಸಿದರು. ಕ್ಯಾಂಪಸ್‌ನ ಡೆಪ್ಯೂಟಿ ಡೈರೆಕ್ಟರ್ ಆಫ್ ಅಡ್ಮಿಷನ್ ಗೌರವ್ ಯಾದವ್ ವಿದ್ಯಾರ್ಥಿಗಳು ಹಾಗೂ ಪಾಲಕರ ಜತೆಗೆ ಸಂವಾದ ನಡೆಸಿ ಇಲ್ಲಿನ ಸೌಲಭ್ಯಗಳನ್ನು ವಿವರಿಸಿದರು.