Advertisement
ದ.ಕ. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಗಳೂರು ಮತ್ತು ಭಾರತೀಯ ಜೈನ್ ಮಿಲನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಜೈನಕಾಶಿ ಮೂಡಬಿದಿರೆಯ ಶ್ರೀ ಮಹಾವೀರ ಭವನದಲ್ಲಿ ಭಗವಾನ್ ಶ್ರೀ ಮಹಾವೀರ ಸ್ವಾಮಿಯ 2617ನೇ ಜಯಂತ್ಯುತ್ಸವ ಮೂಡಬಿದಿರೆ ಶ್ರೀ ಜೈನ ಮಠಾಧೀಶ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಚರ್ಯಶಿರೋಮಣಿ 108 ಆಚಾರ್ಯ ಶ್ರೀ ವಿಶುದ್ಧ ಸಾಗರ ಮುನಿ ಮಹಾರಾಜ್ ಹಾಗೂ ಸಂಘಸ್ಥ ಸಾಧುಗಳ ಸಮಕ್ಷಮ ಗುರುವಾರ ಜರಗಿತು.
35 ಮಂದಿ ಮುನಿ ಮಹಾರಾಜರ ಪರವಾಗಿ ಕರ್ಮವಿಜಯನಂದಿ ಮುನಿ ಮಹಾರಾಜ್ ಆಶೀರ್ವಚನ ನೀಡಿ, ಸತ್ಯ, ಅಹಿಂಸೆ ಶ್ರೇಷ್ಠವಾಗಿದ್ದು, ಜೈನದರ್ಶನದ ಪ್ರಮುಖ ಅಂಶಗಳಾಗಿವೆ. ಇಲ್ಲಿ ಕೆಟ್ಟದ್ದನ್ನು ಯೋಚಿಸಿದವರಿಗೆ ಕೆಡುಕಾಗುತ್ತದೆ ಎಂದು ಎಚ್ಚರಿಸಿದರು. ಸಿದ್ಧಸೇನ ಮುನಿಮಹಾರಾಜರು ತಮ್ಮ ಆಶೀರ್ವಚನದಲ್ಲಿ ಯಾರು ಇನ್ನೊಬ್ಬರನ್ನು ಬದುಕಲು ಬಿಡುವುದಿಲ್ಲವೋ ಅವರು
ಸ್ವಯಂ ಬದುಕುವುದು ಅಸಾಧ್ಯ ಎಂದರು. ಚಂದ್ರಪ್ರಭಾ ಸಾಗರ ಮುನಿ ಮಹಾರಾಜ್, ಸಿದ್ಧಸೇನ ಮುನಿಮಹಾ ರಾಜರು, ವಿಬುದ್ಧಿ ಸಾಗರ ಮುನಿ ಮಹಾರಾಜರು, ಸ್ವಸ್ತಿ ಶ್ರೀ ಭಟ್ಟಾರಕ ಸ್ವಾಮೀಜಿಗಳು ಆಶೀರ್ವಚನ ನೀಡಿದರು.
Related Articles
Advertisement
ಬಸದಿಗಳ ಮೊಕ್ತೇಸರರಾದ ಪಟ್ಣಶೆಟ್ಟಿ ಸುಧೇಶ್ ಕುಮಾರ್, ಆನಡ್ಕ ದಿನೇಶ್ ಕುಮಾರ್, ಸರ್ವಮಂಗಳಾ ಮಹಿಳಾಸಂಘದ ಅಧ್ಯಕ್ಷೆ ಸುಧಾ ಪೃಥ್ವೀರಾಜ್, ಮಹಾವೀರ ಸಂಘದ ಅಧ್ಯಕ್ಷ ಪೃಥ್ವೀರಾಜ್ ತ್ರಿಭುವನ್, ಯೂತ್ ಅಸೋಸಿಯೇಶನ್
ಅಧ್ಯಕ್ಷ ಸಂಪತ್, ತ್ರಿಭುವನ್ ಯುವಜೈನ್ ಮಿಲನ್ ಅಧ್ಯಕ್ಷ ನಿತೇಶ್ ಬಲ್ಲಾಳ್, ಎಸ್.ಡಿ. ಸಂಪತ್ ಸಾಮ್ರಾಜ್ಯ, ಶೈಲೇಂದ್ರ
ಕುಮಾರ್ ಉಪಸ್ಥಿತರಿದ್ದರು. ಮಿಲನ್ ಅಧ್ಯಕ್ಷ ಎಚ್. ಧನಕೀರ್ತಿ ಬಲಿಪ ವಂದಿಸಿದರು. ಪ್ರಭಾತ್ ಬಲ್ಲಾಳ್ ಬಿ. ನಿರೂಪಿಸಿದರು. ರಾತ್ರಿ ಜೈನ ಪೇಟೆಯಿಂದ ಮೂಡಬಿದಿರೆಯ ಪ್ರಮುಖ ಹಾದಿಯಲ್ಲಿ ಮೆರವಣಿಗೆ ನಡೆಯಿತು. ಜಿನ ತತ್ತ್ವಗಳು ಲೋಕವ್ಯಾಪಿ
ಯಾರಿಗೂ ಪ್ರಭಾವ ಬೀರ ಬಾರದು. ಯಾರಿಂದಲೂ ಪ್ರಭಾವಿತರಾಗ ಲೂಬಾರದು. ಭಗವಾನ್ ಮಹಾವೀರರು ಜಿನ ಧರ್ಮ ಪ್ರಚಾರಕ್ಕಾಗಿ ವಿದೇಶಗಳಿಗೆ ಹೋಗಲಿಲ್ಲ. ಆದರೆ ಜಿನತತ್ತ್ವಗಳು ಇಂದು ಲೋಕವ್ಯಾಪಿಯಾಗಿ ಹರಡಿವೆ. ಯಾರೆಷ್ಟೇ ಹತ್ತಿಕ್ಕಲೆತ್ನಿಸಿದರೂ ಜೈನಧರ್ಮದ ಸುಗಂಧ ಲೋಕವ್ಯಾಪಿಯಾಗಿ ಹರಡಿದೆ.
– ಶ್ರೀ ವಿಶುದ್ಧ ಸಾಗರ ಮುನಿ ಮಹಾರಾಜ್ ,
ಚರ್ಯ ಶಿರೋಮಣಿ 108 ಆಚಾರ್ಯ