Advertisement

ಮಹಾತ್ಮರ ಮಹಾತ್ಮ ನಾಟಕ ಪ್ರದರ್ಶನ

03:43 PM Apr 12, 2017 | Team Udayavani |

ಕಲಬುರಗಿ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಆಧ್ಯಾತ್ಮಿಕ ಮಾರ್ಗದರ್ಶಕರಾದ ಶ್ರೀಮದ್‌ ರಾಜ್‌ಚಂದ್ರಜೀ ಅವರ 150ನೇ ಜನ್ಮ ದಿನದ ಅಂಗವಾಗಿ ಮಂಗಳವಾರ ನಗರದ ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಆಯೋಜಿಸಿದ್ದ ಯುಗ ಪುರುಷ ಮಹಾತ್ಮರ ಮಹಾತ್ಮ ನಾಟಕ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಚಾಲನೆ ನೀಡಿದರು. 

Advertisement

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಬೆಂಗಳೂರು, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ ಯಾಕಾಪುರ, ಮುಖ್ಯ ಯೋಜನಾಧಿಕಾರಿ ಪ್ರವೀಣ ಪ್ರಿಯಾ, ಉಪ ಕಾರ್ಯದರ್ಶಿ ಸಂಪತ್‌ಕುಮಾರ ಪಾಟೀಲ, ಎನ್‌.ಎಸ್‌.ಎಸ್‌. ಅಧಿಕಾರಿ ಪ್ರೊ| ಲಂಡನಕರ್‌ ಹಾಜರಿದ್ದರು. 

ರಾಜ್ಯ ಸಂಚಾಲಕ ಆನಂದ ಸ್ವಾಗತಿಸಿದರು. ಇದಕ್ಕೂ ಮುನ್ನ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ| ಹೊ. ಶ್ರೀನಿವಾಸಯ್ಯ ನಿಧನದ ಗೌರವಾರ್ಥ ಮೌನ ಆಚರಿಸಲಾಯಿತು. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಜೀವನ ರೂಪಿಸಿದ ಮೂರು ಜನ ಜಗತ್ತಿನ ದಾರ್ಶನಿಕರಲ್ಲಿ ಗುಜರಾತಿನ ಶ್ರೀಮದ್‌ ರಾಜಚಂದ್ರ ಅಗಾಧ ಪ್ರಭಾವ ಬೀರಿದ ಸಂತ ಶ್ರೇಷ್ಠರು.

ಈ ಮಹಾನ್‌ ನಾಯಕರ ಜೀವನ ಸಂದೇಶಗಳ ಮೂಲಕ ಮಾನವೀಯ ಮೌಲ್ಯಗಳನ್ನು ಜನಮಾನಸದಲ್ಲಿ ವಿಶೇಷವಾಗಿ ಯುವಜನರಲ್ಲಿ ಪರಿಣಾಮಕಾರಿಯಾಗಿ ಬಿತ್ತುವ ಮಹಾತ್ವಾಕಾಂಕ್ಷೆ ಪ್ರಯೋಗವೇ “ಯುಗಪುರುಷ’ ನಾಟಕ. ನಾಟಕದಲ್ಲಿ ಇವರಿಬ್ಬರ ನಡುವಿನ ಗಾಢ ಆಧ್ಯಾತ್ಮಿಕ ಬಾಂಧವ್ಯ ಬೆಸೆಯಲ್ಪಟ್ಟ ಒಂದು ಹೃದಯಂಗಮ ಚಿತ್ರಣ ಮೂಡಿ ಬರುತ್ತವೆ. 

“ಯುಗಪುರುಷ’ ನಾಟಕದ ದೃಶ್ಯಾವಳಿಗಳು ನಿಸ್ವಾರ್ಥತತೆಯಿಂದ ಸೇವೆ ಮತ್ತು ಪ್ರೀತಿಯನ್ನು, ವೈವಿಧ್ಯತೆ ಗೌರವಿಸುವ, ಸತ್ಯವನ್ನು ಬೆಂಬಲಿಸುವ, ವಿಶ್ವಾಸ ಸೃಷ್ಟಿಸುವ, ಶಾಶ್ವತ ಸಮುದಾಯ ಕಟ್ಟುವ, ವ್ಯಕ್ತಿಯ ಸಾಮರ್ಥ್ಯವನ್ನು ವಿಸ್ತರಿಸುವ, ನಂಬಿಕೆ ಪೋಷಣೆ, ಸರಳತೆ, ಸದಾಚಾರ, ಸ್ವತ್ಛತೆಯಿಂದ ಕೂಡಿದ ಸುಸ್ಥಿರ ಸಮಾಜ ನಿರ್ಮಾಣದ ಮಹತ್ವ ಮತ್ತು ಉದಾತ್ತ ಮೌಲ್ಯಗಳ ಉದ್ದೇಶಗಳನ್ನು ಎತ್ತಿ ತೋರಿಸುತ್ತದೆ. 

Advertisement

ಶ್ರೀಮದ್‌ ರಾಜ್‌ಚಂದ್ರಜೀ ಅವರೊಂದಿಗಿನ ಸ್ಫೂಧಿರ್ತಿದಾಯಕ ಸಂವಹನ, ಪತ್ರವ್ಯವಹಾರ ಮತ್ತು ಅವರ ಆಧ್ಯಾತ್ಮಿಕ ದಾರಿ ಹಿಂಬಾಲಿಸುವಿಕೆ ಕುರಿತು ಗಾಂಧೀಜಿಯವರು ಸವೆಸಿದ ಆಂತರಿಕ ಮತ್ತು ಬಾಹ್ಯ ವಿಕಸನಗಳ ಕುರಿತು ಪ್ರೇಕ್ಷಕರನ್ನು ರೂಪಕ ಮಂತ್ರಮುಗ್ಧಗೊಳಿಸುತ್ತದೆ.  

Advertisement

Udayavani is now on Telegram. Click here to join our channel and stay updated with the latest news.

Next