Advertisement

ಆಸ್ಟ್ರೇಲಿಯಾದ ಮೆಲ್ಬರ್ನ್ ನಲ್ಲಿ ಗಾಂಧಿ ಪ್ರತಿಮೆ ಧ್ವಂಸ

09:12 PM Nov 15, 2021 | Team Udayavani |

ಮೆಲ್ಬರ್ನ್: ಆಸ್ಟ್ರೇಲಿಯಾದ ಮೆಲ್ಬರ್ನ್ ನ ರೌವಿಲ್ಲೆಯಲ್ಲಿ ಸ್ಥಾಪಿಸಲಾಗಿದ್ದ ಮಹಾತ್ಮ ಗಾಂಧಿ ಪ್ರತಿಮೆಯನ್ನು ಅನಾವ ರಣಗೊಂಡ ಕೆಲವೇ ಗಂಟೆಗಳಲ್ಲಿ ದುಷ್ಕರ್ಮಿಗಳು ಒಡೆದು ಹಾಕಿದ್ದಾರೆ.

Advertisement

ಈ ಘಟನೆಯಿಂದ ತೀವ್ರ ಆಘಾತಗೊಂಡಿರುವ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌, “ಅಗೌರವವನ್ನು ಈ ಮಟ್ಟಕ್ಕೆ ಪ್ರದರ್ಶನ ಮಾಡಿರುವ ರೀತಿಯಿಂದ ಬಹಳ ನೋವಾಗಿದೆ. ಇದು ಅತ್ಯಂತ ಹೇಯಕೃತ್ಯ’ ಎಂದು ಕಿಡಿಕಾರಿದ್ದಾರೆ.

ಈ ಬೆಳವಣಿಗೆಯಿಂದ ಇಲ್ಲಿನ ಭಾರತೀಯ ಸಮುದಾಯವೂ ಬೆಚ್ಚಿಬಿದ್ದಿದೆ. ಭಾರತ ಸರ್ಕಾರ ಕೊಡುಗೆಯಾಗಿ ನೀಡಿದ್ದ ಈ ಪ್ರತಿಮೆಯನ್ನು ಸ್ವತಃ ಪ್ರಧಾನಿ ಮಾರಿಸನ್‌ ಅನಾವರಣಗೊಳಿಸಿದ್ದರು. ಭಾರತದ 75ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಈ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು.

ಇದನ್ನೂ ಓದಿ:ಬೆಲೆಯೇರಿಕೆಯಿಂದ ಹಣದುಬ್ಬರವೂ ಏರಿಕೆ

Advertisement

Udayavani is now on Telegram. Click here to join our channel and stay updated with the latest news.

Next