Advertisement
ಭಯೋತ್ಪಾದನೆಯನ್ನು ತೊರೆದು ಸೇನೆ ಸೇರಿ ಹುತಾತ್ಮನಾದ ಲಾನ್ಸ್ ನಾಯಕ್ ನಜೀರ್ ಅಹಮದ್ ವಾನಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅಶೋಕ ಚಕ್ರವನ್ನು ಪುರಸ್ಕರಿಸಿದ ಅನಂತರದಲ್ಲಿ ರಾಜಪಥದಲ್ಲಿ ಪರೇಡ್ ಆರಂಭವಾಯಿತು. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅಮರ್ ಜವಾನ್ ಜ್ಯೋತಿ ಬೆಳಗಿಸಿದರು.
Related Articles
Advertisement
ಸಂವಿಧಾನದ ಮೂಲ ಆಶಯ ರಕ್ಷಿಸಬೇಕು: ಪ್ರಣವ್: ಸಂವಿಧಾನದಲ್ಲಿ ಉಲ್ಲೇಖೀಸಲಾಗಿರುವ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಯನ್ನು ರಕ್ಷಿಸಲು ಕಟಿಬದ್ಧರಾಗುವಂತೆ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಕರೆ ನೀಡಿದ್ದಾರೆ. ದೇಶದ ಅತ್ಯುನ್ನತ ಪುರಸ್ಕಾರ ‘ಭಾರತ ರತ್ನ’ಕ್ಕೆ ಆಯ್ಕೆಯಾದ ಮರುದಿನ 70ನೇ ಗಣರಾಜ್ಯ ದಿನದಂದು ಮಾತನಾಡಿದ ಅವರು, ಸಂವಿಧಾನದ ಆಶಯಕ್ಕೆ ಅನುಗುಣವಾಗಿ ನಾವು ಜೀವಿಸಬೇಕಿದೆ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ ದೇಶದ ಎಲ್ಲರಿಗೂ ಗಣರಾಜ್ಯೋತ್ಸವದ ಶುಭ ಕೋರಿದ್ದಾರೆ.
ಈಶಾನ್ಯದಲ್ಲಿ ಬಂದ್!: ಪೌರತ್ವ ಮಸೂದೆಗೆ ಕೇಂದ್ರ ಸರಕಾರ ಅನುಮೋದನೆ ನೀಡಿದಾಗಿನಿಂದಲೂ ಪ್ರತಿಭಟನೆ ವ್ಯಕ್ತವಾಗುತ್ತಿರುವ ಈಶಾನ್ಯ ರಾಜ್ಯಗಳಲ್ಲಿ ಗಣರಾಜ್ಯೋತ್ಸವವನ್ನು ಬಹಿಷ್ಕರಿಸಲಾಗಿತ್ತು. ಮಿಜೋರಾಂನಲ್ಲಿ ರಾಜ್ಯಪಾಲರು ಖಾಲಿ ಮೈದಾನದ ಎದುರೇ ಭಾಷಣ ಮಾಡಬೇಕಾಯಿತು. ಸಾರ್ವಜನಿಕರು ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ. ಕೇವಲ ಸಚಿವರು, ಹಿರಿಯ ಅಧಿಕಾರಿಗಳಷ್ಟೇ ಕಾರ್ಯಕ್ರಮದಲ್ಲಿ ಕಂಡುಬಂದರು. ಇತರ ರಾಜ್ಯಗಳಲ್ಲೂ ಬಹುತೇಕ ಇದೇ ಪರಿಸ್ಥಿತಿ ಇತ್ತು.
ಗಣರಾಜ್ಯೋತ್ಸವಕ್ಕೆ ನಿಷೇಧ ಹೇರಿದವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಮಣಿಪುರ ಸಿಎಂ ಎನ್. ಬಿರೇನ್ ಸಿಂಗ್ ನೀಡಿದರೆ, ಈಶಾನ್ಯ ರಾಜ್ಯದಲ್ಲಿ ವಿದೇಶೀ ಯರಿಗೆ ಅವಕಾಶವಿಲ್ಲ. ಇದು ಮೂಲನಿವಾಸಿಗಳ ರಾಜ್ಯ ಎಂದು ಅಸ್ಸಾಂ ರಾಜ್ಯಪಾಲ ಜಗದೀಶ್ ಮುಖರ್ಜಿ ಹೇಳಿದರು.
ಗೂಗಲ್‌ನಿಂದ ಡೂಡಲ್ ಶುಭಾಶಯಸರ್ಚ್ ಎಂಜಿನ್ ಗೂಗಲ್ ಭಾರತದ 70ನೇ ಗಣರಾಜ್ಯೋತ್ಸವಕ್ಕೆ ವಿಶೇಷ ಡೂಡಲ್ ರಚಿಸಿ ಗೌರವಿಸಿದೆ. ರಾಷ್ಟ್ರಪತಿ ಭವನದ ಹಿನ್ನೆಲೆಯಲ್ಲಿ ಭಾರತದ ಜೀವವೈವಿಧ್ಯ, ಶ್ರೀಮಂತ ಪರಂಪರೆ, ವಾಸ್ತುಶಿಲ್ಪವನ್ನು ಡೂಡಲ್‌ನಲ್ಲಿ ಚಿತ್ರಿಸಲಾಗಿದೆ. 3ಡಿ ತಂತ್ರಜ್ಞಾನ ದಲ್ಲಿ ಚಿತ್ರಿಸಿರುವ ಈ ಡೂಡಲ್ ವರ್ಣರಂಜಿತವಾಗಿದೆ. ಯುನೆಸ್ಕೊ ಗುರುತಿಸಿರುವ ಪಾರಂಪರಿಕ ಕಟ್ಟಡ ಕುತುಬ್ ಮಿನಾರ್ ಕೂಡ ಇದರಲ್ಲಿದೆ. ಆನೆ ಸೊಂಡಿಲು, ನವಿಲಿನ ಚಿತ್ರ ಗಳೂ ಇದರಲ್ಲಿ ಅಡಕವಾಗಿವೆ. ಭಾಷಣ ಓದಲು ಬಾರದ ಸಚಿವೆ!
ಮಧ್ಯಪ್ರದೇಶದ ಸಚಿವೆ ಇಮರ್ತಿ ದೇವಿ ಗಣರಾಜ್ಯೋತ್ಸವ ಕಾರ್ಯಕ್ರಮದ ದಿನ ಭಾಷಣ ಓದಲು ಬಾರದೇ ತಡವರಿಸಿದ ಘಟನೆ ನಡೆದಿದೆ. ಗ್ವಾಲಿಯರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಕಮಲ್‌ನಾಥ್‌ರ ಸಂದೇಶವನ್ನು ಓದಲು ಪ್ರಯತ್ನಿಸಿ ದರಾದರೂ ಕೆಲವು ಸಾಲುಗಳನ್ನು ತಡವರಿಸುತ್ತಲೇ ಓದಿದರು. ಅನಂತರ ಜಿಲ್ಲಾಧಿಕಾರಿಗೆ ಓದುವಂತೆ ಸೂಚಿಸಿದರು. ಈ ವಿಡಿಯೋ ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಭಾರೀ ವೈರಲ್ ಆಗಿದೆ. ಅನಂತರ ಮಾತನಾಡಿದ ಅವರು ಅನಾರೋಗ್ಯ ದಿಂದಾಗಿ ಓದಲು ಸಾಧ್ಯವಾಗಲಿಲ್ಲ ಎಂದು ಸಮಜಾಯಿಷಿ ನೀಡಿದರು. ಈ ಬಾರಿಯ ಪ್ರಥಮಗಳು
•ನೇತಾಜಿ ಸ್ಥಾಪಿಸಿದ ಇಂಡಿಯನ್ ನ್ಯಾಶನಲ್ ಆರ್ಮಿಯ 90ಕ್ಕೂ ಹೆಚ್ಚು ವಯಸ್ಸಿನ ನಾಲ್ವರು ಪಥಸಂಚಲನದಲ್ಲಿ ಭಾಗಿ.
•ಇತ್ತೀಚೆಗೆ ಅಮೆರಿಕದಿಂದ ಖರೀದಿಸಲಾದ ಎಂ777 ಅಮೆರಿಕನ್ ಅಲ್ಟ್ರಾ ಲೈಟ್ ಹೊವಿಟ್ಜರ್‌ಗಳು ಮತ್ತು ಕೆ9 ವಜ್ರ ಗನ್ ಇದೇ ಮೊದಲ ಬಾರಿ ಪರೇಡ್‌ನಲ್ಲಿ ಭಾಗಿ
•ಅಸ್ಸಾಂ ರೈಫಲ್ಸ್‌ನ ಮಹಿಳೆಯರೇ ಒಳಗೊಂಡ ತಂಡದಿಂದ ರಾಜಪಥದಲ್ಲಿ ಮೊದಲ ಬಾರಿಗೆ ಪಥಸಂಚಲನ
•ಸಾಂಪ್ರದಾಯಿಕ ಇಂಧನ ಹಾಗೂ ಜೈವಿಕ ಇಂಧನ ಬಳಸಿ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ದಿನದಂದು ವಾಯುಪಡೆಯ ಎಎನ್ 32 ಯುದ್ಧವಿಮಾನಗಳ ಹಾರಾಟ. •ಮಹರ್ ರೆಜಿಮೆಂಟ್‌ನ ಹಿರಿಯ ಅಧಿಕಾರಿ ರಚಿಸಿದ ಕವಿತೆಗೆ ಸಂಗೀತ ಸಂಯೋಜಿಸಿ, ಗಣರಾಜ್ಯೋತ್ಸವದಂದು ನುಡಿಸಲಾಯಿತು.