ಮುಂಬೈ: ಕ್ವಿಟ್ ಇಂಡಿಯಾ ದಿನದ (ಆಗಸ್ಟ್ 09) ಸ್ಮರಣಾರ್ಥವಾಗಿ ಕ್ರಾಂತಿ ಮೈದಾನಕ್ಕೆ ತೆರಳುತ್ತಿದ್ದ ಮಹಾತ್ಮ ಗಾಂಧಿಯವರ ಮರಿ ಮೊಮ್ಮಗ ತುಷಾರ್ ಗಾಂಧಿಯನ್ನು ಮುಂಬೈ ಪೊಲೀಸರು ಬುಧವಾರ ವಶಕ್ಕೆ ಪಡೆದ ಘಟನೆ ನಡೆದಿದೆ.
ಇದನ್ನೂ ಓದಿ:Lokayukta:ನಿವೃತ್ತ ಸ್ಟೋರ್ ಕೀಪರ್ ಅಕ್ರಮ ಸಂಪಾದನೆ, ಆಸ್ತಿ ಕಂಡು ಹೌಹಾರಿದ ಅಧಿಕಾರಿಗಳು!
ಕ್ರಾಂತಿ ಮೈದಾನದತ್ತ ತೆರಳುತ್ತಿದ್ದ ತುಷಾರ್ ಗಾಂಧಿಯನ್ನು ಸಾಂತಾಕ್ರೂಜ್ ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದರು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ನಾನು ಆಗಸ್ಟ್ 9ರ ಕ್ವಿಟ್ ಇಂಡಿಯಾ ದಿನದ ನೆನಪಿಗಾಗಿ ಕ್ರಾಂತಿ ಮೈದಾನದತ್ತ ಹೊರಟಾಗ ಸಾಂತಾಕ್ರೂಜ್ ಪೊಲೀಸರು ವಶಕ್ಕೆ ಪಡೆದಿರುವುದಾಗಿ ತುಷಾರ್ ಗಾಂಧಿ ಟ್ವೀಟ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಐತಿಹಾಸಿಕ ದಿನದಂದು ನನ್ನ ದೊಡ್ಡ ಅಜ್ಜ (ಮಹಾತ್ಮ ಗಾಂಧಿ) ನನ್ನು ಬ್ರಿಟಿಷ್ ಪೊಲೀಸರು ಬಂಧಿಸಿದ್ದರು. ಈ ದಿನದಂದೇ ನನ್ನನ್ನು ಕೂಡಾ ವಶಕ್ಕೆ ಪಡೆದಿರುವ ಬಗ್ಗೆ ಹೆಮ್ಮೆ ಇದೆ ಎಂದು ತುಷಾರ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
“ಒಂದು ವೇಳೆ ನನಗೆ ಪೊಲೀಸ್ ಠಾಣೆಯಿಂದ ಹೊರಡಲು ಅನುಮತಿ ನೀಡಿದರೆ ಖಂಡಿತವಾಗಿಯೂ ನಾನು ಆಗಸ್ಟ್ ಕ್ರಾಂತಿ ಮೈದಾನಕ್ಕೆ ತೆರಳುವೆ, ಅಲ್ಲಿ ಹುತಾತ್ಮರನ್ನು ಗೌರವಿಸಿ ಸ್ಮರಿಸುವುದಾಗಿ ತುಷಾರ್ ಗಾಂಧಿ ಮತ್ತೊಂದು ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.