Advertisement

ಕಾರಹಳ್ಳಿ ಗ್ರಾಪಂಗೆ ಮಹಾತ್ಮ ಗಾಂಧಿ ಪುರಸ್ಕಾರ

09:00 PM Oct 01, 2019 | Lakshmi GovindaRaju |

ದೇವನಹಳ್ಳಿ: ಸರ್ಕಾರದ ಯೋಜನೆಗಳನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಿ ಅತ್ಯುತ್ತಮ ಕಾರ್ಯನಿರ್ವಹಣೆ ತೋರಿದ ಗ್ರಾಪಂಗಳಿಗೆ ನೀಡುವ ಗಾಂಧೀ ಗ್ರಾಮ ಪುರಸ್ಕಾರಕ್ಕೆ ತಾಲೂಕಿನ ಕಾರಹಳ್ಳಿ ಗ್ರಾಪಂ ಎರಡನೇ ಬಾರಿಗೆ ಭಾಜನವಾಗಿದೆ. 2018-19ನೇ ಸಾಲಿನ ರಾಜ್ಯ ಮಟ್ಟದ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

Advertisement

ಗ್ರಾಪಂ ಪರಿಚಯ: ಕಾರಹಳ್ಳಿ ಗ್ರಾಮ ಪಂ ತಾಲೂಕು ಕೇಂದ್ರದಿಂದ ಸುಮಾರು 11 ಕಿ.ಮೀ. ದೂರದಲ್ಲಿದ್ದು, ಗ್ರಾಮದ ಹಿರಿಯರು ಹೇಳುವಂತೆ ಈ ಗ್ರಾಮವು 301ವರ್ಷಗಳ ಹಿಂದೆಯೇ ರಚನೆಯಾಗಿದೆ. ಕಾರಹಳ್ಳಿ ಗ್ರಾಮದಲ್ಲಿ ದಿಬ್ಬಗಿರೀಶ್ವರ ದೊಡ್ಡ ಬೆಟ್ಟವಿದ್ದು. ಬೆಟ್ಟದ ಮೇಲೆ ಈಶ್ವರನ ದೇವಸ್ಥಾನ ಹಾಗೂ ಕಲ್ಯಾಣಿ ಇದೆ.ಇಲ್ಲಿ ಪ್ರತಿ ಸೋಮವಾರ ಹಾಗೂ ಕಾರ್ತಿಕ ಸೋಮವಾರದಂದು ವಿಶೇಷ ಪೂಜೆ ಮತ್ತು ಭಕ್ತಾದಿಗಳಿಂದ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿರುತ್ತದೆ.

ಬೆಟ್ಟದ ಮೇಲೆ ನಿಂತು ನೋಡಿದರೆ ಸುತ್ತಮುತ್ತಲಿನ ಗ್ರಾಮಗಳು ಕಾಣಿಸುತ್ತವೆ. ಪ್ರಸಿದ್ದ ಗಿರಿಧಾಮವು ಕಾರಹಳ್ಳಿ ಗ್ರಾಮದಿಂದ ಸುಮಾರು 15 ಕಿ.ಮೀ. ದೂರದಲ್ಲಿ ಇದೆ. ಕಾರಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 9ಗ್ರಾಮಗಳು ಬರುತ್ತವೆ. 9 ಸಾವಿರ ಜನಸಂಖ್ಯೆ ಹಾಗೂ 4 ಸಾವಿರ ಕುಟುಂಬಗಳು ನೆಲೆಸಿವೆ. ಗ್ರಾಪಂ 18 ಸದಸ್ಯ ಬಲ ಹೊಂದಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಶೇ.100 ಶೌಚಾಲಯಗಳ ನಿರ್ಮಾಣವಾಗಿದೆ.

9 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಒಂದು ಪ್ರೌಡ ಶಾಲೆ, 10 ಅಂಗನವಾಡಿ ಕೇಂದ್ರಗಳಿವೆ. ನರೇಗಾ ಯೋಜನೆಯಲ್ಲಿ ಹೆಚ್ಚಿನ ಕಾಮಗಾರಿಗೆ ಉದ್ಯೋಗ ಚೀಟಿಗಳನ್ನು ನೀಡಲಾಗಿದೆ. ಸಾರ್ವಜನಿಕರ ಸಹಭಾಗಿತ್ವದಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ನಡೆಸಲಾಗಿದೆ. ಪ್ರತಿ ಶಾಲೆಗೆ ಪ್ರತಿದಿನ ಎರಡು ಶುದ್ಧ ಕುಡಿಯುವ ಕ್ಯಾನ್‌ಗಳನ್ನು ನೀಡಲಾಗುತ್ತಿದೆ. ತಾಲೂಕಿನ 24 ಪಂಚಾಯಿತಿಗಳ ಪೈಕಿ ಪ್ರಥಮ ಪ್ಲಾಸ್ಟಿಕ್‌ ಮುಕ್ತ ಗ್ರಾಪಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ನೆರೆಗಾ ಯೋಜನೆಯಲ್ಲಿ ಧನಗಳ ಶೆಡ್‌, ಚೆಕ್‌ ಡ್ಯಾಂ, ಸ್ಮಶಾನ ಅಭಿವೃದ್ಧಿ, ಸಸಿ ನೆಡುವುದು, ಕೊಳವೆ ಭಾವಿಗಳ ಪುನಶ್ಚೇತನ, ಕುಡಿಯುವ ನೀರು, ಸೇತುವೆ ರಸ್ತೆ , ಬೀದಿ ದೀಪಗಳ ಅಳವಡಿಕೆ ಸೇರಿದಂತೆ ಎಲ್ಲಾ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. 2018-19ನೇ ಸಾಲಿನಲ್ಲಿ ಬಹಿìದೆಸೆ ಮುಕ್ತ ಗ್ರಾಮ ಎಂದು ಘೋಷಿಸಲಾಗಿದೆ. ಗ್ರಾಮದಲ್ಲಿ ಸರಿಯಾದ ಚರಂಡಿಗಳ ವ್ಯವಸ್ಥೆ, ತ್ಯಾಜ್ಯ ವಿಲೇವಾರಿ ಮಾಡಲಾಗಿದೆ.

Advertisement

ಎಸ್‌ಸಿ, ಎಸ್‌ಟಿ ಅನುದಾನದಲ್ಲಿ ಉಚಿತ ಗ್ಯಾಸ್‌ ಮತ್ತು ಸ್ಟೌವ್‌, ಹೊಲಿಗೆ ಯಂತ್ರಗಳು ಮತ್ತು ಯೂಪಿಎಸ್‌ ವಿತರಿಸಲಾಗಿದೆ. ಅಂಗವಿಕಲರಿಗೆ ಶೇ.5ರಷ್ಟು ಅನುದಾನದಲ್ಲಿ ಕುರಿಗಳನ್ನು ಸಾಕಾಣಿಕೆಗೆ ಪ್ರೋತ್ಸಾಹಿಸಲಾಗಿದೆ. ಮುಂದಿನ ದಿನಗಳಲ್ಲಿ ಇಡೀ ರಾಜ್ಯದಲ್ಲಿಯೇ ಹಸಿರು ಪಂಚಾಯಿತಿಯಾಗಿ ಮಾಡಿ, ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಗುರಿಯನ್ನು ಪಂಚಾಯ್ತಿ ಹೊಂದಿದೆ.

ಕಾರಹಳ್ಳಿ ಗ್ರಾಪಂಗೆ ಮಹಾತ್ಮ ಗಾಂಧೀ ಗ್ರಾಮ ಪುರಸ್ಕಾರ ಬಂದಿರುವುದು ಸಂತಸವಾಗಿದೆ.ಪûಾತೀತವಾಗಿ ಎಲ್ಲಾ ಸದಸ್ಯರು, ಗ್ರಾಪಂ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮದ ನಾಗರಿಕರು, ಗ್ರಾಪಂ ಸಿಬ್ಬಂದಿ ವರ್ಗ ಗ್ರಾಮದ ಮುಖಂಡರ ಸಹಕಾರದಿಂದ ಎರಡನೇ ಬಾರಿ ಗಾಂಧಿ ಪುರಸ್ಕಾರ ಬಂದಿರುವುದರಿಂದ ಗ್ರಾಪಂ ಕೀರ್ತಿ ಹೆಚ್ಚಿದೆ.
-ಎ.ದೇವರಾಜ್‌, ಗ್ರಾಪಂ ಅಧ್ಯಕ್ಷ

ಗ್ರಾಪಂ ವ್ಯಾಪ್ತಿಯಲ್ಲಿ ಇನ್ನು ಶೇ.30ರಷ್ಟು ಪ್ಲಾಸ್ಟಿಕ್‌ ಮುಕ್ತ ಮಾಡಿದರೆ ಪಂಚಾಯಿತಿಗೆ ಮತ್ತೂಂದು ದಾಖಲೆಗೆ ಪಾತ್ರವಾಗಲಿದೆ. ಎಲ್ಲಾ ಕ್ಷೇತ್ರಗಳಿಗೂ ಸಮಾನ ಆದ್ಯತೆಯನ್ನು ನೀಡಿದ್ದೇವೆ. ಎಲ್ಲಾ ಇಲಾಖಾಧಿಕಾರಿಗಳನ್ನು ಕರೆಸಿ ಸಭೆಗಳನ್ನು ಮಾಡಿ, ಗ್ರಾಪಂಗೆ ಯಾವ ರೀತಿ ಯೋಜನೆಗಳನ್ನು ರೂಪಿಸಬೇಕು ಎಂಬುವುದರ ಬಗ್ಗೆ ಕ್ರಿಯಾಯೋಜನೆ ಮಾಡಿದ್ದೇವೆ. 2
-ಕಾರಹಳ್ಳಿ ಶ್ರೀನಿವಾಸ್‌, ತಾಪಂ ಸದಸ್ಯ

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೇಳಿಕೆ: ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸಿಬ್ಬಂದಿ, ಪ್ರಮುಖ ಮುಖಂಡರು ಹಾಗೂ ಸಾರ್ವಜನಿಕರು ಎಲ್ಲರೂ ಸಹಕಾರ ನೀಡಿದ್ದರಿಂದ ಗ್ರಾಪಂಗೆ ಮಹಾತ್ಮ ಗಾಂಧೀಜಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ಮಹಾತ್ಮ ಗಾಂಧೀಜಿ ಪುರಸ್ಕಾರಕ್ಕೆ 150 ಪ್ರಶ್ನೆಗಳನ್ನು ಕೇಳುತ್ತಾರೆ. ಆನ್‌ಲೆ„ನ್‌ನಲ್ಲಿ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ನೀಡಲಾಗಿದೆ.
-ಕವಿತಾ, ಪಿಡಿಒ

* ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next