Advertisement

ಕುಂಚಿಟಿಗರ ಮಹಾಸಂಸ್ಥಾನ ಶೋಷಿತರೆಲ್ಲರಿಗೂ ಆಶ್ರಯದ ತಾಣ : ಶ್ರೀ ಹನುಮಂತನಾಥ ಸ್ವಾಮೀಜಿ

09:29 PM Feb 25, 2023 | Team Udayavani |

ಕೊರಟಗೆರೆ: ಹೆಸರಿಗೆ ಕುಂಚಿಟಿಗರ ಮಹಾಸಂಸ್ಥಾನ ಮಠದ ಆದರೆ ಇದು ಸರ್ವ ಸಮುದಾಯ, ಶೋಷಿತ,ಅಸಹಾಯ ಎಲ್ಲರಿಗೂ ಆಶ್ರಯದ ತಾಣವಾಗಿ ಸಮಾಜಮುಖಿಯಾಗಿ ಸರ್ವರಿಗೂ ಸಲ್ಲುವುದೇ ಮಠದ ಉದ್ದೇಶ ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಶ್ರೀ ಹನುಮಂತನಾಥಸ್ವಾಮೀಜಿ ತಿಳಿಸಿದರು

Advertisement

ತಾಲೂಕಿನ ಕೋಳಾಲ ಹೋಬಳಿಯ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ಶುಕ್ರವಾರ ಮಠದಲ್ಲಿನ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದದ ೭ ನೇ ವರ್ಷದ ವಾರ್ಷಿಕೋತ್ಸವ ಮತ್ತು ಮಠದಲ್ಲಿ ನೂತನವಾಗಿ ೪ ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಶ್ರೀಮತಿ ರಂಗಲಕ್ಷ್ಮೀ ಶ್ರೀ ಎನ್. ದೇವರಾಜಯ್ಯ ಸಮುದಾಯ ಭವನ ಉದ್ಘಾಟನಾ ಕಾರ‍್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು.

ರಾಜಕೀಯ ಕಾರ‍್ಯಕ್ರಮಗಳಿಗೆ ನೀಡುವ ಮಹತ್ವವನ್ನು ಧಾರ್ಮಿಕ ಕಾರ‍್ಯಕ್ರಮ ಮತ್ತು ಸಮಾಜ ಮುಖಿ ಕಾರ‍್ಯಕ್ರಮಕ್ಕೆ ಆಧ್ಯತೆ ನೀಡಬೇಕು ಪ್ರತಿಯೊಂದು ಅರ್ಹತೆಗೆ ಇಚ್ಚಾಶಕ್ತಿಗಳು ಅತ್ಯಾವಶ್ಯಕವಾದ್ದು ಸ್ವಾರ್ಥಕ್ಕೆ ಮನ್ನಣೆಯನ್ನು ನೀಡದೇ ಸಮಾಜ ಮುಖಿಯಾಗಿ ಕೆಲಸ ಮಾಡಬೇಕು ಎಂದರು.

ಮಠದಲ್ಲಿ ಈಗಾಗಲೇ ಸಂಸ್ಕೃತ ಶಾಲೆ, ಅನಾಥಶ್ರಮ, ನಿತ್ಯ ದಾಸೋಹ ನಡೆಯುತ್ತಿದ್ದು ಈಗ ಹೊಸ ಸೇರ್ಪಡೆಯಾಗಿ ಸಮುದಾಯ ಭವನ ನಿರ್ಮಾಣಮಾಡಿದ್ದು ಇದು ಸಮಾಜದಿಂದ ಸಮಾಜಕ್ಕೆ ಸಮರ್ಪಿಸುವಂತಹ ಕಾರ‍್ಯಮಾಡುತ್ತಿದ್ದೇವೆ ಎಂದು ಹೇಳಿದರು.

ಕಡಿಮೆ ಅವಧಿಯಲ್ಲಿ ಡಾ. ಹನುಮಂತನಾಥ ಶ್ರೀಗಳು ಮಾಡಿರುವಂತಹ ಸಾಧನೆ ಅನನ್ಯವಾಗಿದ್ದು ಸರ್ವರಿಗೂ ಸಲ್ಲುವಂತಹ ಇವರು ಮಾಡಿರುವಂತಹ ಪ್ರತಿಯೊಂದು ಕಾರ‍್ಯಗಳೂ ಅನುಕರಣೀಯ ಎಂದು ಸಿದ್ದರಬೆಟ್ಟದ ಬಾಳೇಹೊನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ವೀರಭದ್ರಶಿವಾಚರ‍್ಯ ಸ್ವಾಮೀಜಿ ತಿಳಿಸಿದರು.

Advertisement

ಕೌಶಲಾಭಿವೃದ್ಧಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಮುರಳೀಧರ್ ಹಾಲಪ್ಪ ಮಾತನಾಡಿ ಸ್ವಾರ್ಥಕ್ಕಾಗಿ ಯಾವುದೇ ಸಮುದಾಯ ಬಳಕೆಯಾಗಬಾರದು ಪ್ರತಿಯೊಂದು ಸಮುದಾಯವೂ ಮುಖ್ಯ ವಾಹಿನಿಗೆ ಬರಬೇಕಾದರೆ ಶಿಕ್ಷಣ ಅತ್ಯಾವಶ್ಯಕವಾಗಿದ್ದು ಇದನ್ನು ಕುಂಚಿಟಿಗ ಮಠ ಮಾಡುತ್ತಾ ತ್ರಿವಿಧ ದಾಸೋಹ ಕೇಂದ್ರವಾಗಿ ಪ್ರಖ್ಯಾತಿಯನ್ನು ಗಳಿಸುತ್ತಿದ್ದು ಮಠಕ್ಕೆ ಎಲ್ಲ ಸಮುದಾಯ ಭಕ್ತರ ಕೊಡುಗೆ ಅಪಾರವಿದ್ದು ಇದು ಶ್ರೀಗಳ ಸಮಾಜಿಕ ಕಳಕಳಿಗೆ ಸಾಕ್ಷಿ ಎಂದರು.

ಕಾರ‍್ಯಕ್ರಮದಲ್ಲಿ ಕಾರದ ಮಠದ ವೀರಭಸವ ಮಹಾಸ್ವಾಮೀಜಿ, ಕುಣಿಗಲ್ ಹರೇಶಂಕರ ಮಠದ ಸಿದ್ದರಾಮ ಚೈತನ್ಯ, ತವಡಿಹಳ್ಳಿ ಗೋಸಲ ಚೆನ್ನಬಸವೇಶ್ವರ ಗದ್ದುಗೆ ಮಠದ ಚನ್ನಬಸವೇಶ್ವರ ಸ್ವಾಮೀಜಿ, ಗೊಲ್ಲಹಳ್ಳಿ ಸಿದ್ದಲಿಂಗೇಶ್ವರ ಮಹಾಸಂಸ್ಥಾನ ಮಠದ ವಿಭವ ವಿದ್ಯಾಶಂಕರ ದೇಶೀಕೇಂದ್ರಸ್ವಾಮೀಜಿ, ಗುಬ್ಬಿ ಬಸವ ಬೃಂಗಿ ಸ್ವಾಮೀಜಿ, ಮಾಜಿ ಶಾಸಕ ಪಿ.ಆರ್ ಸುಧಾಕರ್ ಲಾಲ್ ನಿವೃತ್ತ ಐಎಎಸ್ ಅಧಿಕಾರಿ ಬಿ.ಹೆಚ್ ಅನಿಲ್ ಕುಮಾರ್,ಮಡಗಶಿರಾ ತಾಲೂಕಿನ ಕುಂಚಿಟಿಗ ಸಂಘದ ತಾಲೂಕು ಅಧ್ಯಕ್ಷ ಅನಂತರಾಜು,ಕೆಪಿಸಿಸಿ ಸದಸ್ಯ ಎ.ಡಿ ಬಲರಾಮಯ್ಯ, ಜಿ.ಪಂ ಮಾಜಿ ಸದಸ್ಯ ಟಿ.ಡಿ ಪ್ರಸನ್ನಕುಮಾರ್, ತಾಲೂಕು ಜೆಡಿಎಸ್ ಉಪಾಧ್ಯಕ್ಷರಾದ ಜಿ.ಎಂ ಕಾಮರಾಜು, ಎಂ.ಎA ಸಿದ್ದಮಲ್ಲಪ್ಪ, ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಜಯಮ್ಮ, ತುಮುಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್,ಮುಖಂಡರಾದ ಲಗ್ಗೆರೆ ನಾರಾಯಣಸ್ವಾಮಿ, ನಿವೃತ್ತ ಡಿವೈಎಸ್‌ಪಿ ರಾಮಕೃಷ್ಣ,ಸೇರಿದಂತೆ ಇತರರು ಇದ್ದರು.

ನೆರೆಯ ಆಂದ್ರಪ್ರದೇಶ, ಬೆಂಗಳೂರು ಸೇರಿಂತೆ ಜಿಲ್ಲೆಯ ಶಿರಾ, ಮಧುಗಿರಿ, ಕೊರಟಗೆರೆ,ಪಾವಗಡ ಸೇರಿದಂತೆ ಬಳ್ಳಾರಿ, ಚಿತ್ರದುರ್ಗ, ಮೈಸೂರು, ಶಿವಮೊಗ್ಗೆ, ಹಾವೇರಿ, ಬಿಜಾಪುರ ಜಿಲ್ಲೆಗಳಿಂದ ಸಾವಿರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

ಲಕ್ಷ್ಮೀನಸಿಂಹಸ್ವಾಮಿ ಸಮೇತ ಪರಿವಾರ ದೇವತೆಗಳಿಗೆ ಕಳಶಾರಾಧನೆ, ಮಹಾಗಣಪತಿ ಹೋಮ, ಪರಿವಾರ ಹೋಮ, ನೇತ್ರೋತ್ಮಿಲನ ಪ್ರಾಣ ಪ್ರತಿಷ್ಠಾ ತತ್ವನ್ಯಾಸಾದಿ ಹೋಮ, ಲಕ್ಷ್ಮೀನರಸಿಂಹಹೋಮ, ಶ್ರೀ ಆಂಜನೇಯ ಹೋಮ, ಆದಿತ್ಯಾದಿ ನವಗ್ರಹ ಹೋಮ, ಪರಿಹವಾರ ಹೋಮ, ಪ್ರಾಯಃಶ್ಚಿತ ಹೋಮ, ಮಹಾಪೂರ್ಣಾಹುತಿ ಹೋಮ, ಮಂಗಳಾರತಿ, ಗೋದರ್ಶನ ನಡೆದವು.

ಸಮುದಾಯ ಭವನದಲ್ಲಿ ಉದ್ಘಾಟನೆಯ ಮೊದಲನೆಯ ಧಾರ್ಮಿಕ ಕಾರ‍್ಯಕ್ರಮವಾಗಿ ಲಕ್ಷ್ಮೀನರಸಿಂಹಸ್ವಾಮಿ ಕಲ್ಯಾಣೋತ್ಸವ ಕರ‍್ಯಕ್ರಮ ಮೊದಲ ಮದವೆಗೆ ಸಾಕ್ಷಿಯಾಯಿತು. ಭಕ್ತರಿಗೆ ವಿಶೇಷ ರೀತಿಯ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next