Advertisement

ಎಸ್ಸಿ, ಎಸ್ಟಿ ಸಮುದಾಯದವರಿಗೆ ಭೂ ಒಡೆತನ

11:41 PM Oct 20, 2021 | Shreeram Nayak |

ಬೆಂಗಳೂರು: ಭೂರಹಿತ ಎಸ್ಸಿ, ಎಸ್ಟಿ ಸಮುದಾಯದ ಜನರಿಗೆ ಭೂ ಒಡೆತನ ನೀಡಬೇಕು ಎಂಬುದು ನನ್ನ ಸರಕಾರದ ಸಂಕಲ್ಪವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Advertisement

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಬುಧವಾರ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರಿ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈವರೆಗೆ 1,300 ಜನರಿಗೆ ಭೂ ಒಡೆತನ ನೀಡಲಾಗಿದ್ದು, ಎಸ್ಸಿ, ಎಸ್ಟಿ ಸಮುದಾಯದ ಎಲ್ಲರಿಗೂ ಭೂ ಒಡೆತನ ನೀಡಬೇಕು ಎಂಬುದು ಸರಕಾರದ ಸಂಕಲ್ಪವಾಗಿದೆ. ಸರಕಾರಿ ಜಮೀನು ಲಭ್ಯವಿಲ್ಲದಿದ್ದಲ್ಲಿ ಖಾಸಗಿ ಜಮೀನು ಖರೀದಿಸಿ ನೀಡಲು ಜಿಲ್ಲಾಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ ರುವುದಾಗಿ ಸಿಎಂ ಹೇಳಿದರು.

ನಾನು ಮುಖ್ಯಮಂತ್ರಿ ಆಗಿ ಮೊದಲ ಸಚಿವ ಸಂಪುಟ ಸಭೆಯಲ್ಲೇ ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ ಘೋಷಿಸಿ, 7,600 ಕೋಟಿ ರೂ. ಅನುದಾನ ನೀಡಿದೆ. ಈ ಹಣ ಜನರಿಗೆ ತಲುಪಿ ಅವರ ಬದುಕು ಸುಧಾರಿಸಬೇಕು. ಶಿಕ್ಷಣ, ಉದ್ಯೋಗ ಮತ್ತು ಸ್ವಾವಲಂಬನೆಯ ಸೂತ್ರದೊಂದಿಗೆ ಇಲಾಖೆ ಕೆಲಸ ಮಾಡಬೇಕು ಎಂದರು.

ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಮಾತನಾಡಿ, ಗಾಂಧೀಜಿಯಿಂದ ಮೋದಿಯವರೆಗೆ ದೇಶ ಕಟ್ಟುವ ಕೆಲಸದಲ್ಲಿ ವಾಲ್ಮೀಕಿ ರಾಮಾಯಣದಲ್ಲಿ ಮಾರ್ಗದರ್ಶನ ಸಿಗುತ್ತದೆ. ಮನುಷ್ಯ ಸಮಾಜದ ಪ್ರತಿ ರಂಗದಲ್ಲೂ ಮಾರ್ಗದರ್ಶನ ಸಿಗುವ ರಾಮಾಯಣದ ಮೌಲ್ಯಗಳು ಮನ-ಮಂದಿರಗಳಲ್ಲಿ ನೆಲೆಗೊಳ್ಳಬೇಕು ಎಂದರು.

Advertisement

ಇದನ್ನೂ ಓದಿ:ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

ಸಾಧಕರಿಗೆ ಪ್ರಶಸ್ತಿ ಪ್ರದಾನ
2020ನೇ ಸಾಲಿನಲ್ಲಿ ಉಡುಪಿ ಬ್ರಹ್ಮಾವರದ ಗೌರಿ ಕೊರಗ ಸಹಿತ ಐವರು ಹಾಗೂ 2021ನೇ ಸಾಲಿನಲ್ಲಿ ಆರು ಮಂದಿಗೆ ವಾಲ್ಮೀಕಿ ಪ್ರಶಸ್ತಿ ಪ್ರದಾನಿಸ ಲಾಯಿತು. ಬನಶಂಕರಿ 6ನೇ ಹಂತದಲ್ಲಿ 9.41 ಕೋಟಿ ರೂ. ವೆಚ್ಚದಲ್ಲಿ ನಿರ್ಮಾ ಣಗೊಂಡ ವಾಲ್ಮೀಕಿ ಭವನವನ್ನು ಉದ್ಘಾಟಿಸಲಾಯಿತು. ಬುಡಕಟ್ಟು ಉತ್ಪನ್ನಗಳ ಬಿಡುಗಡೆ, 4 ಬುಡಕಟ್ಟು ರೈತ ಉತ್ಪಾದನ ಸಂಸ್ಥೆಗಳ ಉದ್ಘಾಟನೆ, ಪ.ವರ್ಗಗಳ ಕಲ್ಯಾಣ ಇಲಾಖೆಯ ಸಾಮಾಜಿಕ ಮಾಧ್ಯಮವನ್ನು ಸಿಎಂ ಉದ್ಘಾಟಿಸಿದರು.

ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿಸಿ
ಎಸ್ಸಿ, ಎಸ್ಟಿ ಸಮುದಾಯದ 151 ಜಾತಿಗಳ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಗ್ರಹಿಸಿದರು. ಸಮುದಾಯದ ಬೇಡಿಕೆ ಈಡೇರಿದಾಗ ಮಾತ್ರ ವಾಲ್ಮೀಕಿ ಜಯಂತಿ ಆಚರಣೆ ಸಾರ್ಥಕವಾಗುತ್ತದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಶೇ.50ರೊಳಗೆ ಮೀಸಲಾತಿಯನ್ನು ನಿಭಾಯಿಸಬೇಕು. ಎಲ್ಲ ಸಮುದಾಯಗಳ ಆಶೋತ್ತರಗಳು ಹೆಚ್ಚಾಗಿವೆ. ಜನಸಂಖ್ಯೆ ಮತ್ತು ಆಶೋತ್ತರಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮೀಸಲಾತಿ ಸಂಬಂಧ ಪುನರ್‌ ಚರ್ಚೆ ನಡೆಯಬೇಕಿದೆ. ಇದು ಸುಲಭದ ಕೆಲಸವಲ್ಲ. ಕಾನೂನು ತಜ್ಞರು, ಸಾಮಾಜಿಕ ತಜ್ಞರ ಸಲಹೆ ಪಡೆದು ಕಾನೂನು ಚೌಕಟ್ಟಿನೊಳಗೆ ನ್ಯಾಯ ಒದಗಿಸಲು ಸರ್ವಸಮ್ಮತದ ಕೆಲಸವಾಗಬೇಕು ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next