Advertisement

ಬಾಲ್ಯ ವಿವಾಹ ನಡೆಸಿದರೆ ಗ್ರಾಮದಿಂದ ಬಹಿಷ್ಕಾರ

09:28 PM Mar 25, 2023 | Team Udayavani |

ಮುಂಬೈ: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿನ ಕೆಲ ಬುಡಕಟ್ಟು ಪ್ರಾಬಲ್ಯದ ಗ್ರಾಮಗಳು ಬಾಲ್ಯ ವಿವಾಹ ಪದ್ಧತಿ ಅನುಸರಿಸುವ ಕುಟುಂಬಗಳನ್ನು ಗ್ರಾಮದಿಂದ ಬಹಿಷ್ಕರಿಸಲು ನಿರ್ಧರಿಸಿವೆ.

Advertisement

ವಾಡಾ ಹಾಗೂ ವಿಕ್ರಮಗಢ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಬಾಲ್ಯವಿವಾಹದ ಪಿಡುಗಿನ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪೊಲೀಸರು “ಜನ ಸಂವಾದ ಅಭಿಯಾನ’ ನಡೆಸಿದ್ದರು.

ಈ ಸಮಸ್ಯೆಯನ್ನು ಬಗೆಹರಿಸಲು ಕೈ ಜೋಡಿಸುವಂತೆ ಜನರಲ್ಲಿ ಮನವಿ ಮಾಡಿದ್ದರು. ಅದರಂತೆ, ಗ್ರಾಮಸ್ಥರು ಪೊಲೀಸರಿಗೆ ಬೆಂಬಲ ಸೂಚಿಸಿದ್ದಾರೆ. ಬಾಲ್ಯ ವಿವಾಹ ಪದ್ಧತಿ ಆಚರಿಸುವ ಕುಟುಂಬಗಳನ್ನು ಊರಿನಿಂದಲೇ ಬಹಿಷ್ಕರಿಸುವುದಾಗಿ ಘೋಷಿಸಿವೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಾಳಾ ಸಾಹೇಬ್‌ ಪಾಟೀಲ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next