ಮುಂಬಯಿ: ಕೋವಿಡ್ 19 ಸೋಂಕು ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಅಕೋಲಾ ಮತ್ತು ಅಮರಾವತಿ ಜಿಲ್ಲೆಗಳಲ್ಲಿ ಮತ್ತೆ ಲಾಕ್ ಡೌನ್ ಘೋಷಿಸುವ ಸಾಧ್ಯತೆ ಇದ್ದಿರುವುದಾಗಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ನೂತನ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ: ಇಂದು ರೈತರಿಂದ ದೇಶಾದ್ಯಂತ 4 ತಾಸು ರೈಲು ತಡೆ
ಕಳೆದ ಮೂರು ದಿನಗಳಲ್ಲಿ ಅಕೋಲಾ ಜಿಲ್ಲೆಯಲ್ಲಿ 500ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿದ್ದು, ಈ ಹಿಂದೆ ದಿನಂಪ್ರತಿ 30ರಿಂದ 35 ಕೋವಿಡ್ ಸೋಂಕು ಪ್ರಕರಣ ವರದಿಯಾಗುತ್ತಿತ್ತು ಎಂದು ವಿವರಿಸಿದೆ.
ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ಪ್ರದೇಶದಲ್ಲಿ ಜಿಲ್ಲಾಧಿಕಾರಿ ಶೀಘ್ರವೇ ಲಾಕ್ ಡೌನ್ ಘೋಷಿಸುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.
ಅಮರಾವತಿಯಲ್ಲಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಲ್ಲಿಯೇ ಬರೋಬ್ಬರಿ 1,400 ಕೋವಿಡ್ ಸೋಂಕು ಪ್ರಕರಣ ವರದಿಯಾಗಿದೆ. ಪಂಚಾಯತ್ ಚುನಾವಣೆ, ಹವಾಮಾನ ಬದಲಾವಣೆ ಹಾಗೂ ಜನದಟ್ಟಣೆಯ ಕಾರಣದಿಂದ ಕೋವಿಡ್ ಸೋಂಕು ಹೆಚ್ಚಳವಾಗಲು ಕಾರಣ ಎಂದು ತಿಳಿಸಿದೆ.
ರಾಜ್ಯದ ಕೆಲವೆಡೆ ಕೋವಿಡ್ ಸೋಂಕು ಎಚ್ಚರಿಕೆ ಗಂಟೆಯಾಗಿದ್ದು, ಇದರಿಂದ ಮತ್ತೊಂದು ಲಾಕ್ ಡೌನ್ ಹೇರುವ ಪರಿಸ್ಥಿತಿ ಎದುರಿಸುವಂತಾಗಿದೆ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಂಗಳವಾರ ತಿಳಿಸಿದ್ದರು.