Advertisement

Maharashtra: ಶಿವಾಜಿ ಪ್ರತಿಮೆ ಕುಸಿತ ಪ್ರಕರಣ… ಪೊಲೀಸರಿಂದ ಮೊದಲ ಬಂಧನ

10:20 AM Aug 30, 2024 | Team Udayavani |

ಮಹಾರಾಷ್ಟ್ರ: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಚನಾತ್ಮಕ ಸಲಹೆಗಾರನನ್ನು ಶುಕ್ರವಾರ ಬಂಧಿಸಲಾಗಿದ್ದು ಇದರೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿ ಮೊದಲ ಬಂಧನವಾದಂತಾಗಿದೆ.

Advertisement

ಕೊಲ್ಹಾಪುರದ ನಿವಾಸಿಯಾಗಿರುವ ಚೇತನ್ ಪಾಟೀಲ್ ಎಂಬಾತನನ್ನು ಕೊಲ್ಲಾಪುರ ಅಪರಾಧ ದಳ ಮತ್ತು ಮಾಳವನ್ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಶುಕ್ರವಾರ (ಆಗಸ್ಟ್ 30) ಮುಂಜಾನೆ ಬಂಧಿಸಿದ್ದಾರೆ. ಬಳಿಕ ಆತನನ್ನು ಮಾಲ್ವಾನ್ ಪೊಲೀಸ್ ಕಸ್ಟಡಿಗೆ ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಹಿಂದೆ, ಪೊಲೀಸರು ಗುತ್ತಿಗೆದಾರ ಮತ್ತು ವಾಸ್ತುಶಿಲ್ಪಿ ಜೈದೀಪ್ ಆಪ್ಟೆ ಮತ್ತು ರಚನಾತ್ಮಕ ಸಲಹೆಗಾರ ಚೇತನ್ ಪಾಟೀಲ್ ಅವರನ್ನು ಆರೋಪಿಗಳೆಂದು ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದರು. ಆದರೆ ಈ ನಡುವೆ ಚೇತನ್ ನನಗೂ ವಿಗ್ರಹ ಕುಸಿದು ಬಿದ್ದಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಅಲ್ಲದೆ ಪ್ರತಿಮೆ ನಿರ್ಮಾಣದ ಕೆಲಸ ನಾನು ಮಾಡಿರುವುದಲ್ಲ ಥಾಣೆ ಮೂಲದ ಕಂಪನಿಯು ಪ್ರತಿಮೆಗೆ ಸಂಬಂಧಿಸಿದ ಕೆಲಸವನ್ನು ಮಾಡಿದೆ, “ಪ್ರತಿಮೆಯನ್ನು ಸ್ಥಾಪಿಸುವ ವೇದಿಕೆಯಲ್ಲಿ ಕೆಲಸ ಮಾಡಲು ನನ್ನನ್ನು ಕೇಳಲಾಗಿತ್ತು ಎಂದು ಪಾಟೀಲ್ ಹೇಳಿದ್ದರು. ಆದರೆ ಇಂದು (ಆಗಸ್ಟ್ 30) ಮುಂಜಾನೆ ಚೇತನ್ ನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next