Advertisement

ಮೇ 3ರ ನಂತರ ರೆಡ್ ಜೋನ್ ಗಳಲ್ಲಿ ಕಠಿಣ ನಿರ್ಬಂಧ ಮುಂದುವರಿಕೆ: ಮಹಾರಾಷ್ಟ್ರ ಸಿಎಂ

08:23 AM May 02, 2020 | Nagendra Trasi |

ಮುಂಬೈ: ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮೇ 3ರಂದು ಲಾಕ್ ಡೌನ್ ಅಂತ್ಯಗೊಂಡ ನಂತರವೂ ಕೂಡಾ ರೆಡ್ ಜೋನ್ ಗಳಲ್ಲಿನ ನಿರ್ಬಂಧಗಳನ್ನು ಸಡಿಲಿಸುವ ಪ್ರಶ್ನೆಯೇ ಇಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಶುಕ್ರವಾರ ತಿಳಿಸಿದ್ದಾರೆ.

Advertisement

ವಿಡಿಯೋ ಕಾನ್ಫರೆನ್ಸ್ ಮೂಲಕ ಪತ್ರಿಕಾಗೋಷ್ಠಿ ನಡೆಸಿದ ಅವರು, ಮೇ 3ರ ನಂತರವೂ ರೆಡ್ ಜೋನ್ ಗಳಲ್ಲಿ ಕಠಿಣ ನಿರ್ಬಂಧಗಳನ್ನು ಮುಂದುವರಿಸಲಾಗುವುದು. ರೆಡ್ ಜೋನ್ ಗಳನ್ನು ತೆರೆಯುವುದಿಲ್ಲ. ಅಂದರೆ ಮುಂಬೈ, ಪುಣೆ ಹಾಗೂ ನಾಗ್ಪುರ್ ನಗರಗಳಲ್ಲಿ ಮೇ 3ರ ನಂತರ ಲಾಕ್ ಡೌನ್ ಮುಗಿದರೂ ಯಾವುದೇ ಸಡಿಲಿಕೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಹಾರಾಷ್ಟ್ರ ಸರ್ಕಾರ ಕೋವಿಡ್ 19 ವೈರಸ್ ವಿರುದ್ಧ ಹೋರಾಡುತ್ತಿದ್ದು, ಜನರ ಜೀವ ಉಳಿಸುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ. ಕೆಲವು ನಿಗದಿತ ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ಮೇ 3ರ ನಂತರ ನಿರ್ಬಂಧ ಸಡಿಲಿಕೆ ಮಾಡಲಾಗುವುದು ಎಂದು ಸಿಎಂ ಉದ್ಧವ್ ಹೇಳಿದರು.

ಆದರೆ ಏನೇ ಆಗಲಿ ಜನರು ಎಚ್ಚರದಿಂದ ಇರಬೇಕು. ಮತ್ತಷ್ಟು ಸಹಕಾರ ನೀಡಬೇಕು ಇಲ್ಲದಿದ್ದರೆ ನಾವು ಇಷ್ಟು ದಿನಗಳ ಕಾಲ ಸಾಧಿಸಿದ ಸಾಧನೆ ನಷ್ಟವಾಗಲಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next