Advertisement

ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ 8,240 ಪ್ರಕರಣ ಪತ್ತೆ, ಸಾವಿನ ಸಂಖ್ಯೆ 12,000ಕ್ಕೆ ಏರಿಕೆ

11:24 PM Jul 20, 2020 | Nagendra Trasi |

ಮುಂಬೈ:ವಾಣಿಜ್ಯ ನಗರಿ ಮುಂಬೈನಲ್ಲಿ ಕೋವಿಡ್ 19 ಅಟ್ಟಹಸ ಮುಂದುವರಿದಿದ್ದು, ಈಗಾಗಲೇ ಕೋವಿಡ್ 19 ಸೋಂಕು 3,18,695ಕ್ಕೆ ಏರಿಕೆಯಾಗಿದೆ. ಅಲ್ಲದೇ ಕಳೆದ 24ಗಂಟೆಯಲ್ಲಿ 8,240 ಪ್ರಕರಣಗಳು ವರದಿಯಾಗಿದೆ ಎಂದು ರಾಜ್ಯ ಆರೋಗ್ಯ ಸಚಿವಾಲಯ ಅಂಕಿ ಅಂಶ ನೀಡಿದೆ.

Advertisement

ಕೋವಿಡ್ 19 ಮಹಾಮಾರಿಗೆ ರಾಜ್ಯ ಕಳೆದ 24ಗಂಟೆಯಲ್ಲಿ 176 ಸಾವಿಗೆ ಸಾಕ್ಷಿಯಾಗಿದೆ. ಅಷ್ಟೇ ಅಲ್ಲ ಈವರೆಗೆ ಒಟ್ಟು ಸಾವನ್ನಪ್ಪಿದ್ದವರ ಸಂಖ್ಯೆ 12030ಕ್ಕೆ ತಲುಪಿದೆ ಎಂದು ವರದಿ ವಿವರಿಸಿದೆ.

ಈಗಾಗಲೇ ಕೋವಿಡ್ 19 ಸೋಂಕಿಗೆ ಒಳಗಾದ 5,460ಮಂದಿ ಗುಣಮುಖರಾಗಿದ್ದಾರೆ. ಈವರೆಗೆ ಮಹಾರಾಷ್ಟ್ರದಲ್ಲಿ ಕೋವಿಡ್ 19 ಸೋಂಕು ಪೀಡಿತ ಸುಮಾರು 1,75,029 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿರುವುದಾಗಿ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಿದೆ.

ಮುಂಬೈನಲ್ಲಿ ಕಳೆದ 24ಗಂಟೆಯಲ್ಲಿ 1043 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 1,02,267 ಮಂದಿಗೆ ಸೋಂಕು ತಗುಲಿದೆ. 41ಮಂದಿ ಸಾವನ್ನಪ್ಪಿರುವುದಾಗಿ ನಗರಾಭಿವೃದ್ಧಿ ಮಂಡಳಿ ಪ್ರಕಟಣೆಯಲ್ಲಿ ಹೇಳಿದೆ.

ನ್ಯೂ ಮುಂಬೈ ಮೆಟ್ರೋಪಾಲಿಟಿಯಯನ್ ಪ್ರದೇಶದಲ್ಲಿ ಕಳೆದ 24ಗಂಟೆಯಲ್ಲಿ 286 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ. ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, 11,712ಕ್ಕೆ ಏರಿಕೆಯಾಗಿದೆ. ಇಂದು ಇಬ್ಬರು ಕೋವಿಡ್ 19 ಸೋಂಕಿತರು ಸಾವನ್ನಪ್ಪಿದ್ದು, ಮೆಟ್ರೊಪಾಲಿಟಿಯನ್ ಪ್ರದೇಶದಲ್ಲಿನ ಸಾವಿನ ಸಂಖ್ಯೆ 345ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next