ನಾಗ್ಪುರ: ಪುನರ್ವಸತಿ ಕಾರ್ಯಕ್ರಮದಡಿ ಮಹಾರಾಷ್ಟ್ರದ ನಾಗ್ಪುರ ನೂತನ ನ್ಯಾಯಾಲಯದ ಕಟ್ಟಡಕ್ಕಾಗಿ ಉತ್ಕೃಷ್ಟ ದರ್ಜೆಯ ತೇಗದ ಮರದ ಪೀಠೊಪಕರಣಗಳನ್ನು ತಯಾರಿಸಲಾಗುತ್ತಿದೆ. ಅಂದ ಹಾಗೆ ಇವುಗಳನ್ನು ತಯಾರಿ ಮಾಡುತ್ತಿರುವುದು ಯಾರು ಗೊತ್ತೇ? ಮಹಾರಾಷ್ಟ್ರದ ನಾಲ್ಕು ಜೈಲಿಗಳಲ್ಲಿರುವ ಕೈದಿಗಳು!
ಹೌದು, ಈ ಕುರಿತು ಮಾಹಿತಿ ನೀಡಿರುವ ನಾಗ್ಪುರ ಕೇಂದ್ರ ಕಾರಾಗೃಹದ ಅಧೀಕ್ಷಕ ಅನೂಪ್ ಕುಮ್ರೆ, “ಇದರಿಂದ ಕೈದಿಗಳಿಗೆ ಉದ್ಯೋಗವಕಾಶ ದೊರೆಯಲಿದೆ. ನುರಿತ, ಅರೆ ಕೌಶಲ್ಯ ಮತ್ತು ಕೌಶಲ್ಯರಹಿತ ವಿಭಾಗಗಳಲ್ಲಿ ಅವರಿಗೆ ವೇತನ ನೀಡಲಾಗುತ್ತದೆ.
ವಿಶೇಷವೆಂದರೆ, ನಾಗ್ಪುರ ಸೆಷನ್ಸ್ ನ್ಯಾಯಾಲಯದ ನೂತನ ಕಟ್ಟಡದ ನ್ಯಾಯಾಧೀಶರು ಮತ್ತು ಇತರೆ ಸಿಬ್ಬಂದಿ ಕುಳಿತುಕೊಳ್ಳಲು ಕುರ್ಚಿಗಳನ್ನು ಅಂತಹ ನ್ಯಾಯಾಲಯಗಳಿಂದಲೇ ಶಿಕ್ಷೆಗೆ ಒಳಗಾದ ಕೈದಿಗಳು ತಯಾರಿಸುತ್ತಿದ್ದಾರೆ,’ ಎಂದು ಹೇಳಿದ್ದಾರೆ.
“ನೂತನ ಕಟ್ಟಡಕ್ಕಾಗಿ ನಾಗ್ಪುರ ಮಾತ್ರವಲ್ಲದೇ ಕೊಲ್ಹಾಪುರ, ನಾಸಿಕ್ ಮತ್ತು ಯರವಾಡ ಜೈಲಿನ ಕಾಪೆìಂಟ್ರಿ ವಿಭಾಗದ ಕೈದಿಗಳು, 22 ರೀತಿಯ ಪೀಠೊಪಕರಣಗಳನ್ನು ತಯಾರಿಸುವಲ್ಲಿ ನಿರತರಾಗಿದ್ದಾರೆ,’ ಎಂದು ತಿಳಿಸಿದ್ದಾರೆ.