ನವದೆಹಲಿ: ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ತನ್ನೊಂದಿಗೆ ಕೈಜೋಡಿಸಿರುವ ಒಬ್ಬ ಶಾಸಕ ಸೋತರೂ ಕೂಡಾ ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಶನಿವಾರ (ಜುಲೈ 16) ತಾವು ಪತನಗೊಳಿಸಿರುವ ಮಹಾ ವಿಕಾಸ್ ಅಘಾಡಿ ಪಕ್ಷಕ್ಕೆ ಸವಾಲು ಹಾಕಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಸಿರಿಗನ್ನಡಂ ಗೆಲ್ಗೆ: ಸರ್ಕಾರದ ಆದೇಶ ಪ್ರತಿಯಲ್ಲಿ ತುಂಬಿ ತುಳುಕುತ್ತಿದೆ ವ್ಯಾಕರಣ ದೋಷ!
ಶಿವಸೇನಾದಿಂದ ಬಂಡಾಯ ಸಾರಿ ನನ್ನೊಂದಿಗೆ ಬಂದಿರುವ ಎಲ್ಲಾ 50 ಶಾಸಕರು ಮುಂಬರುವ ಚುನಾವಣೆಯಲ್ಲಿ ಜಯಗಳಿಸುತ್ತಾರೆ ಎಂಬ ವಿಶ್ವಾಸವಿದೆ. ಒಂದು ವೇಳೆ ಯಾರಾದರೊಬ್ಬರು ಸೋತರು ಕೂಡಾ ನಾನು ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಶಿಂಧೆ ಅವರು ತಮ್ಮ ಬೆಂಬಲಿಗ ಶಾಸಕರಲ್ಲಿ ಒಬ್ಬರಾದ ಅಬ್ದುಲ್ ಸತ್ತಾರ್ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಶಿವಸೇನಾ ಮತ್ತು ಭಾರತೀಯ ಜನತಾ ಪಕ್ಷ ಮೈತ್ರಿಕೂಟ 200 ಸ್ಥಾನಗಳಲ್ಲಿ ಜಯಗಳಿಸಲಿದೆ. ಇಲ್ಲದಿದ್ದರೆ ರಾಜಕೀಯ ತ್ಯಜಿಸುವುದಾಗಿ ಏಕನಾಥ ಶಿಂಧೆ ಪುನರುಚ್ಚರಿಸಿದ್ದಾರೆ.
ಇತ್ತೀಚೆಗಿನ ನಾಟಕೀಯ ಬೆಳವಣಿಗೆಯಲ್ಲಿ ಬಂಡಾಯವೆದ್ದ ಪರಿಣಾಮ ಅಂದಿನ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಮಹಾವಿಕಾಸ್ ಅಘಾಡಿ ಸರ್ಕಾರ ಪತನಗೊಂಡ ಬಗ್ಗೆ ಉಲ್ಲೇಖಿಸಿದ ಶಿಂಧೆ, ಅದರ ಸಂಭವನೀಯ ಪರಿಣಾಮಗಳ ಬಗ್ಗೆ ತಾನು ಚಿಂತೆಗೊಳಗಾಗಿದ್ದದನ್ನು ಒಪ್ಪಿಕೊಂಡಿರುವುದಾಗಿ ವರದಿ ತಿಳಿಸಿದೆ.