Advertisement
ಎಂಎಸ್‌ಆರ್‌ಟಿಸಿ ತನ್ನ ಮೊದಲ ಇ-ಬಸ್ ಸೇವೆಯನ್ನು ಪುಣೆ ಮತ್ತು ಅಹಮದ್ ನಗರ ನಡುವೆ ಜೂ.1ರಂದು ಪ್ರಾರಂಭಿಸಿತ್ತು. ಶಿವಾಯ… ಎಂಎಸ್‌ಆರ್‌ಟಿಸಿಯ ಹವಾನಿಯಂತ್ರಿತ ಇ-ಬಸ್ ಎರಡು ನಗರಗಳ ನಡುವಿನ ಸುಮಾರು 180 ಕಿ.ಮೀ. ದೂರವನ್ನು ಸುಮಾರು 4 ಗಂಟೆಗಳಲ್ಲಿ ಕ್ರಮಿಸುತ್ತದೆ. ಈ ಬಸ್‌ಗಳ ಗರಿಷ್ಠ ವೇಗ ಗಂಟೆಗೆ 80 ಕಿ. ಮೀ. ಇರಲಿದೆ. ಪ್ರಸ್ತುತ ಮುಂಬಯಿ ಮತ್ತು ಪುಣೆ ನಡುವೆ ಶಿವನೇರಿ ಬಸ್ ಸೇವೆಗಳ 158 ಟ್ರಿಪ್‌ಗ್ಳನ್ನು ನಿರ್ವಹಿಸಲಾಗುತ್ತಿದೆ. ಸರಾಸರಿ 3,300 ಪ್ರಯಾಣಿಕರು ಪ್ರಯಾಣಿಸುತ್ತಾರೆ.
ಮುಂಬಯಿ ಮತ್ತು ಪುಣೆ ನಡುವಿನ ಹೆಚ್ಚಿನ ಶಿವನೇರಿ ಬಸ್ ಸೇವೆಗಳನ್ನು ಕ್ರಮೇಣ ಶಿವಾಯ್ ಹೆಸರಿಗೆ ಬದಲಾಯಿಸಲಾಗುವುದು. ಮೊದಲ ಹಂತದಲ್ಲಿ ಈ ವರ್ಷದ ಅಂತ್ಯದ ವೇಳೆಗೆ ಪುಣೆ, ಬೊರಿವಲಿ ಮತ್ತು ಥಾಣೆ ನಡುವಿನ ಮಾರ್ಗಗಳಲ್ಲಿ ಸೇವೆಯನ್ನು ಆರಂಭಿಸಲಾಗುವುದು. ಅಸ್ತಿತ್ವದಲ್ಲಿರುವ ಶಿವನೇರಿ ಫ್ಲೀಟ್ ಅನ್ನು ಇತರ ಮಾರ್ಗಗಳಲ್ಲಿ ನಿಯೋ ಜಿಸಲಾಗುವುದು ಎಂದು ಇ-ಶಿವಾಯ್ ಬಸ್‌ಗಳ ಯೋಜನೆಯನ್ನು ವಿವರಿಸುತ್ತಾ ಎಂಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ಹೇಳಿದರು. ಸಂಪೂರ್ಣ ಚಾರ್ಜ್ ಮಾಡಲಾದ ಶಿವಾಯ್ 300 ಕಿ.ಮೀ. ದೂರ ಓಡಬಲ್ಲದು. ಇದನ್ನೂ ಓದಿ : ಧರ್ಮ ಆಧಾರಿತ ಜನಸಂಖ್ಯಾ ಅಸಮತೋಲನವನ್ನು ನಿರ್ಲಕ್ಷಿಸುವಂತಿಲ್ಲ: ಮೋಹನ್ ಭಾಗವತ್
Related Articles
ನಿಗಮವು 700 ನಾನ್ ಎಸಿ ಬಸ್‌ಗಳು ಮತ್ತು 150 ಎಸಿ ಎಲೆಕ್ಟ್ರಿಕ್ ಕೌಂಟರ್ ಪಾರ್ಟ್‌ಗಳ ಖರೀದಿಗೆ ಆದೇಶ ನೀಡಿದೆ. 150 ಬಸ್‌ಗಳಲ್ಲಿ 100 ಮುಂಬಯಿ-ಪುಣೆ ಮಾರ್ಗದಲ್ಲಿ ಪರಿಚಯಿಸಲಾಗುವುದು ಮತ್ತು ಉಳಿದವುಗಳನ್ನು ರಾಜ್ಯಗಳ ಇತರ ಅಂತರ-ನಗರ ಮಾರ್ಗಗಳಲ್ಲಿ ಪರಿಚಯಿಸಲಾಗುವುದು. ಕೇಂದ್ರ ಸರಕಾರದ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವೆಹಿಕಲ್ಸ… (ಎಫ್‌ಎಎಂಇ) ಯೋಜನೆಯ ಅಡಿಯಲ್ಲಿ ನಾವು 1,000 ಎಲೆಕ್ಟ್ರಿಕ್ ಬಸ್‌ಗಳನ್ನು ಹಂತ-ಹಂತವಾಗಿ ಪಡೆಯುತ್ತೇವೆ. ಜೂನ್ ಅಂತ್ಯದ ವೇಳೆಗೆ ಅಥವಾ ಜುಲೈ ಮೊದಲ ವಾರದೊಳಗೆ 150 ಎಲೆಕ್ಟ್ರಿಕ್ ಬಸ್‌ಗಳ ಮೊದಲ ಸ್ಲಾಟ್ ಅನ್ನು ನಾವು ಪಡೆಯುವ ನಿರೀಕ್ಷೆಯಿದೆ ಎಂದು ಅಧಿಕಾರಿ ಹೇಳಿದರು.
Advertisement