ಮುಂಬಯಿ: ಬೃಹನ್ಮುಂಬಯಿಯಲ್ಲಿ ಕಳೆದ ಎರಡೂವರೆ ದಶಕಗಳಿಂದ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆಗೈಯುತ್ತಿರುವ ಮಹಾರಾಷ್ಟ್ರ ಕೊಂಕಣ್ ಅಸೋಸಿಯೇಶನ್ ಇದರ ರಜತ ಮಹೋತ್ಸವ ಸಂಭ್ರಮವು ಮೇ 1ರಂದು ಸಂಜೆ ಘಾಟ್ಕೊàಫರ್ ಪೂರ್ವದ ಪಂತ್‌ನಗರದ ಇನೆ#ಂಟ್ ಜೀಸಸ್ ಚರ್ಚ್ ಶಾಲಾ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ಇನೆ#ಂಟ್ ಜೀಸಸ್ ಚರ್ಚ್‌ನ ಪ್ರಧಾನ ಧರ್ಮಗುರು ರೆ| ಫಾ| ನೆಲ್ಸನ್ ಸಲ್ಡಾನ್ಹಾ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು. ಎಂಕೆಎ ಅಧ್ಯಕ್ಷೆ ಬೆನೆಡಿಕ್ಟಾ ಬಿ.ರೆಬೆಲ್ಲೊ ಅಧ್ಯಕ್ಷತೆಯಲ್ಲಿ ನೆರವೇರಿದ ಕಾರ್ಯಕ್ರಮದಲ್ಲಿ ದಿವೋ ಕೊಂಕಣಿ ಸಾಪ್ತಾಹಿಕದ ಪ್ರಕಾಶಕ, ಸಂಪಾದಕ ಲಾರೆನ್ಸ್ ಕುವೆಲ್ಲೋ, ಕೊಂಕಣಿ ನಾಟಕಕಾರ, ಹಾಸ್ಯ ನಟ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ಅತಿಥಿ ಗಣ್ಯರಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಇದೇ ಶುಭಾವಸರದಲ್ಲಿ ಎಂಕೆಎ ಸ್ಥಾಪಕ ಸದಸ್ಯೆ ಹಾಗೂ ಮಾಜಿ ಅಧ್ಯಕ್ಷೆ ಸೆಲಿನ್ ಡಿ’ಸೋಜಾ ಅವರನ್ನು ಸಮ್ಮಾನಿಸಿ ಅಭಿನಂದಿಸಿದರು.
ಸಂಸ್ಥೆಗಳ ಪರಮ ಉದ್ದೇಶವೇ ಸಮಾಜ ಸೇವೆ ಆಗಬೇಕು. ಎಲ್ಲಿ ಸದಸ್ಯರು ಸಂಸ್ಥೆಗೆ ದಕ್ಷರಾಗಿ ಸಾಂಘಿಕತೆಯೊಂದಿಗೆ ಸಾಗುತ್ತಾ ನಿಷ್ಠಾವಂತ ಸೇವೆ ಸಲ್ಲಿಸುತ್ತಾರೋ ಅಂತಹ ಸೇವೆಯೇ ಫಲಪ್ರದ ಫಲಿತಾಂಶ ನೀಡಬಲ್ಲವು. ಅಂತಹ ಸಂಸ್ಥೆಗಳನ್ನು ಸಮಾಜ ಗುರುತಿಸುವುದು. ದಕ್ಷಸೇವೆಯೇ ಪ್ರಸನ್ನತೆಯನ್ನು ಪ್ರಾಪ್ತಿಸುವುದು ಮತ್ತು ಇಂತಹ ಸೇವೆಯು ಸದಸ್ಯ ಸೇವಕರ ಪಾಲಿಗೆ ಪುಣ್ಯಯುತವಾಗಬಲ್ಲದು ಎಂದು ಫಾ| ನೆಲ್ಸನ್ ಸಲ್ಡಾನ್ಹಾ ಹೇಳಿದರು.
ಕಳೆದ ಎರಡೂವರೆ ದಶಕಗಳಿಂದ ನಿರಂತರವಾಗಿ ಸೇವಾಪ್ರಾಪ್ತ ಎಂಕೆಎ ಸಂಸ್ಥೆಯು ಭವಿಷ್ಯತ್ತಿನ ಪೀಳಿಗೆಯಲ್ಲಿ ಕೊಂಕಣಿ ಸಂಸ್ಕೃತಿಯನ್ನು ರೂಢಿಸುತ್ತಾ ಮಾತೃಭಾಷೆಯನ್ನು ಬೆಳೆಸಿ ಪೋಷಿಸುವಲ್ಲಿ ಶ್ರಮಿಸಿದೆ. ಜೊತೆಗೆ ಸಾಮಾಜಿಕ ಕಳಕಲಿ ಹೊಂದಿ ಸಮಾ ಜಪರ ಸೇವೆಯಲ್ಲಿ ಮಗ್ನಗೊಂಡು ನಿಸ್ವಾರ್ಥ ಸೇವೆಯಲ್ಲಿ ಯಶಕಂಡಿದೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಬೆನೆಡಿಕ್ಟಾ ಬಿ.ರೆಬೆಲ್ಲೊ ತಿಳಿಸಿದರು.
ವಸಾಯಿ ಕೊಂಕಣಿ ಅಸೋಸಿಯೇಶನ್ ಅಧ್ಯಕ್ಷ ಜೋನ್ ಡಿ’ಸೋಜಾ, ಕೊಂಕಣಿ ವೆಲ್ಫೆàರ್ ಅಸೋಸಿಯೇಶನ್ ವಿರಾರ್ ಕಾರ್ಯದರ್ಶಿ ವಿಕ್ಟರ್ ಡಿ. ಪಾಯ್ಸ, ಕೊಂಕಣಿ ಸೇವಾ ಮಂಡಳ್ ಕಾರ್ಯದರ್ಶಿ ವಿಕ್ಟರ್ ಡೆಸಾ, ಮೆಂಗ್ಳೂರಿಯನ್ ವೆಲ್ಫೆàರ್ ಅಸೋಸಿಯೇಶನ್ ಅಧ್ಯಕ್ಷ ಲಾರೇನ್ಸ್ ಡಿ’ಸೋಜಾ ಕಮಾನಿ, ಕ್ಯಾಥೋಲಿಕ್ ಸಭಾ ಕಾಂಜೂರ್‌ಮಾರ್ಗ್ ಇದರ ಕಾರ್ಯದರ್ಶಿ ವಾಲೆ°àಸ್ ರೆಗೋ, ಕೊಂಕಣಿ ಸಭಾ ಮುಲುಂಡ್ ಅಧ್ಯಕ್ಷ ಥೋಮಸ್ ಪಿಂಟೋ, ವಕೋಲಾಚೊ ತಾಳೊ ಅಧ್ಯಕ್ಷ ವಿಲಿಯಂ ಡಿ’ಸೋಜಾ, ರಿಚ್ಚಾರ್ಡ್ ಕ್ರಾಸ್ತಾ ಕಲ್ವಾ, ಪೀಟರ್ ರೆಬೆರೋ ಮರೋಳ್, ಸಿಲ್ವೆಸ್ಟರ್ ಡಿಕೋಸ್ಟಾ ಸಾಕಿನಾಕಾ, ರೋಕಿ ಕ್ರಾಸ್ತ ಮಹಾಕಾಳಿ, ಜೋಸೆಫ್ ಡಿ’ಸೋಜಾ ಜೆರಿಮೆರಿ ಉಪಸ್ಥಿತರಿದ್ದು ತಮ್ಮ ಸಂಸ್ಥೆಯ ಸೇವಾ ವೈಖರಿಯನ್ನು ತಿಳಿಸಿ ರಜತ ಸಂಭ್ರದಲ್ಲಿನ ಎಂಕೆಎ ಸಂಸ್ಥೆಗೆ ಶುಭಹಾರೈಸಿದರು.
ಕು| ರೋಶ್ನಿ ಕ್ರಾಸ್ತ ಮತ್ತು ಮಾ| ಮ್ಯಾನುಯೆಲ್ ಫೆರ್ನಾಂಡಿಸ್ ಕೊಂಕಣಿ ಹಾಡುಗಳನ್ನು ಪ್ರಸ್ತುತ ಪಡಿಸಿದರು. ಎಂಕೆಎ ಕೋಶಾಧಿಕಾರಿ ಪ್ರಿತೇಶ್ ಕಾಸ್ತೆಲಿನೋ ಸ್ವಾಗತಿಸಿದರು. ಕಾರ್ಯದರ್ಶಿ ಸ್ಟೆಫನ್ ಲೊಬೋ ಅತಿಥಿಗಳನ್ನು ಪರಿಚಯಿಸಿ ಕಾರ್ಯ ಕ್ರಮ ನಿರ್ವಹಿಸಿದರು. ಸಂಸ್ಥಾಪಕ ಲಿಯೋ ಫೆರ್ನಾಂಡಿಸ್ ಜೆರಿಮೆರಿ ಪ್ರಸ್ತಾವನೆಗೈದು ಸಂಸ್ಥೆಯ ಆರಂಭ ಮತ್ತು ಮುನ್ನಡೆಯನ್ನು ಮೆಲುಕು ಹಾಕುತ್ತಾ ವಂದಿಸಿದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್