Advertisement

ನವಲಖ ಗೃಹಬಂಧ ಮುಕ್ತಿ ಪ್ರಶ್ನಿಸಿ ಮಹಾ ಸರಕಾರ ಸುಪ್ರೀಂ ಕೋರ್ಟಿಗೆ

11:51 AM Oct 03, 2018 | Team Udayavani |

ಹೊಸದಿಲ್ಲಿ : ಭೀಮಾ ಕೋರೇಗಾಂವ್‌ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೆ ಗುರಿಯಾಗಿದ್ದ ಐವರು ಮಾನವ ಹಕ್ಕು ಕಾರ್ಯಕರ್ತರ ಪೈಕಿ ಒಬ್ಬರಾಗಿರುವ ಗೌತಮ್‌ ನವಲಖ ಅವರನ್ನು ದಿಲ್ಲಿ ಹೈಕೋರ್ಟ್‌ ಬಿಡುಗಡೆ ಮಾಡಿರುವ ಆದೇಶವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರಕಾರ ಸುಪ್ರೀಂ ಕೋರ್ಟ್‌ ಮೆಟ್ಟಲೇರಿದೆ. 

Advertisement

ಮಹಾರಾಷ್ಟ್ರದ ಪರವಾಗಿ ವಕೀಲ ನಿಷಾಂತ್‌ ಕಟನೇಶ್ವರ್‌ ಅವರು ದಿಲ್ಲಿ ಹೈಕೋರ್ಟ್‌ ಆದೇಶದ ವಿರುದ್ಧ ಮನವಿಯನ್ನು ಸುಪ್ರಿಂ ಕೋರ್ಟ್‌ ನಲ್ಲಿ ಸಲ್ಲಿಸಿದರು. 

ಇತರ ನಾಲ್ವರು ಮಾನವ ಹಕ್ಕು ಕಾರ್ಯಕರ್ತರೊಂದಿಗೆ ಐದು ವಾರಗಳ ಹಿಂದೆ ಬಂಧಿಸಲ್ಪಟ್ಟಿದ್ದ  65ರ ಹರೆಯದ ಗೌತಮ್‌ ನವಲಖ ಅವರನ್ನು ಕಳೆದ ಸೋಮವಾರ ದಿಲ್ಲಿ ಹೈಕೋರ್ಟ್‌ ಗೃಹ ಬಂಧನದಿಂದ ಮುಕ್ತಗೊಳಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next