Advertisement
ಸಭೆಯ ಅನಂತರ ಮಾಧ್ಯಮಗಳ ಜತೆ ಮಾತಾಡಿದ ಬಿಜೆಪಿ ಶಾಸಕ ಆಶಿಶ್ ಶೇಲಾರ್ ಅವರು, ಇಂದಿನ ಸಭೆಯಲ್ಲಿ ನ. 30ರಂದು ವಿಧಾನಸಭೆಯಲ್ಲಿ ನಡೆಯುವ ವಿಶ್ವಾಸ ಮತದ ವೇಳೆ ಪಕ್ಷ ಬಹುಮತ ಸಾಬೀತುಪಡಿಸಲು ಹಾಗೂ ಗೆಲ್ಲುವ ಕುರಿತು ಕಾರ್ಯತಂತ್ರಗಳನ್ನು ರೂಪಿಸಲಾಗಿದೆ ಎಂದರು.
ರಾಜ್ಯದಲ್ಲಿ ಫಡ್ನವೀಸ್ ಮತ್ತು ಅಜಿತ್ ಪವಾರ್ ಅವರ ನೇತೃತ್ವದಲ್ಲಿ ಸ್ಥಿರ ಮತ್ತು ಪ್ರಬಲ ಸರಕಾರ ನೀಡಲಾಗುವುದು. ರಾಜ್ಯದ ಅಭಿವೃದ್ಧಿ ವೇಗವಾಗಲಿದೆ ಎಂದೂ ಅವರು ಸ್ಪಷ್ಟಪಡಿಸಿದರು. ಫಡ್ನವೀಸ್ – ಪವಾರ್ ಅವರು ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ರಾಜ್ಯದ ಜನರಲ್ಲಿ ಸಂತೋಷದ ವಾತಾವರಣವಿದೆ ಎಂದು ಅವರು ಸ್ಪಷ್ಟಪಡಿಸಿದರು.
Related Articles
ಬಿಜೆಪಿ ನಾಯಕರನ್ನು ಎಲ್ಲಿಗೂ ಸ್ಥಳಾಂತರಿಸುವುದಿಲ್ಲ. ನಮಗೆ ನಮ್ಮ ಶಾಸಕರ ಮೇಲೆ ನಂಬಿಕೆಯಿದೆ. ಅವರಿಗೆ ಪಕ್ಷದ ಬಗ್ಗೆ ನಿಷ್ಠೆ ಇದೆ. ಆದರೆ ಬೇರೆ ಪಕ್ಷಗಳ ನಾಯಕರಿಗೆ ತಮ್ಮ ಶಾಸಕರ ಮೇಲೆ ವಿಶ್ವಾಸವಿಲ್ಲ. ಆದ್ದರಿಂದ ಹೊಟೇಲ್‌ಗಳಿಗೆ ಕರೆದುಕೊಂಡು ಹೋಗಿ ಇರಿಸಲಾಗುತ್ತದೆ. ಎನ್‌ಸಿಪಿ – ಶಿವಸೇನೆ ಶಾಸಕರನ್ನು ಹೊಟೇಲ್‌ಗಳಲ್ಲಿ ಬಂಧಿ ಮಾಡಿದೆ. ಆದರೆ ಬಿಜೆಪಿ ಶಾಸಕರನ್ನು ಎಲ್ಲಿಗೂ ಸ್ಥಳಾಂತರಗೊಳಿಸುವುದಿಲ್ಲ ಎಂದು ಹೇಳಿದರು.
Advertisement
ಆಪರೇಷನ್ ಇಲ್ಲರಾಜ್ಯದಲ್ಲಿ ಆಪರೇಷನ್ ಕಮಲ ಆಗಲಿ, ಆಪರೇಶನ್ ದೇವೇಂದ್ರ ಆಗಲಿ ಮತ್ತು ಆಪರೇಷನ್ ಅಜಿತ್ ಪವಾರ್ ರಾಜ್ಯದಲ್ಲಿ ಕಾರ್ಯಾಚರಣೆಯಲ್ಲಿಲ್ಲ ಎಂದು ಅವರು ಹೇಳಿದರು. ಬಿಜೆಪಿ ಶಾಸಕರ ಸಭೆಯ ಬಗ್ಗೆ ಹೇಳುವ ಜತೆಗೆ, ಮಾತನಾಡಿದ ಆಶಿಶ್ ಶೇಲಾರ್ ಅವರು, ಸುಧೀರ್ ಮುಂಗಂತಿವಾರ್ ಮಗಳ ಮದುವೆಗೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ಹಾಗೆಯೇ ಶಾಸಕ ಸುರೇಶ್ ಖಾಡೆ ಅವರ ಸಹೋದರ ನಿಧನರಾಗಿದ್ದರಿಂದ ಸಭೆಯಲ್ಲಿ ಗೈರು ಆಗಿದ್ದರು ಎಂದರು.