ನಾಗಪುರ: ಮಹಾರಾಷ್ಟ್ರದ ವಿರೋಧಪಕ್ಷದ ನಾಯಕನಾಗಿರುವ, ಮಾಜಿ ಮುಖ್ಯಮಂತ್ರಿ, ಬಿಜೆಪಿಯ ದೇವೇಂದ್ರ ಫಡ್ನವೀಸ್; ಮಹತ್ವದ ರಾಜಕೀಯ ದಾಳವೊಂದನ್ನು ಉರುಳಿಸಿದ್ದಾರೆ.
ಮಹಾರಾಷ್ಟ್ರದ ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸ್ಥಳೀಯಸಂಸ್ಥೆಗಳ ಚುನಾವಣೆಯಲ್ಲಿ ಮೀಸಲಾತಿ ಸಿಗುವವರೆಗೆ ಹೋರಾಡುತ್ತೇನೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಒಬಿಸಿಗೆ ಮೀಸಲಾತಿ ಜಾರಿ ಮಾಡಲಾಗುತ್ತದೆ. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆಂದು ಫಡ್ನವೀಸ್ ಹೇಳಿದ್ದಾರೆ!
ಈ ವಿಷಯಕ್ಕೆ ಸಂಬಂಧಿಸಿದಂತೆ ಅವರ ನೇತೃತ್ವದಲ್ಲಿ ಶನಿವಾರ ನಾಗ್ಪುರ ವೆರೈಟಿ ಸ್ಕ್ವೇರ್‌ನಲ್ಲಿ ರಸ್ತೆ ತಡೆ ನಡೆದಿದೆ. ಹಾಗೆಯೇ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ (ಎಂವಿಎ) ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದಾರೆ. ಎಂವಿಎ ಸರ್ಕಾರ ಕೇಂದ್ರದತ್ತ ಬೆರಳು ತೋರಿಸುತ್ತಿದೆ. ಇದು ಪಕ್ಕಾ ಸುಳ್ಳು, ಈ ವಿಷಯವನ್ನು ಕಾನೂನು ಜಾರಿ ಮಾಡುವುದರ ಮೂಲಕ ರಾಜ್ಯದಲ್ಲೇ ನಿರ್ಧರಿಸಬಹುದು. ಅದನ್ನು ಮಾಡದಿರುವುದಕ್ಕೇ ಮಹಾರಾಷ್ಟ್ರವೊಂದನ್ನು ಹೊರತುಪಡಿಸಿ, ಉಳಿದೆಲ್ಲ ರಾಜ್ಯಗಳಲ್ಲಿ ಒಬಿಸಿ ಮೀಸಲು ಇದೆ ಎಂದಿದ್ದಾರೆ.
ಇದನ್ನೂ ಓದಿ :ತಮಿಳುನಾಡಿನ 21 ಜಿಲ್ಲೆಗಳಲ್ಲಿ 100 ರೂ. ದಾಟಿದೆ ಪೆಟ್ರೋಲ್ ದರ
ಒಬಿಸಿ ಮೀಸಲು ವಿಚಾರ ಸಂಬಂಧ ಚಕ್ಕಾ ಜಾಮ್ ನಡೆಸಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಪೊಲೀಸರು ಫಡ್ನವೀಸ್ ಸೇರಿದಂತೆ ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದು, ಬಿಡುಗಡೆ ಮಾಡಿದ್ದಾರೆ.