Advertisement
ಸಂಸತ್ತಿನ ಚುನಾವಣೆಗಳಲ್ಲಿ ಜಾತಿ ಧರ್ಮವನ್ನು ಮುಂದೆ ಮಾಡಿಕೊಂಡು ಮತ ಕೇಳಿದಂತೆ ಮಹಾರಾಷ್ಟ್ರದಲ್ಲಿ ಬಿಜೆಪಿ ರಾಷ್ಟ್ರ ನಾಯಕರು ಜಾತಿ ಧರ್ಮದ ಹೆಸರಲ್ಲಿ ಮತ ಕೇಳಿಕೊಂಡು ಓಡಾಡುತ್ತಿದ್ದಾರೆ ವಿನಹ ರೈತರ ಸಮಸ್ಯೆಗಳು ಅವರ ಉತ್ಪನ್ನಗಳ ಮೇಲೆ ಜಿಎಸ್‌ಟಿ ಹೇರಿಕೆ ಎಂಎಸ್ ಪಿ ಹಾಗೂ ರೈತರಿಗೆ ಉತ್ತಮ ಕೃಷಿ ಮಾಡಲು ಬೇಕಾದ ಉಪಕರಣಗಳನ್ನು ನೀಡದೆ ಇರುವುದು, ಮಧ್ಯಮ ವರ್ಗ ವ್ಯಾಪಾರಿ ವರ್ಗದ ಮೇಲೆ ಸೇರಿರುವ ಜಿಎಸ್‌ಟಿ ಕುರಿತು ಮಾತನಾಡದೆ ಇರುವುದು, ಇನ್ನೂ ಹಲವಾರು ವಿಚಾರಗಳನ್ನು ಬಿಟ್ಟು ಬಿಜೆಪಿ ಜಾತಿ ರಾಜಕಾರಣ ಮಾಡುತ್ತಿದೆ ಎಂದು ಆರೋಪ ಮಾಡಿದರು.
Related Articles
Advertisement
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ಸಿಗೆ ಉತ್ತಮ ಜನಬೆಂಬಲ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಮಾದರಿಯಂತೆ ಅಲ್ಲೂ ಕೂಡ ಐದು ಗ್ಯಾರಂಟಿಗಳನ್ನು ನಾವು ಈಗಾಗಲೇ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದೇವೆ. ಆದ್ದರಿಂದ ಗೆಲ್ಲುವ ವಿಶ್ವಾಸ ಉಂಟಾಗಿದೆ ಎಂದರು.
ಅದಾನಿ ವಿರುದ್ದ ಮಾತಾಡಿದರೆ ಪದೇ ಪದೇ ಮಾತನಾಡುತ್ತೀರಿ ಏನ್ನುತ್ತಾರೆ. ಅದಾನಿ ದೇಶವನ್ನು ಲೂಟಿ ಮಾಡುತ್ತಿದ್ದಾನೆ, ರಿಯಾಕ್ಷನರಿ ಸರ್ಕಾರಗಳಿಗೆ ಬೆಂಬಲ ಮಾಡುತ್ತಿದ್ದಾನೆ. ಇದನ್ನು ಬಳಕೆ ಮಾಡುವ ಬಿಜೆಪಿ ಯಾವ ಪಕ್ಷ ತತ್ವ ಸಿದ್ದಾಂತ ಮೇಲೆ ನಿಂತಿದೆ ಎಂದು ಪ್ರಶ್ನಿಸಿದ ಅವರು, ಇಂತಹ ಕ್ರೋನಿ ಕ್ಯಾಪಿಟಲ್ ಗೆ ಬೆಂಬಲಿಸಿಅವರ ಮುಖಾಂತರ ಹಣ ಪಡೆದು ಬಿಜೆಪಿಗರು ಚುನಾವಣೆ ಮಾಡುತಿದ್ದಾರೆ ಎಂದು ಆರೋಪ ಮಾಡಿದರು.
ಪ್ರಧಾನಿ ಮೋದಿ, ಅಮಿತ್ ಶಾ ಸಂಪತ್ತು ಇದ್ದವರನ್ನೇ ಬೆಳೆಸಲು ಮುಂದಾಗಿದ್ದಾರೆ. ಹಾಗಾಗಿ ಮಹಾರಾಷ್ಟ್ರ ದಲ್ಲಿ ಹಣವಂತರಿಗೆ ಮಣೆ ಹಾಕಿದ್ದು, ನಿಜವಾಗಿ ಕೆಲಸ ಮಾಡಿದವರು, ಟಿಕೆಟ್ ಭರವಸೆ ಇಟ್ಟುಕೊಂಡವರು, ಜನತಂತ್ರ ನಂಬಿದವರಿಗೆ ನಿರಾಶೆಯಾಗಿದೆ ಎಂದರು.
ರಜಾಕಾರರ ದಾಳಿ ಸಂದರ್ಭದಲ್ಲಿ ಖರ್ಗೆ ಕುಟುಂಬದ ಬಗ್ಗೆ ಹೇಳಿಕೆ ವಿಚಾರವಾಗಿ ಯೋಗಿ ಹೇಳಿಕೆಗೆ ಪ್ರತಿಕ್ರಿಯೆ ನೀಡದ ಮಲ್ಲಿಕಾರ್ಜುನ ಖರ್ಗೆ, ಈಗಾಗಲೇ ಅವರ ಹೇಳಿಕೆಗೆ ಉತ್ತರ ಕೊಟ್ಟಿದ್ದೆನೆ ಮತ್ತೆ ಮಾತನಾಡುವುದಿಲ್ಲ ಎಂದರು.
ಕಾಂಗ್ರೆಸ್ ನಲ್ಲಿ ಮೀಸಲಾತಿ ಗೊಂದಲವಿದೆ ಎನ್ನುವ ಪ್ರಧಾನಿ ಮೋದಿ ಆರೋಪಕ್ಕೆ ತಿರುಗೇಟು ನೀಡಿದ ಖರ್ಗೆ, ಸಂವಿಧಾನ ತಂದ ಮೇಲೆ ಸುಟ್ಟು ಹಾಕಿರುವುದು ಅವರೇ ಅಲ್ಲವೇ? ರಾಮಲೀಲಾ ಮೈದಾನದಲ್ಲಿ ಸಂವಿಧಾನ ಒಪ್ಪದೆ ಸುಟ್ಟು ಹಾಕಿದವರು ತಿರಂಗಾ ದ್ವಜವನ್ನು ಕೂಡ ಒಪ್ಪಿಲ್ಲ. ಈಗ ಸಂವಿಧಾನ, ಮೀಸಲಾತಿ ಮಾತನಾಡುತ್ತಿರುವುದು ನಗೆ ಪಾಟಲಿನ ವಿಚಾರ ಎಂದರು.