Advertisement

Maharashtra Election: ಬಿಜೆಪಿ 150, ಶಿಂಧೆ 80, ಅಜಿತ್‌ಪಕ್ಷ 55 ಕ್ಷೇತ್ರದಲ್ಲಿ ಸ್ಪರ್ಧೆ?

11:34 PM Sep 10, 2024 | Team Udayavani |

ಮುಂಬೈ: ಮಹಾರಾಷ್ಟ್ರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಸಂಬಂಧ ಬಿಜೆಪಿ, ಏಕನಾಥ ಶಿಂಧೆ ನೇತೃತ್ವದ ಶಿವಸೇನೆ, ಅಜಿತ್‌ ಪವಾರ್‌ ಬಣದ ಎನ್‌ಸಿಪಿಯನ್ನೊಳಗೊಂಡ ಮಹಾಯುತಿ ಮೈತ್ರಿಕೂಟ ಸೀಟು ಹಂಚಿಕೆ ಚರ್ಚೆಯಲ್ಲಿ ತೊಡಗಿವೆ.

Advertisement

288 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ 140 ರಿಂದ 150 ಸ್ಥಾನಗಳಲ್ಲಿ ಸ್ಪರ್ಧಿಸಬಹುದು ಎನ್ನಲಾಗಿದೆ. ಏಕನಾಥ್‌ ಶಿಂಧೆ ನೇತೃತ್ವದ ಶಿವಸೇನೆ 80, ಅಜಿತ್‌ ಪವಾರ್‌ ಎನ್‌ಪಿಸಿಗೆ 55 ಕ್ಷೇತ್ರಗಳು ಸಿಗಬಹುದು. ಸಣ್ಣ ಮಿತ್ರಪಕ್ಷ ಗಳಿಗೆ 3 ಸ್ಥಾನಗಳನ್ನು ಬಿಟ್ಟುಕೊಡಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ.

ಡಿಸಿಎಂ ಅಜಿತ್‌ ಪವಾರ್‌ ಬಣದಲ್ಲಿ 41 ಶಾಸಕರು ಇದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದ 48 ಲೋಕಸಭಾ ಕ್ಷೇತ್ರಗಳ ಪೈಕಿ 30ನ್ನು ಎಂವಿಎ ಮೈತ್ರಿಕೂಟ ಗೆದ್ದುಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next