ಮಹಾರಾಷ್ಟ್ರ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಶರದ್ ಪವಾರ್ ಅವರ ಭದ್ರಕೋಟೆಯಾಗಿರುವ ಬಾರಾಮತಿಯಲ್ಲಿ ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪೋಸ್ಟರ್‌ಗಳು ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿವೆ.
ಚುನಾವಣಾ ಫಲಿತಾಂಶ ಏನೇ ಬಂದರೂ ಅಜಿತ್ ಪವಾರ್ ಮಹಾರಾಷ್ಟ್ರದ ಕಿಂಗ್ ಮೇಕರ್ ಆಗಲಿದ್ದಾರೆ ಎಂದು ಅಜಿತ್ ಪವಾರ್ ಪಕ್ಷದ ನಾಯಕ ಅಮೋಲ್ ಮಿಟ್ಕರಿ ಹೇಳಿದ್ದು. ಅಜಿತ್ ಪವಾರ್ ಮುಖ್ಯಮಂತ್ರಿಯಾಗುವ ಎಲ್ಲ ಸಾಮರ್ಥ್ಯವಿರುವ ನಾಯಕ ಎಂದು ಬ್ಯಾನರ್ ಹೇಳುತ್ತಿದೆ ಅಲ್ಲದೆ ಹಾಕಲಾದ ಬ್ಯಾನರ್ ನಲ್ಲಿ ಸತತ ಎಂಟನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಅಜಿತ್ ಪವಾರ್ ಅವರಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದೆ.
ಅದೇ ವೇಳೆ ಅಜಿತ್ ಪವಾರ್ ಬಾರಾಮತಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ. ಎದುರಾಳಿ ಅಭ್ಯರ್ಥಿ ಎನ್‌ಸಿಪಿ (ಎಸ್‌ಪಿ) ಯುಗೇಂದ್ರ ಪವಾರ್ ಅವರು ಅಜಿತ್ ಪವಾರ್ ಅವರ ಸಹೋದರ ಶ್ರೀನಿವಾಸ್ ಪವಾರ್ ಅವರ ಪುತ್ರ. ಪವಾರ್ ಕುಟುಂಬದ ಭದ್ರಕೋಟೆಯಲ್ಲಿ ಎಂಟನೇ ಬಾರಿಗೆ ಸ್ಪರ್ಧಿಸಲು ಬಯಸುತ್ತಿರುವ ಅಜಿತ್ ಪವಾರ್ ಅವರು ಗೆಲುವಿನ ವಿಶ್ವಾಸ ಹೊಂದಿದ್ದಾರೆ.
ಈ ನಡುವೆ ನಗರದಲ್ಲಿ ರಾರಾಜಿಸುತ್ತಿರುವ ಬ್ಯಾನರ್ ಬಾರಿ ಚರ್ಚೆಗೆ ಗ್ರಾಸವಾಗಿದೆ.