Advertisement
ಮಹಾರಾಷ್ಟ್ರ ಸಚಿವಾಲಯದಲ್ಲಿ ಧಂಗಾರ್ ಸಮುದಾಯಕ್ಕೆ ಪರಿಶಿಷ್ಟ ಪಂಗಡದಡಿ ಮೀಸಲಾತಿ ಕಲ್ಪಿಸಬೇಕೆಂದು ಡೆಪ್ಯುಟಿ ಸ್ಪೀಕರ್ ನರಹರಿ ಸೇರಿದಂತೆ ಹಲವು ಬುಡಕಟ್ಟು ಶಾಸಕರು ಆಗ್ರಹಿಸಿ ಕಟ್ಟಡದ 3ನೇ ಮಹಡಿಯಿಂದ ಹಾರಿದ್ದರು. ಆದರೆ ಅವರಿಗೆ ಯಾವುದೇ ಜೀವಹಾನಿ ಸಂಭವಿಸಿಲ್ಲ. ಅದಕ್ಕೆ ಕಾರಣ ಸುರಕ್ಷತೆಗಾಗಿ ಕಟ್ಟಿದ್ದ ನೆಟ್ ನೊಳಗೆ (ಬಲೆ) ಬಿದ್ದಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.
ಮುಂಬರುವ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿದ್ದ ಮಹಾರಾಷ್ಟ್ರ ಸರ್ಕಾರ ಇತ್ತೀಚೆಗೆ ಧಂಗಾರ್ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಸ್ಥಾನಮಾನ ನೀಡಲು ಸಿದ್ಧತೆ ನಡೆಸಿತ್ತು. ಜೀರ್ವಾಲ್ ಹಿರಿಯ ಬುಡಕಟ್ಟು ಶಾಸಕರಾಗಿದ್ದು, ಅವರು ದಿಂಡೋರಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಎಸ್ ಟಿ ಸ್ಥಾನಮಾನದ ವಿಚಾರದಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಜೀರ್ವಾಲ್ ಆರೋಪಿಸಿದ್ದಾರೆ.