Advertisement

ಕೋವಿಡ್ 19 ಔಷಧ-ಕೋವಿಫಾರ್: ಮೊದಲ ಹಂತದಲ್ಲಿ ಮಹಾರಾಷ್ಟ್ರ ಸೇರಿ ಐದು ರಾಜ್ಯಗಳಿಗೆ ರವಾನೆ

06:03 PM Jun 25, 2020 | Nagendra Trasi |

ನವದೆಹಲಿ:ಕೋವಿಡ್ 19 ವೈರಸ್ ಪೀಡಿತರನ್ನು ಗುಣಮುಖರಾಗಿಸಲು ಪರೀಕ್ಷಾರ್ಥವಾಗಿ ರೆಮ್ ಡಿಸಿವಿರ್ ಔಷಧ ತಯಾರಿಸಲು ಹಾಗೂ ಮಾರುಕಟ್ಟೆಗೆ ಬಿಡುಗಡೆ ಮಾಡಲು ಹೈದರಾಬಾದ್ ಮೂಲದ ಔಷಧ ತಯಾರಿಕಾ ಕಂಪನಿ ಹೆಟೇರೋಗೆ ಅನುಮತಿ ದೊರೆತಿದ್ದು, ಈ ಹಿನ್ನೆಲೆಯಲ್ಲಿ ಮೊದಲ ಹಂತವಾಗಿ ಮಹಾರಾಷ್ಟ್ರ ಮತ್ತು ದೆಹಲಿ ಸೇರಿದಂತೆ ಐದು ರಾಜ್ಯಗಳಿಗೆ 20ಸಾವಿರ ಬಾಟಲಿ ಔಷಧಿಯನ್ನು ರವಾನಿಸುವುದಾಗಿ ವರದಿ ತಿಳಿಸಿದೆ.

Advertisement

ಭಾರತದಲ್ಲಿ ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಅತೀ ಹೆಚ್ಚು ಕೋವಿಡ್ 19 ಪ್ರಕರಣ ಪತ್ತೆಯಾಗಿದೆ. Covifor in india ಬ್ರ್ಯಾಂಡ್ ಹೆಸರಿನಲ್ಲಿ ಈ ಔಷಧವನ್ನು ಬಿಡುಗಡೆ ಮಾಡಿದೆ. ಗುಜರಾತ್ ಮತ್ತು ತಮಿಳುನಾಡು, ಹೈದರಾಬಾದ್ ಕೂಡಾ ಔಷಧವನ್ನು ಪಡೆದುಕೊಳ್ಳಲಿದೆ ಎಂದು ಹೇಳಿದೆ.

ಹೆಟೇರೋ ಪ್ರಕಟಣೆ ಪ್ರಕಾರ, 100 ಮಿಲಿಗ್ರಾಂ ಬಾಟಲಿ ಔಷಧಕ್ಕೆ 5,400 ರೂಪಾಯಿ ಎಂದು ತಿಳಿಸಿದೆ. ವಯಸ್ಕರು ಮತ್ತು ಮಕ್ಕಳಿಗೆ ಮೊದಲ ದಿನ 200 ಮಿಲಿ ಗ್ರಾಂ ಔಷಧ ನೀಡಬೇಕಾಗಿದ್ದು, ನಂತರ ಐದು ದಿನಗಳವರೆಗೆ 100 ಗ್ರಾಂನಂತೆ ಔಷಧ ನೀಡಲು ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದೆ.

ಕೋಲ್ಕತಾ, ಇಂದೋರ್, ಭೋಪಾಲ್, ಲಕ್ನೋ, ಪಾಟ್ನಾ, ಭುವನೇಶ್ವರ್, ರಾಂಚಿ, ವಿಜಯವಾಡ, ಕೊಚ್ಚಿ, ತಿರುವನಂತಪುರಂ ಮತ್ತು ಗೋವಾಕ್ಕೆ 2ನೇ ಹಂತದಲ್ಲಿ ಔಷಧ ರವಾನಿಸುವುದಾಗಿ ತಿಳಿಸಿದೆ. ಇನ್ನು ಮೂರು ನಾಲ್ಕು ವಾರಗಳಲ್ಲಿ ಕಂಪನಿ ಒಂದು ಲಕ್ಷ ಔಷಧದ ಬಾಟಲಿ ಉತ್ಪಾದಿಸುವ ಗುರಿ ಹೊಂದಿರುವುದಾಗಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next