Advertisement

2 ಮಹಾ ನಗರಸಭೆಗಳಲ್ಲಿ ಬಿಜೆಪಿ ಜಯಭೇರಿ

06:00 AM Aug 04, 2018 | |

ಮುಂಬೈ: ಮಹಾರಾಷ್ಟ್ರದ ಸಾಂಗ್ಲಿ ಹಾಗೂ ಜಲಗಾಂವ್‌ ನಗರ ಸಭೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಜಲಗಾಂವ್‌ ಅನ್ನು ಎರಡನೇ ಅವಧಿಗೆ ಬಿಜೆಪಿ ಗೆದ್ದುಕೊಂಡಿದ್ದರೆ, ಸಾಂಗ್ಲಿಯನ್ನು ಕಾಂಗ್ರೆಸ್‌ ಕೈಯಿಂದ ಕಿತ್ತುಕೊಂಡಿದೆ. 75 ವಾರ್ಡ್‌ಗಳ, ಉತ್ತರ ಮಹಾರಾಷ್ಟ್ರದ ಜಲಗಾಂವ್‌ ನಗರಸಭೆಯಲ್ಲಿ ಬಿಜೆಪಿ 57 ವಾರ್ಡ್‌ಗಳನ್ನು ಗೆದ್ದುಕೊಂಡಿದೆ.  ಶಿವಸೇನೆ 15 ವಾರ್ಡ್‌ಗಳಲ್ಲಿ ಜಯ ಗಳಿಸಿದೆ. ಕಾಂಗ್ರೆಸ್‌ ಹಾಗೂ ಎನ್‌ಸಿಪಿ ಶೂನ್ಯ ಸಾಧನೆಗೈದಿವೆ.

Advertisement

ಇದೇ ವೇಳೆ 78 ವಾರ್ಡ್‌ಗಳ, ಪಶ್ಚಿಮ ಮಹಾರಾಷ್ಟ್ರದ ಸಾಂಗ್ಲಿ-ಮೀರಜ್‌-ಕುಪ್ವಾಡ್‌ ನಗರಸಭೆಯಲ್ಲಿ ಬಿಜೆಪಿ 41 ವಾರ್ಡ್‌ಗಳನ್ನು ತನ್ನದಾಗಿಸಿದೆ. ಕಳೆದ ಬಾರಿ ಕಾಂಗ್ರೆಸ್‌ 41 ವಾರ್ಡ್‌ಗಳ ಹಿಡಿತ ಹೊಂದಿದ್ದ ಈ ನಗರಸಭೆಯಲ್ಲಿ ಬಿಜೆಪಿ ಒಂದೂ ವಾರ್ಡ್‌ನಲ್ಲಿ ಗೆದ್ದಿರಲಿಲ್ಲ. ಈ ಬಾರಿ ಕಾಂಗ್ರೆಸ್‌ 20ರಲ್ಲಷ್ಟೇ ಗೆದ್ದಿದೆ. ಎನ್‌ಸಿಪಿ 15ರಲ್ಲಿ ಜಯ ಸಾಧಿಸಿದೆ. ಶಿವಸೇನೆ ಶೂನ್ಯ ಸಾಧನೆಗೈದಿದೆ. ಶಿವಸೇನೆ ಯೊಂದಿಗೆ ಮೈತ್ರಿ ಮಾಡಿಕೊಳ್ಳದೆ ಬಿಜೆಪಿ ಎರಡೂ ಕಡೆ ಜಯಭೇರಿ ಬಾರಿಸಿದ್ದರೆ, ಕಾಂಗ್ರೆಸ್‌ ಹಾಗೂ ಎನ್‌ಸಿಪಿ ಚು ನಾವಣಾಪೂರ್ವ ಮೈತ್ರಿ ಮಾಡಿಕೊಂಡರೂ ಮುಗ್ಗರಿಸಿವೆ.
 

Advertisement

Udayavani is now on Telegram. Click here to join our channel and stay updated with the latest news.

Next