Advertisement

ಮುಂಬೈ ಜನತೆಗೆ 10ರೂ.ಗೆ ಭರ್ಜರಿ ಊಟ: ಶಿವಸೇನಾ ನೇತೃತ್ವದ ಮಹಾ ವಿಕಾಸ್ ಅಘಾಡಿಯ ನೂತನ ಯೋಜನೆ

10:16 AM Dec 22, 2019 | Mithun PG |

ಮುಂಬೈ: ಬೃಹತ್  ಮುಂಬಯಿ ಮಹಾನಗರ ಪಾಲಿಕೆ(ಬಿಎಂಸಿ) ತನ್ನ ನೌಕರರಿಗೆ 10. ರೂ ಗಳಿಗೆ ಊಟ ಕೊಡುವ ಯೋಜನೆಯನ್ನು ಜಾರಿಗೊಳಿಸಿದೆ. ಮಾತ್ರವಲ್ಲದೆ ನಗರದ ಜನತೆಗೂ ಈ ಯೋಜನೆಯನ್ನು ವಿಸ್ತರಿಸಲಾಗುವುದು ಮೇಯರ್ ಕಿಶೋರಿ ಫೆಢ್ನೆಕರ್ ತಿಳಿಸಿದ್ದಾರೆ.

Advertisement

ಬಿಎಂಸಿ ಮೇಯರ್ ಕಿಶೋರಿ ಫೆಢ್ನೆಕರ್ ಈ ಯೋಜನೆಯನ್ನು ಉದ್ಘಾಟನೆ ಮಾಡಿದ್ದಾರೆ. 10 ರೂ ಗಳಿಗೆ ಎರಡು ಚಪಾತಿ, ಅನ್ನ, ದಾಲ್, 2 ರೀತಿಯ ತರಕಾರಿಯ ಖಾದ್ಯಗಳು ಸಿಗುತ್ತವೆ. ಪ್ರಮುಖವೆಂದರೇ ಶಿವಸೇನಾ ತನ್ನ ಪ್ರಣಾಳಿಕೆಯಲ್ಲಿ ಈ 10 ರೂ ಊಟದ ಯೋಜನೆಯನ್ನು ಜಾರಿಗೊಳಿಸುವುದಾಗಿ ಘೋಷಿಸಿತ್ತು. ಈಗಾಗಲೇ ಮುಂಬೈ ನಗರಪಾಲಿಕೆ ತನ್ನ ನೌಕರರಿಗೆ 10 ರೂ.  ಗೆ ಊಟ ಕೊಡುವ ಯೋಜನೆಯನ್ನು ಡಿಸೆಂಬರ್ 19 ರಂದೇ ಜಾರಿಗೊಳಿಸಿತ್ತು. ಇದನ್ನು ನಗರದ ನಾಗರಿಕರಿಗೆ ಕೂಡ ಸದ್ಯದಲ್ಲೇ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಎರಡು ದಿನದಲ್ಲಿ  ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಈ ಯೋಜನೆಯನ್ನು ಎಲ್ಲಾ ಜನರಿಗೂ ವಿಸ್ತರಿಸಲಾಗುವುದು ಎಂದು ಕ್ಯಾಂಟಿನ್ ಮಾಲಿಕರು ತಿಳಿಸಿದ್ಧಾರೆ. ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿಯ (ಶಿವಸೇನಾ, ಎನ್ ಸಿಪಿ, ಕಾಂಗ್ರೆಸ್) ಸಾಮಾನ್ಯ  ಪ್ರಣಾಳಿಕೆ ಯೋಜನೆ ಇದಾಗಿದ್ದು 10 ರೂ. ಗಳಿಗೆ ಊಟ ನೀಡುವುದಾಗಿ ಈ ಹಿಂದೆಯೇ ಘೋಷಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next