Advertisement

ಚಲಿಸುತ್ತಿರುವ ಬಸ್ ನೊಳಗೆ ಬಿಜೆಪಿ ಮುಖಂಡನ ರಾಸಲೀಲೆ; ವಿಡಿಯೋ ವೈರಲ್·

01:55 PM Jul 05, 2017 | Sharanya Alva |

ಮುಂಬೈ: ಚಲಿಸುತ್ತಿರುವ ಬಸ್ ನೊಳಗೆ ಬಲವಂತದಿಂದ ಕಿಸ್ ಕೊಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂಬ ಮಹಿಳೆಯ ಆರೋಪದಡಿಯಲ್ಲಿ ಮಹಾರಾಷ್ಟ್ರ ಬಿಜೆಪಿ ಮುಖಂಡ ರವೀಂದ್ರ ಬವಂಥಾಡೆಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.

Advertisement

ಚಂದ್ರಾಪುರ್ ಜಿಲ್ಲೆಯ ನಾಗ್ಭಿಡ್ ಶಾಲೆಯ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿರುವ ರವೀಂದ್ರ (48) ಚಲಿಸುತ್ತಿರುವ ಬಸ್ ನೊಳಗೆ ಮಹಿಳೆಯೊಬ್ಬರಿಗೆ ಕಿಸ್ ಕೊಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.  ಈ ಘಟನೆ ಗಡ್ ಚಿರೋಲಿಗೆ ತೆರಳುತ್ತಿರುವ ಬಸ್ ನಲ್ಲಿ ಜೂನ್ 27ರಂದು ನಡೆದಿತ್ತು.

ಮಹಿಳೆಯ ಆರೋಪದ ಪ್ರಕಾರ, ವಾಹನದೊಳಗೆ ರವೀಂದ್ರ ಅವರು  2 ಬಾರಿ ರೇಪ್ ಮಾಡಿದ್ದಾರೆ. ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ಬಸ್ ನೊಳಗೆ ತನ್ನ ಮೇಲೆ ರೇಪ್ ನಡೆಸಿರುವುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ. ರವೀಂದ್ರ ಕೂಡಾ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿರುವುದಾಗಿ ಆಕೆ ತಿಳಿಸಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next