Advertisement

Maharashtra ವಿಧಾನಸಭಾ ಚುನಾವಣೆ: ಸಿದ್ಧತೆ ಪರಿಶೀಲಿಸಿದ ಚುನಾವಣ ಆಯೋಗ

06:01 PM Sep 28, 2024 | Team Udayavani |

ಮುಂಬಯಿ: ಮಾಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಸಲು ಚುನಾವಣ ಆಯೋಗ ಸಕಲ ಸಿದ್ಧತೆಗಳನ್ನು ನಡೆಸುತ್ತಿದ್ದು, ಶನಿವಾರ(ಸೆ28) ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಹತ್ವದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

Advertisement

ರಾಜೀವ್ ಕುಮಾರ್ ಅವರು ಚುನಾವಣ ಆಯುಕ್ತರಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಅವರ ಸಮ್ಮುಖದಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ಚುನಾವಣ ಸಿದ್ಧತೆಗಳ ಕುರಿತು ಮಹಾರಾಷ್ಟ್ರದ ಉನ್ನತ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು.

“ಮಹಾರಾಷ್ಟ್ರದಲ್ಲಿ ನಡೆಯಲಿರುವ ಮುಂಬರುವ ವಿಧಾನಸಭಾ ಚುನಾವಣೆಯ ಸಿದ್ಧತೆಗಾಗಿ ನಾವು ಇಲ್ಲಿಗೆ ಬಂದಿದ್ದು, ರಾಷ್ಟ್ರೀಯ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳ ಮುಖಂಡರನ್ನು ಭೇಟಿ ಮಾಡಿದ್ದೇವೆ. ಮಧ್ಯಸ್ಥಗಾರರು, ಡಿಎಂ, ಪೊಲೀಸ್ ಆಯುಕ್ತರು, ಡಿಜಿಪಿ ಅವರೊಂದಿಗೆ ಮಾತುಕತೆ ನಡೆಸಿದ್ದೇವೆ”ಎಂದು ಮುಖ್ಯ ಚುನಾವಣ ಆಯುಕ್ತರು ತಿಳಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕುವಂತೆ ಆದೇಶಿಸಿದ್ದಾರೆ. ಇತ್ತೀಚಿನ ಲೋಕಸಭೆ ಚುನಾವಣೆಯಾ ವೇಳೆ ನಡೆದ ಚುನಾವಣ ಅಪರಾಧಗಳ ತನಿಖೆಯನ್ನು ತ್ವರಿತಗೊಳಿಸುವಂತೆ ರಾಜ್ಯ ಪೊಲೀಸರನ್ನು ಒತ್ತಾಯಿಸಿದ್ದಾರೆ.

ದೀಪಾವಳಿಯಂತಹ ಪ್ರಮುಖ ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು. ಪ್ರಜಾಪ್ರಭುತ್ವದ ಹಬ್ಬಕ್ಕೆ ಮಹಾರಾಷ್ಟ್ರ ಕೊಡುಗೆ ನೀಡುತ್ತದೆ ಎಂಬ ವಿಶ್ವಾಸ ನನಗಿದೆ ಎಂದರು. ಮುಂದಿನ ತಿಂಗಳು ಚುನಾವಣೆ ದಿನಾಂಕ ಘೋಷಣೆಯಾಗುವ ನಿರೀಕ್ಷೆ ಇದೆ.

Advertisement

ರಾಜಕೀಯ ಪಕ್ಷಗಳ ಬಲಾಬಲ

288 ಸದಸ್ಯ ಬಲದ ಸದನದಲ್ಲಿ ಬಿಜೆಪಿ ಸದ್ಯ ಹೆಚ್ಚಿನ ಶಾಸಕರ ಬಲ ಹೊಂದಿದ್ದು, ಶಿವಸೇನೆ ನಾಯಕ ಏಕನಾಥ್ ಶಿಂಧೆ ನೇತೃತ್ವದಲ್ಲಿ ಮಹಾಯುತಿ (ಎನ್ ಡಿಎ) ಸರಕಾರ ಮುನ್ನಡೆಸುತ್ತಿದೆ. ಬಿಜೆಪಿ 102 ಶಾಸಕರನ್ನು ಹೊಂದಿದ್ದು, ಶಿಂಧೆ ಸೇನೆ 38, ಅಜಿತ್ ಪವಾರ್ ಬಣದ ಎನ್ ಸಿಪಿ 40 ಶಾಸಕರ ಬಲ ಸರ್ಕಾರಕ್ಕಿದೆ.ಮೈತ್ರಿಕೂಟದ ಒಟ್ಟು 202 ಶಾಸಕರ ಭರ್ಜರಿ ಬಹುಮತದೊಂದಿಗೆ ಸರಕಾರ ಮುನ್ನಡೆಸುತ್ತಿದೆ. ಇಷ್ಟು ಬಲವಿದ್ದರೂ ಲೋಕಸಭಾ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ರಣತಂತ್ರದ ಎದುರು ಮೈತ್ರಿಕೂಟ ಹಿನ್ನಡೆ ಅನುಭವಿಸಿತ್ತು.

ವಿಪಕ್ಷ ಮಹಾ ವಿಕಾಸ್ ಅಘಾಡಿಯಲ್ಲಿ ಸದ್ಯ 71 ಶಾಸಕರ ಬಲವಿದೆ. ಕಾಂಗ್ರೆಸ್ 37, ಶಿವಸೇನೆ (ಉದ್ಧವ್ ಠಾಕ್ರೆ ಬಣ) 16, ಶರದ್ ಪವರ್ ಎನ್ ಸಿಪಿ 12 ಶಾಸಕರನ್ನು ಹೊಂದಿದೆ. ಸದ್ಯ 15 ಸ್ಥಾನಗಳು ಖಾಲಿ ಇದ್ದು, ಇಬ್ಬರು ಓವೈಸಿ ಅವರ ಎಐಎಂಐಎಂ ಶಾಸಕರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next