ಬೆಂಗಳೂರು: ಮೈಸೂರು ವಾರಿಯರ್ ಮಹಾರಾಜ ಟ್ರೋಫಿ ಕ್ರಿಕೆಟ್ ಕೂಟದ ಫೈನಲ್‌ಗೆ ಲಗ್ಗೆ ಹಾಕಿದೆ. ಶನಿವಾರ (ಆ 31)ನಡೆದ 2ನೇ ಸೆಮಿಫೈನಲ್‌ನಲ್ಲಿ ಅದು ಹುಬ್ಬಳ್ಳಿ ಟೈಗರ್ ವಿರುದ್ಧ 9 ರನ್ ಜಯ ಸಾಧಿಸಿತು.
ಮೈಸೂರು 8 ವಿಕೆಟಿಗೆ 177 ರನ್ ಪೇರಿಸಿದರೆ, ಹುಬ್ಬಳ್ಳಿ 5 ವಿಕೆಟಿಗೆ 168 ರನ್ ಮಾಡಿ ಸೋಲು ಅನುಭವಿಸಿತು. ರವಿವಾರದ ಫೈನಲ್‌ನಲ್ಲಿ ಬೆಂಗಳೂರು-ಮೈಸೂರು ಮುಖಾಮುಖಿ ಆಗಲಿವೆ.
ಮೊದಲ ಸೆಮಿಫೈನಲ್‌ನಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಬೆಂಗಳೂರು ಬ್ಲಾಸ್ಟರ್ ಫೈನಲ್ ಪ್ರವೇಶಿಸಿತ್ತು.
ಮೈಸೂರು ಪರ ಎಸ್‌ಯು ಕಾರ್ತಿಕ್ 53, ಶ್ರೀನಿವಾಸ್ ಶರತ್ 26, ಸುಮಿತ್ ಕುಮಾರ್ 18, ಮನೋಜ್ ಭಾಂಡಗೆ 26, ಹರ್ಷಿಲ್ ಧರ್ಮನಿ 14, ಕೆ ಗೌತಮ್ ಔಟಾಗದೆ 10, ವಿದ್ಯಾಧರ್ ಪಾಟೀಲ್ ಔಟಾಗದೆ 11 ರನ್ ಗಳಿಸಿದರು.ಎಲ್ ಆರ್ ಕುಮಾರ್ 3 ವಿಕೆಟ್ ಕಿತ್ತರು.
ಹುಬ್ಬಳ್ಳಿ ಪರ ತಿಪ್ಪಾ ರೆಡ್ಡಿ 33, ಕೃಷ್ಣನ್ ಶ್ರೀಜಿತ್20, ಕೊನೆಯಲ್ಲಿ ಕಾರ್ತಿಕೇಯ ಕೆಪಿ ಔಟಾಗದೆ 61 ರನ್ , ಮನ್ವಂತ್ ಕುಮಾರ್ ನಾಟ್ ಔಟಾಗದೆ 21 ರನ್ ಗಳಿಸಿದರೂ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ.ಮನೀಶ್ ಪಾಂಡೆ 6 ರನ್ ಗೆ ಔಟಾದರು. ಕೆ ಗೌತಮ್ 3 ವಿಕೆಟ್ ಕಬಳಿಸಿದರು.