Advertisement
ಮೊದಲು ಬ್ಯಾಟಿಂಗ್ ನಡೆಸಿದ ಹುಬ್ಬಳ್ಳಿ, ಆರಂಭಕಾರ ಲವ್‌ನೀತ್ ಸಿಸೋಡಿಯಾ ಅವರ ಶತಕ ಸಾಹಸ ದಿಂದ 7 ವಿಕೆಟಿಗೆ 185 ರನ್ ಬಾರಿಸಿತು. ಜವಾಬಿತ್ತ ಮೈಸೂರು 18.5 ಓವರ್‌ಗಳಲ್ಲಿ 4 ವಿಕೆಟಿಗೆ 188 ರನ್ ಹೊಡೆದು ಜಯ ಸಾಧಿಸಿತು. ಇದು 5 ಪಂದ್ಯಗಳಲ್ಲಿ ಮೈಸೂರಿಗೆ ಒಲಿದ 4ನೇ ಜಯ.
ಚೇಸಿಂಗ್ ವೇಳೆ ಮೈಸೂರು ವಾರಿಯರ್ ಆರಂಭಿಕರಾದ ರವಿ ಕುಮಾರ್ ಸಮರ್ಥ್ ಮತ್ತು ಅಜಿತ್ ಕಾರ್ತಿಕ್ ಗಟ್ಟಿಮುಟ್ಟಾದ ಬುನಾದಿ ನಿರ್ಮಿಸಿದರು. ಪವರ್ ಪ್ಲೇಯಲ್ಲಿ 68 ರನ್ ರಾಶಿ ಹಾಕಿದರು. ಸಮರ್ಥ್ 42 ಎಸೆತಗಳಿಂದ ಸರ್ವಾಧಿಕ 73 ರನ್ ಹೊಡೆದರೆ (6 ಬೌಂಡರಿ, 3 ಸಿಕ್ಸರ್), ಅಜಿತ್ ಕಾರ್ತಿಕ್ 29 ರನ್ ಮಾಡಿದರು. ನಾಯಕ ಕರುಣ್ ನಾಯರ್ ಕೂಡ ಹಿಂದುಳಿಯಲಿಲ್ಲ. 25 ಎಸೆತ ಎದುರಿಸಿ 41 ರನ್ ಕೊಡುಗೆ ಸಲ್ಲಿಸಿದರು (3 ಸಿಕ್ಸರ್, 1 ಬೌಂಡರಿ). 15ನೇ ಓವರ್‌ನಲ್ಲಿ ನಾಯರ್, ಲಂಕೇಶ್ ಮತ್ತು ಸಮರ್ಥ್ ವಿಕೆಟ್ ಒಟ್ಟೊಟ್ಟಿಗೆ ಬಿದ್ದಾಗ ಹುಬ್ಬಳ್ಳಿ 6ನೇ ಜಯದ ನಿರೀಕ್ಷೆಯಲ್ಲಿದ್ದುದು ಸುಳ್ಳಲ್ಲ. ಆದರೆ 5ನೇ ವಿಕೆಟಿಗೆ ಜತೆ ಗೂಡಿದ ಶೋಯಿಮ್ ಮೆನೇ ಜರ್ (ಅಜೇಯ 21) ಮತ್ತು ಶಿವಕು ಮಾರ್ ರಕ್ಷಿತ್ (ಅಜೇಯ 22) 4.1 ಓವರ್‌ಗಳಲ್ಲಿ 45 ರನ್ ಒಟ್ಟುಗೂಡಿಸಿ ಹುಬ್ಬಳ್ಳಿ ಮೊತ್ತವನ್ನು ಹಿಂದಿಕ್ಕಿದರು.
Related Articles
ಪಂದ್ಯಶ್ರೇಷ್ಠ: ಆರ್. ಸಮರ್ಥ್.
Advertisement
ಮಂಗಳೂರು ಪರಾಭವದ್ವಿತೀಯ ಪಂದ್ಯದಲ್ಲಿ ಮಂಗ ಳೂರು ಡ್ರ್ಯಾಗನ್ಸ್ ಹಾಲಿ ಚಾಂಪಿ ಯನ್ ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧ 5 ವಿಕೆಟ್ ಸೋಲನುಭವಿಸಿತು. ಬ್ಯಾಟಿಂಗ್ ವೈಫಲ್ಯ ಕಂಡ ಮಂಗಳೂರು 9 ವಿಕೆಟಿಗೆ ಕೇವಲ 120 ರನ್ ಗಳಿಸಿದರೆ, ಗುಲ್ಬರ್ಗ 17.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 121 ರನ್ ಬಾರಿಸಿತು.