Advertisement

ಮಹಾಂತೇಶ್ವರರ ಮಹಾ ರಥೋತ್ಸವ

12:30 PM Mar 07, 2019 | Team Udayavani |

ಶಹಾಪುರ: ತಾಲೂಕಿನ ದೋರನಹಳ್ಳಿ ಗ್ರಾಮದ ಬೆಟ್ಟದ ಶ್ರೀ ಮಹಾಂತೇಶ್ವರರ ಮಹಾ ರಥೋತ್ಸವವು ಸಂಭ್ರಮದಿಂದ ಭಕ್ತರ ಜಯಘೋಷ ಮಧ್ಯ ಬುಧವಾರ ಸಂಜೆ ಜರುಗಿತು.

Advertisement

ಭಕ್ತಾ ದಿಗಳ ಹರ್ಷೋದ್ಘಾರ ನಡುವೆ ಶ್ರೀ ಮಠದ ಸಾವಿರದ ದೇವರು ಶ್ರೀ ಮಹಾಂತ ಶಿವಾಚಾರ್ಯರು, ಚಿಕ್ಕಮಠದ ಶಿವಲಿಂಗ ಶಿವಾಚಾರ್ಯರಯ ಮತ್ತು ಶಹಾಪುರ ಫಕಿರೇಶ್ವರ ಮಠದ ಶ್ರೀಗಳ ಸಮ್ಮುಖದಲ್ಲಿ ರಥೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.

ನೆರದ ಭಕ್ತಾದಿಗಳು ಉತ್ತತ್ತಿ, ಬಾಳೆಹಣ್ಣು ರಥೋತ್ಸವ ಮೇಲೆ ಭಕ್ತಿಪೂರ್ವಕವಾಗಿ ಎಸೆದು ತಮ್ಮ ಬೇಡಿಕೆ ಈಡೇರಿಕೆಗೆ ಪ್ರಾರ್ಥನೆ ಸಲ್ಲಿಸಿದರು. ರಥೋತ್ಸವ ಅಂಗವಾಗಿ ಮಹಾಂತೇಶ್ವರ ಶ್ರೀ ಮಠದ ಮಹಾಂತೇಶ್ವರರ ಕತೃ ಗದ್ದುಗೆಗೆ ಬೆಳಗ್ಗೆಯಿಂದ ನೈವೇದ್ಯ ಕರ್ಪೂರ ಅರ್ಪಿಸಿ ದರ್ಶನ ಪಡೆದಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next