Advertisement

ಟಿ20 ಬಾಂಗ್ಲಾ ಕ್ರಿಕೇಟ್ ಟೂರ್ನಿಗೆ ವಿಜಯಪುರದ ಚಲುವಾದಿ ಆಯ್ಕೆ

06:43 PM Mar 21, 2022 | Team Udayavani |

ವಿಜಯಪುರ : ದಿವ್ಯಾಂಗರ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ವಿಜಯಪುರ ಜಿಲ್ಲೆಯ ಮಹಾಂತೇಶ ಚಲವಾದಿ, ಟಿ-20 ಟೂರ್ನಾಮೆಂಟ್‍ನಲ್ಲಿ ಪಾಲ್ಗೊಳ್ಳಲು ಬಾಂಗ್ಲಾದೇಶಕ್ಕೆ ಪ್ರಯಣ ಬೆಳಸಲಿದ್ದಾರೆ.

Advertisement

ಭಾರತೀಯ ಅಂಗವಿಕಲರ ದಿವ್ಯಾಂಗ ಕ್ರಿಕೆಟ್ ಕಂಟ್ರೋಲ್ ಬೋರ್ಡ್ ಆಫ್ ಇಂಡಿಯಾ ಬಾಂಗ್ಲಾದೇಶದಲ್ಲಿ ನಡೆಯಲಿರುವ ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ನೇಪಾಳ ಮಧ್ಯೆ ನಡೆಯುವ ಪಂದ್ಯಾವಳಿಗೆ ಆಲ್‍ರೌಂಡರ್ ಮಹಾಂತೇಶ ಛಲವಾದಿ ಅವರನ್ನು ಆಯ್ಕೆ ಮಾಡಲಾಗಿದೆ. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಅಂಬಳನೂರ ಗ್ರಾಮದ ಮಹಾಂತೇಶ ವೀರಬಸಪ್ಪ ಚಲುವಾದಿ, ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಮಾ.27 ರಿಂದ 31 ವರೆಗೆ ಬಾಂಗ್ಲಾದೇಶದಲ್ಲಿ ನಡೆಯಲಿರುವ ಟೂರ್ನಾಮೆಂಟ್ ಕ್ರಿಕೆಟನಲ್ಲಿ ನಮ್ಮ ಭಾರತ ದೇಶದಿಂದ ಮಹಾಂತೇಶ ವೀರಬಸಪ್ಪ ಚಲುವಾದಿ ಆಲ್‍ರೌಂಡರ್ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ.

ವಿಜಯಪುರದ ಬಸವರಾಜ ಇಜೇರಿ ಅವರ ಮಾರ್ಗದರ್ಶದಲ್ಲಿ ಕ್ರಿಕೆಟ್ ತರಬೇತಿ ಪಡೆದಿರುವ ಮಹಾಂತೇಶ, ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ಹೂವಿನಹಿಪ್ಪರಗಿ ಶಾಖೆಯಲ್ಲಿ ಜವಾನರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ :60 ಮೆಡಿಕಲ್ ಕಾಲೇಜುಗಳಲ್ಲಿ ಉಕ್ರೇನ್ ನಿಂದ ಹಿಂದಿರುಗಿದ ವಿದ್ಯಾರ್ಥಿಗಳ ಕಲಿಕೆ ಮುಂದುವರಿಕೆ

Advertisement

ಮಹಾಂತೇಶ ಇವರ ಸಾಧನೆಗೆ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ, ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ, ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next